ನಮಸ್ಕಾರ ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರು 5 ಕೆ.ಜಿ ಅಕ್ಕಿಯನ್ನು ಸರ್ಕಾರದಿಂದ ಉಚಿತವಾಗಿ ಪಡೆಯುವ ಬದಲು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಸುಮಾರು ಶೇಕಡ 70ರಿಂದ ಶೇಕಡ 80ರಷ್ಟು ಜನ ರಾಜ್ಯದಲ್ಲಿ ಉಚಿತ ಅಕ್ಕಿಯನ್ನು ವಿತರಣೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಅನ್ನಭಾಗ್ಯ ಯೋಜನೆಯ ಮಹತ್ವದ ಅಪ್ಡೇಟ್ :
ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿ ಬದಲು ಹಣ ವಿತರಣೆ ಮಾಡುವ ಬಗ್ಗೆ ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ್ದು ಮಹತ್ವದ ಅಪ್ಡೇಟ್ ಅನ್ನು ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿ ದಂತೆ ನೀಡಿದ್ದಾರೆ. ಕೆಲವು ಕಡೆ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿ ಬೇಕು ಎಂದು ತಿಳಿಸಿದರೆ ಇನ್ನೂ ಕೆಲವು ಕಡೆ ಹಣವನ್ನೇ ಕೊಡುತ್ತಿರುವುದನ್ನು ಮುಂದುವರೆಸಿ ಎಂದು ಹೇಳುತ್ತಿದ್ದಾರೆ ಆದರೆ ಉಚಿತ ಅಕ್ಕಿಯನ್ನು ಪಡೆದುಕೊಳ್ಳಲು ಶೇಕಡ 70 ರಿಂದ 80 ರಷ್ಟು ಜನ ಬಯಸಿದ್ದಾರೆ ಹೀಗಾಗಿ ವಿತರಣೆಯ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಸಚಿವರು ರಾಜ್ಯದ ಜನತೆಗೆ ತಿಳಿಸಿದ್ದಾರೆ.
ಅಕ್ಕಿಯ ಬದಲು ಸದ್ಯದಲ್ಲಿಯೇ ಅಕ್ಕಿ ಬಿಡುಗಡೆ :
ಕುಟುಂಬದ ಸದಸ್ಯರಿಗೆ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ತಳ 5 ಕೆಜಿ ಅಕ್ಕಿಗೆ ಬದಲಾಗಿ 170 ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಆದರೆ ಇನ್ನು ಮುಂದೆ ರಾಜ್ಯ ಸರ್ಕಾರ ಅಕ್ಕಿಯನ್ನು ವಿತರಣೆ ಮಾಡಲು ಚಿಂತನೆ ನಡೆಸಿದೆ. ರಾಜ್ಯ ಸರ್ಕಾರವು ಆಂಧ್ರಪ್ರದೇಶ ತೆಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳಿಂದ ಖರೀದಿ ಮಾಡಲು ನಿರ್ಧರಿಸಿದ್ದೇವೆ. ಆದರೆ ಅಕ್ಕಿಗೆ ಬೆಲೆಯನ್ನು ನಿಗದಿಪಡಿಸಿಲ್ಲ ಈ ಬಾರಿ ಎಲ್ಲಾ ಕಡೆ, ಅಕ್ಕಿ ಬೆಳೆ ಕಡಿಮೆ ಆಗಿರುವ ಕಾರಣ ಫಲಾನುಭವಿಗಳಿಗೆ ಅಕ್ಕಿ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಆಹಾರ ಸಚಿವ ತಿಳಿಸಿದ್ದಾರೆ.
ಇದನ್ನು ಓದಿ : 2024ರ ಕೊನೆಯಲ್ಲಿ ಚಿನ್ನ ಹಾಗು ಬೆಳ್ಳಿ ದರದಲ್ಲಿ ಎಷ್ಟು ಏರಿಕ್ಕೆ ಆಗುತ್ತೆ ನೋಡಿ , ಕೂಡಲೇ ಖರೀದಿಸಿ
ಸಮರ್ಪಕವಾಗಿ ಅಕ್ಕಿಯನ್ನು ಒದಗಿಸುವವರೆಗೆ ಹಣ ಜಮಾ ಆಗುತ್ತದೆ :
ಫಲಾನುಭವಿಗಳ ಬ್ಯಾಂಕ್ ಖಾತೆಗೆ ಅಕ್ಕಿಯನ್ನು ಸಮರ್ಪಕವಾಗಿ ಒದಗಿಸುವವರಿಗೆ ಅಕ್ಕಿಯ ಬದಲು ಹಣವನ್ನೇ ಜನ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಒಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಕ್ಕಿಯನ್ನು ಪಡೆದುಕೊಳ್ಳಲು ಬಯಸುವವರು ಇನ್ನು ಸ್ವಲ್ಪ ದಿನ ಹಣವನ್ನೇ ಪಡೆದುಕೊಳ್ಳಬೇಕಾಗುತ್ತದೆ.
ಒಟ್ಟಾಗಿ ರಾಜ್ಯ ಸರ್ಕಾರವು ಹಣದ ಬದಲಾಗಿ ಅಕ್ಕಿಯನ್ನು ಸಾಕಷ್ಟು ಪ್ರಯತ್ನ ಮಾಡುತ್ತಿದ್ದು ಅಕ್ಕಿ ಸಿಗುವವರೆಗೂ ಹಣವನ್ನ ಪಡೆಯಬೇಕಾಗುತ್ತದೆ ಹಾಗಾಗಿ ಪ್ರತಿ ತಿಂಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನೇ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಧನ್ಯವಾದಗಳು.
ಇತರೆ ವಿಷಯಗಳು :
- ನರೇಗಾ ಯೋಜನೆಯ ಅಡಿಯಲ್ಲಿ 1,60,000 ಪಶು ಪಾಲಕರಿಗೆ ಸಹಾಯಧನ, ತಕ್ಷಣ ಪಡೆಯಿರಿ
- ಅನ್ನಭಾಗ್ಯ ಹಾಗು ಗೃಹಲಕ್ಷಿ ಹಣ ಪಡೆಯಲು E-KYC ಮತ್ತು NPCI ಕಡ್ಡಾಯವಾಗಿ ಮಾಡಿಸಬೇಕು