News

ಅನ್ನಭಾಗ್ಯ ಹಣ ಬಂದ್! ಪಡಿತರ ವಿತರಕರು ನಿಲ್ಲಿಸಬೇಕು ಎಂದು ಪ್ರತಿಭಟನೆ; ಕಾರಣ ಏನು.?

Annabhagya money bandh appeal by ration distributors

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿಗೆ ಬದಲಾಗಿ ನೀಡುತ್ತಿರುವ ಹಣವನ್ನು ಫಲಾನುಭವಿಗಳಿಗೆ ನಿಲ್ಲಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಹಾಗಾದರೆ ಈ ಪ್ರತಿಭಟನೆಗೆ ಮುಖ್ಯ ಕಾರಣ ಏನು ಎಂಬುದರ ಬಗ್ಗೆ ನೀವು ತಿಳಿದುಕೊಳ್ಳಬಹುದು.

Annabhagya money bandh appeal by ration distributors
Annabhagya money bandh appeal by ration distributors

ನ್ಯಾಯ ಬೆಲೆ ಅಂಗಡಿಕಾರರ ಪ್ರತಿಭಟನೆ :

ನ್ಯಾಯಬೆಲೆ ಅಂಗಡಿಕಾರರು ನವೆಂಬರ್ 7ರವರೆಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಪಡಿತರ ವಿತರಣೆ ಮಾಡದಿರಲು ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಹೋರಾಟವನ್ನು ತಮ್ಮ ವಿವಿಧ ಬೇಡಿಕೆಗಳು ಈಡೇರಿಕೆಗಾಗಿ ಹಮ್ಮಿಕೊಂಡಿರುವ ಇವರು ಬಹು ಮುಖ್ಯವಾಗಿ ರಾಜ್ಯ ಸರ್ಕಾರವು ನೀಡುತ್ತಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ಫಲಾನುಭವಿಗಳಿಗೆ ನಿಲ್ಲಿಸಬೇಕೆಂಬ ಹಕ್ಕೊತ್ತಾಯವನ್ನು ಮಾಡುತ್ತಿದ್ದಾರೆ. ಅಂದರೆ ತಮಗೆ ಬರಬೇಕಾಗಿರುವ ಕಮಿಷನ್ ಹಣ ಅಕ್ಕಿಯ ಬದಲು ಫಲಾನುಭವಿಗಳಿಗೆ ನೇರವಾಗಿ ಹಣ ನೀಡುತ್ತಿರುವುದರಿಂದ ಕೈ ತಪ್ಪುತ್ತಿದೆ ಎಂಬುದು ನ್ಯಾಯಬೆಲೆ ಅಂಗಡಿಕಾರರ ಆತಂಕವಾಗಿದೆ.

ಇದನ್ನು ಓದಿ : ರೇಷನ್ ಕಾರ್ಡ್ ಇಲ್ಲದಿದ್ದರೂ ಜನರಿಗೆ ಉಚಿತ ರೇಷನ್ : ಲೋಕಸಭೆ ಚುನಾವಣೆ ಪ್ರಭಾವ

ನ್ಯಾಯ ಬೆಲೆ ಅಂಗಡಿಕಾರರ ಬೇಡಿಕೆಗಳು :

ತಮ್ಮ ಬೇಡಿಕೆಗಾಗಿ ನ್ಯಾಯಬೆಲೆ ಅಂಗಡಿಕಾರರು ಬಹಳ ದಿನಗಳಿಂದ ಆಗ್ರಹಿಸುತ್ತಾ ಬಂದಿದ್ದು ಇದೀಗ ಸಾಮೂಹಿಕವಾಗಿ ಸಂಘಟಿತವಾಗಿ ಉಗ್ರ ಹೋರಾಟ ಹಮ್ಮಿಕೊಂಡಿದ್ದಾರೆ. ಅದರಂತೆ ಅವರು ಕೆಲವೊಂದು ಪ್ರಮುಖ ಬೇಡಿಕೆಗಳನ್ನು ನೀಡಿದ್ದು ಅವುಗಳೆಂದರೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ನೀಡುತ್ತಿರುವ ಅಕ್ಕಿಯ ಬದಲು ಹಣವನ್ನು ಕೂಡಲೇ ನೀಡುವುದನ್ನು ನಿಲ್ಲಿಸಬೇಕು ಅವರಿಗೆ ಪೂರಾ ಹತ್ತು ಕೆಜಿ ಅಕ್ಕಿಯನ್ನು ನೀಡಬೇಕೆಂದಿದ್ದಾರೆ.

ಗೋವಾ ಕೇರಳ ಮಹಾರಾಷ್ಟ್ರಗಳ ಮಾದರಿಯಲ್ಲಿ ಅಕ್ಕಿ ಸಿಗದಿದ್ದರೆ ಇತರ ಧಾನ್ಯಗಳನ್ನು ನೀಡುವ ಮೂಲಕ ತಮಗೆ ಸಲ್ಲಿಸಬೇಕಾದ ಕಮಿಷನ್ ಹಣವನ್ನು ನೀಡಬೇಕು. 23.75 ಕೋಟಿ ರೂಪಾಯಿ ಹಣವನ್ನು ಈಕೆ ವೈಸಿ ಕೆಲಸ ನಿರ್ವಹಿಸಲು ಕೂಡಲೇ ಬಿಡುಗಡೆ ಮಾಡಬೇಕು. ಪ್ರತ್ಯೇಕ ಸರ್ವರನ್ನು ಪ್ರತಿ ಜಿಲ್ಲೆಯಲ್ಲಿ ಕೇಂದ್ರ ಸ್ಥಾಪಿಸಬೇಕು. ನ್ಯಾ ಬೆಲೆ ಅಂಗಡಿ ನಿರ್ವಾಹಕರು ಒಂದು ವೇಳೆ ಅಮೃತ ಪಟ್ಟರೆ ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕೆಂದು ಹೇಳಿದ್ದಾರೆ. ಹೀಗೆ ಕೆಲವೊಂದು ಬೇಡಿಕೆಗಳನ್ನು ಅಂಗಡಿಕಾರರು ರಾಜ್ಯ ಸರ್ಕಾರದ ಮುಂದಿಟ್ಟಿದ್ದು ಈ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಾಯ ಮಾಡುತ್ತಿದ್ದಾರೆ.


ಹೀಗೆ ರಾಜ್ಯದಲ್ಲಿ ಜಾರಿಯಾಗಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡುತ್ತಿರುವ ಅಕ್ಕಿಯ ಹಣವನ್ನು ನಿಲ್ಲಿಸಬೇಕೆಂಬುದು ನ್ಯಾಯಬೆಲೆ ಅಂಗಡಿಕಾರರ ಬೇಡಿಕೆಯಾಗಿದ್ದು ಇದಕ್ಕೆ ಸಂಬಂಧಿಸಿದಂತೆ ನವೆಂಬರ್ 7ರವರೆಗೆ ಪ್ರತಿಭಟನೆ ಕೈಗೊಳ್ಳುತ್ತಿದ್ದಾರೆ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರು ಪಡಿತರ ಚೀಟಿದಾರರಾಗಿದ್ದರೆ ಅವರಿಗೆ ನ್ಯಾಯಬೆಲೆ ಅಂಗಡಿಯವರು ಪ್ರತಿಭಟನೆಯನ್ನು ಕೈಗೊಳ್ಳುತ್ತಿದ್ದಾರೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಮೈಕ್ರೋ ಕ್ರೆಡಿಟ್ ಯೋಜನೆ : 2.5 ಲಕ್ಷ ಸಹಾಯಧನ ಸರ್ಕಾರದಿಂದ ಅಕೌಂಟ್ ಗೆ ನೇರವಾಗಿ ಹಣ

ಈ ತಿಂಗಳು ಅಕ್ಕಿಯ ಜೊತೆಗೆ 5 ವಸ್ತುಗಳನ್ನು ಉಚಿತವಾಗಿ ಕಡ್ಡಾಯವಾಗಿ ನೀಡಲಾಗುತ್ತದೆ

Treading

Load More...