ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ ಹಣವು ಈಗಾಗಲೇ ಸಾಕಷ್ಟು ಜನರ ಖಾತೆಗೆ ಜಮಾ ಆಗಿದ್ದು ಸೆಪ್ಟೆಂಬರ್ ತಿಂಗಳ ಹಣವು ಕೂಡ ಎಲ್ಲರಿಗೂ ಬಿಡುಗಡೆಯಾಗಿದೆ. ಅದರಂತೆ ಇದೀಗ ಅನ್ನ ಭಾಗ್ಯ ಯೋಜನೆಯ ಜನವರಿ ತಿಂಗಳ ಹಣ ಕೂಡ ಬಿಡುಗಡೆ ಮಾಡಲಾಗಿದ್ದು ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡುವುದರ ಮೂಲಕ ತಮ್ಮ ಖಾತೆಗೆ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ನೋಡಿಕೊಳ್ಳಬಹುದಾಗಿದೆ.

ಜನವರಿ ತಿಂಗಳ ಅನ್ನಭಾಗ್ಯ ಯೋಜನೆಯ ಹಣ :
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಫಲಾನುಭವಿಗಳಿಗೆ 5 ಕೆಜಿಗೆ 170 ರೂಪಾಯಿ ಹಣವನ್ನು ನೀಡುತ್ತಿದೆ. ಪ್ರತಿ ತಿಂಗಳು 5 ಕೆಜಿ ಅಕ್ಕಿಗೆ ಬದಲಾಗಿ ಡಿವಿಟಿ ಮೂಲಕ ಅನ್ನ ಭಾಗ್ಯ ಯೋಜನೆಯ ಹಣವನ್ನು ಬಿಪಿಎಲ್ ಮತ್ತು ಅಂತ್ಯ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಅದರಂತೆ ಅನ್ನಭಾಗ್ಯ ಯೋಜನೆಯ ಹಣವು ಈ ತಿಂಗಳದ್ದು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದ್ದು ಖಾತೆಗೆ ಹಣ ಜಮ ಆಗಿರುವುದನ್ನು ಚೆಕ್ ಮಾಡಬಹುದು.
ಎಲ್ಲ ಸರಿ ಇದ್ದರೂ ಕೂಡ ಹಣ ಬಂದಿಲ್ಲ :
ಎಲ್ಲ ದಾಖಲೆಗಳು ಕೂಡ ಸರಿ ಇದ್ದರೂ ಕೂಡ ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲ ಎಂದು ಹಾವೇರಿ ಯಜಮಾನ್ ಒಬ್ಬರು ಹೇಳುತ್ತಿದ್ದರು ನಂತರ ಅವರು ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕ್ ಖಾತೆ ಸಮಸ್ಯೆ ಇದೆ ಎಂದು ಬ್ಯಾಂಕ್ ಆಫ್ ಬರೋಡದಲ್ಲಿ ಹೊಸ ಖಾತೆಯನ್ನು ತೆರೆದ ನಂತರ ಅವರಿಗೆ ಕೇವಲ ಮೂರು ದಿನಗಳಲ್ಲಿ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ. ಎಲ್ಲ ದಾಖಲಿ ಸರಿ ಇದ್ದವರು ಮತ್ತೊಮ್ಮೆ ಪೋಸ್ಟ್ ಆಫೀಸ್ನಲ್ಲಿ ಒಂದು ಹೊಸ ಖಾತೆಯನ್ನು ತೆರೆಯುವುದರ ಮೂಲಕ ಯೋಜನೆಯ ಹಣ ಬರುವಂತೆ ಮಾಡಬಹುದಾಗಿದೆ.
ಇದನ್ನು ಓದಿ : ಇಶಾನಿ ಫಾಲೋವರ್ಸ್ ಗಿಂತ ಪ್ರತಾಪ್ ಫ್ಯಾನ್ಸ್ ಕಾಮೆಂಟ್ಗಳು ಹೆಚ್ಚಾಗಿದೆ ನೋಡಿ
ಹಣ ಜಮಗಿರುವುದರ ಬಗ್ಗೆ ನೋಡುವ ವಿಧಾನ :
ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ನೋಡಬೇಕಾದರೆ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ https://ahara.kar.nic.in/lpg/ಸದ್ಯ ಭೇಟಿ ನೀಡಿ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ ಡಿಬಿಟಿ ಸ್ಟೇಟಸ್ ಮಾಡಿಕೊಳ್ಳಬಹುದಾಗಿದೆ.
ಹೀಗೆ ಅನ್ನ ಭಾಗ್ಯ ಯೋಜನೆಯ ಹಣ ಜನವರಿ ತಿಂಗಳಲ್ಲಿ ಜಮಾ ಆಗಿದ್ದು ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರಿಗೂ ಕೂಡ ಜನವರಿ ತಿಂಗಳ ಯೋಜನೆಯ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಚಿನ್ನದ ಬೆಲೆ ಭಾರಿ ಇಳಿಕೆ : ಇದೆ ಬೆಸ್ಟ್ ಟೈಮ್ ಖರೀದಿಸಲು ಬೆಲೆಯ ಮಾಹಿತಿ ನೋಡಿ.!!
- Breaking News : ಎಲ್ಲಾ ರೈತರ ಸಾಲ ಒಂದೇ ಬಾರಿಗೆ ಮನ್ನಾ! ಹೆಚ್ಚಿನ ಮಾಹಿತಿ ಇಲ್ಲಿದೆ