ನಮಸ್ಕಾರ ಸ್ನೇಹಿತರೆ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸರ್ಕಾರವು ಹೇಳಿರುವ ಪ್ರಕಾರ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದೆ ಆದರೆ ಸರ್ಕಾರ ಏನು ಅಂದುಕೊಂಡಿತ್ತು ಅದನ್ನು ನಿರೀಕ್ಷೆ ಪಟ್ಟಂತೆ, ರಾಜ್ಯದಲ್ಲಿ ನೆರವೇರಿಸಲು ಸಾಧ್ಯವಾಗುತ್ತಿಲ್ಲ ಅದರಲ್ಲಿಯೂ ವಿಶೇಷವಾಗಿ ಅನ್ನಭಾಗ್ಯ ಯೋಜನೆಯ ಬಗ್ಗೆ ಹೇಳುವುದಾದರೆ ರಾಜ್ಯ ಸರ್ಕಾರ ರಾಜ್ಯ ನೀಡಿದಂತಹ ಭರವಸೆಯನ್ನು ಅನ್ನಭಾಗ್ಯ ಯೋಜನೆಯಡಿಯಲ್ಲಿ ಈಡೇರಿಸಲು ಸಾಧ್ಯವಾಗಲಿಲ್ಲ.
ಅನ್ನಭಾಗ್ಯ ಯೋಜನೆಯಲ್ಲಿ ವಿಫಲವಾದ ಸರ್ಕಾರ :
ಸರ್ಕಾರ ತನ್ನ ಪ್ರಣಾಳಿಕೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅದರಂತೆ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ಕೊಡುವುದಾಗಿ ನೀಡಿದ್ದು ಆದರೆ ಕೇಂದ್ರ ಸರ್ಕಾರವು 5 ಕೆಜಿ ಅಕ್ಕಿಯನ್ನು ಉಚಿತವಾಗಿಯೇ ಕೊಡುತ್ತಿದೆ. ರಾಜ್ಯ ಸರ್ಕಾರವು ಇನ್ನೂ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಸೇರಿಸಿ ಫಲಾನುಭವಿಗಳಿಗೆ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಬೇಕಿತ್ತು ಆದರೆ ಈ ಯೋಜನೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು ಫಲಾನುಭವಿಗಳಿಗೆ ಕಳೆದ ಆರು ತಿಂಗಳಿನಿಂದಲೂ ಕೂಡ ಅಕ್ಕಿ ಬದಲು ಹಣವನ್ನೇ ಖಾತೆಗೆ ವರ್ಗಾವಣೆ ಮಾಡುತ್ತಿದೆ.
ಮಹಿಳೆಯರಿಂದ ಆಕ್ರೋಶ :
ಅಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಹೊಂದಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದೇ ಇರುವುದರಿಂದ ಅಕ್ಕಿ ಸಂದಾಯವಾಗುವ ಬೆಲೆಯ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು ಕಳೆದ ಆರು ತಿಂಗಳಿನಿಂದಲೂ ಕೂಡ ಪ್ರತಿ ಕೆಜಿಗೆ 34 ರೂಪಾಯಿಯಂತೆ ಅಂದರೆ ಒಬ್ಬ ವ್ಯಕ್ತಿಗೆ 170ಗಳಂತೆ, ಅಂದರೆ 5 ಕೆಜಿ ಅಕ್ಕಿಗೆ ಹಣವನ್ನು ಜಮಾ ಮಾಡುತ್ತಿದೆ ಆದರೆ ಫಲಾನುಭವಿಗಳಿಗೆ ಈ ಹಣ ಬೇಕಾಗಿಲ್ಲ ಬದಲು ಅಕ್ಕಿಯನ್ನೇ ಕೊಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.
ಇದನ್ನು ಓದಿ : ನಿಮಗೂ ಗೃಹಲಕ್ಷ್ಮಿ 2,000ರೂ ಹಣ ಬಂದಿದೆಯ ನೋಡಿ, 5ನೇ ಕಂತಿನ ಹಣ ಬಿಡುಗಡೆ ಆಗಿದೆ
80% ಫಲಾನುಭವಿಗಳಿಗೆ ಅಕ್ಕಿ ಬೇಕು :
ರಾಜ್ಯದ್ಯಂತ ಸಮೀಕ್ಷೆ ನಡೆಸಿರುವ ಪ್ರಕಾರ ಶೇಕಡ 80 ರಷ್ಟು ಫಲಾನುಭವಿ ಮಹಿಳೆಯರು ತಮಗೆ ಅಕ್ಕಿಯನ್ನು ರೇಷನ್ ಆಗಿ ಕೊಡಬೇಕೆಂದು ಸರ್ಕಾರಕ್ಕೆ ಕೇಳಿಕೊಳ್ಳುತ್ತಿದ್ದಾರೆ ಹಣವನ್ನು ಕೊಟ್ಟರೆ ಅದು ಬೇರೆ ಬೇರೆ ಕಾರಣಗಳಿಂದಾಗಿ ಖರ್ಚಾಗುತ್ತದೆಯೇ ಹೊರತು ಅದರಿಂದ ನಮಗೆ ಅಕ್ಕಿ ಖರೀದಿಸಲು ಸಾಧ್ಯವಾಗುವುದಿಲ್ಲ ಇದರಿಂದಾಗಿ ನಮಗೆ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ನಮಗೆ ಹಣ ಬೇಡ ಅಕ್ಕಿಯನ್ನು ಕೊಡಬೇಕೆಂದು ಸಾಕಷ್ಟು ಮಹಿಳೆಯರು ಸರ್ಕಾರದ ಮೊರೆ ಹೋಗಿದ್ದಾರೆ.
ಹೀಗೆ ರಾಜ್ಯ ಸರ್ಕಾರವು ಘೋಷಣೆ ಮಾಡಿರುವ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದ್ದ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ಇದೀಗ ಸಾಕಷ್ಟು ಮಹಿಳೆಯರು ಅಕ್ಕಿಯನ್ನು ಕೊಡಬೇಕೆಂದು ಸರ್ಕಾರಕ್ಕೆ ಮೊರೆ ಹೋಗಿದ್ದಾರೆ ಹಾಗಾಗಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಅಕ್ಕಿಯನ್ನೇ ವಿತರಣೆ ಮಾಡುತ್ತದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ. ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರದ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಈ ಬ್ಯಾಟರಿ 50 ವರ್ಷ ಚಾರ್ಜ್ ಮಾಡೋದೇ ಬೇಡ : ನ್ಯೂಕ್ಲಿಯರ್ ಬ್ಯಾಟರಿ ಬಗ್ಗೆ ತಿಳಿದುಕೊಳ್ಳಿ
- ಕೇವಲ 100 ರೂಪಾಯಿಯಲ್ಲಿ ತಿಂಗಳವರೆಗೆ ಸ್ವದೇಶಿ ಮ್ಯಾಜಿಕ್ ಸೌದೆ ಒಲೆಯ ಮೂಲಕ ಅಡುಗೆ ಮಾಡಿ