ನಮಸ್ಕಾರ ಸ್ನೇಹಿತರೆ ಪ್ರಸ್ತುತ ರಾಜ್ಯದಲ್ಲಿ ರೈತರಿಗೆ ಸಹಾಯವಾಗುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಇದೀಗ ಭತ್ತ ರಾಗಿ ಜೋಳ ಖರೀದಿಗೆ ನೊಂದಣಿಗೆ ಆಹ್ವಾನ ಮಾಡಿದೆ. ರೈತರಿಂದ ನೇರವಾಗಿ ಬತ್ತ ಮತ್ತು ರಾಗಿ ಖರೀದಿಸಲು ರೈತರಿಂದ ನೋಂದಣಿಗೆ ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಆಹ್ವಾನಿಸಲಾಗಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆ :
ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ರೈತರು ಬೆಳೆದ ಉತ್ತಮ ಗುಣಮಟ್ಟದ ರಾಗಿ ಮತ್ತು ಭತ್ತವನ್ನು ರೈತರಿಂದ ನೇರವಾಗಿ ಖರೀದಿಸಲು ಖರೀದಿ ಏಜೆನ್ಸಿಯಾಗಿ ಮಾಡಿದ್ದು ಆಯಾ ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಂಗಣದಲ್ಲಿ ರೈತರು ಭತ್ತ ಮತ್ತು ರಾಗಿಯ ಗುಣಮಟ್ಟವನ್ನು ಪರಿಶೀಲಿಸಬೇಕು.
ಕನಿಷ್ಟ ಬೆಂಬಲ ಬೆಲೆ :
ರೈತರು ಆಯಾ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಂಗನದಲ್ಲಿ ಪರಿಶೀಲಿಸಿದ ನಂತರ ಫ್ರೂಟ್ಸ್ ಗುರುತಿನ ಸಂಖ್ಯೆಯೊಂದಿಗೆ ರೈತರು ಕೃಷಿ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. 3146 ಪ್ರತಿ ಕ್ವಿಂಟಲ್ ಗೆ ರಾಗಿಯನ್ನು ಮತ್ತು 2086 ಪ್ರತಿ ಕ್ವಿಂಟಲ್ ಗೆ ಸಾಮಾನ್ಯ ಭಕ್ತ ಹಾಗೂ 2203 ಗ್ರೇಡ್ ಎ ಗೆ ಕನಿಷ್ಠ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರವು ನಿಗದಿಪಡಿಸಿದೆ.
ರೈತರ ನೋಂದಣಿ ಪ್ರಕ್ರಿಯೆಯು ಕಡ್ಡಾಯವಾಗಿದ್ದು ರೈತರು ಫ್ರೂಟ್ಸ್ ದತ್ತಾಂಶದಲ್ಲಿ ನೀಡಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ರೈತರಿಗೆ ಸಂದಾಯ ಮಾಡಲಾಗುತ್ತದೆ. ಆದ್ದರಿಂದ ಫ್ರೂಟ್ಸ್ ದತ್ತಾಂಶದಲ್ಲಿ ದಾಖಲಿಸಿರುವ ತಮ್ಮ ಬ್ಯಾಂಕ್ ಖಾತೆಯನ್ನು ರೈತರು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿರುವುದು ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಆಗಿರುವುದನ್ನು ಪಡಿಸಿಕೊಳ್ಳಬೇಕಾಗುತ್ತದೆ.
ಇದನ್ನು ಓದಿ : ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಇನ್ನುಮುಂದೆ ಬೇರೆ ರೀತಿಯಲ್ಲಿ ಮಾಡಲು ಪ್ಲಾನ್
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಸಂಪರ್ಕಿಸುವ ವಿಧಾನ :
ಕೃಷಿ ಇಲಾಖೆಯಿಂದ ಹೊರಡಿಸಿರುವ ಇದರ ಬಗ್ಗೆ ಯಾವುದೇ ದೂರುಗಳು ಇದ್ದರೆ ದೂರುಗಳನ್ನು ತಹಶೀಲ್ದಾರರು ಉಪ ನಿರ್ದೇಶಕರು ಉಪ ವಿಭಾಗಾಧಿಕಾರಿಗಳು ಕೃಷಿ ಮಾರುಕಟ್ಟೆ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ. ದೂರುಗಳನ್ನು ನೀಡಲು ಸಂಪರ್ಕಿಸಬಹುದಾದ ಸಹಾಯವಾಣಿ ಸಂಖ್ಯೆ 08192-296770,9448496020 ಈ ನಂಬರಿಗೆ ಕರೆ ಮಾಡಬಹುದು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ವೆಂಕಟೇಶ್ ಎಂವಿ ಅವರು ತಿಳಿಸಿದ್ದಾರೆ.
ಹೀಗೆ ರಾಜ್ಯ ಸರ್ಕಾರವು ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಿರುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲಾಗಿದ್ದು ನಿಮ್ಮ ಸ್ನೇಹಿತರು ಯಾರಾದರೂ ಭತ್ತ ರಾಗಿ ಜೋಳ ಬೆಳೆದಿದ್ದರೆ ಬೆಳೆಗಳ ಖರೀದಿಗೆ ನೊಂದಣಿ ಪ್ರಾರಂಭವಾಗಿದೆ ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಇದರಿಂದ ಅವರು ತಾವು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಪಡೆದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಮೊಮ್ಮಗನಿಗೆ ತಾತನ ಆಸ್ತಿಯ ಮೇಲೆ ಹಕ್ಕು ಇದೆಯಾ ? ಆಸ್ತಿಯ ಬಗ್ಗೆ ಕಾನೂನಿನ ನಿಯಮವೇನು ?
- ಬ್ಯಾಂಕುಗಳಿಗೆ ಸತತ 5 ದಿನ ರಜೆ : ಯಾವ ದಿನದಂದು ಎಂದು ತಿಳಿದುಕೊಳ್ಳಿ