ನಮಸ್ಕಾರ ಸ್ನೇಹಿತರೆ ಭಾರತ ಸರ್ಕಾರವು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಲ್ಲಿ ಹತ್ತಿಯ ಎರಡು ಮೂಲ ತಳಿಗಳ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದು ಅದರಂತೆ ಯಾವ ಯಾವ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದೆ ಹಾಗೂ ಎಷ್ಟು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಹತ್ತಿ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಿದ ಸರ್ಕಾರ :
ಭಾರತ ಸರ್ಕಾರವು ಹತ್ತಿಯ 2 ಮೂಲ ತಳಿಗಳ ಬೆಂಬಲ ಬೆಲೆಯನ್ನು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಲ್ಲಿ ನಿಗದಿಪಡಿಸಿದೆ. ಮಧ್ಯಮ ಸ್ಟೇಪಲ್ ಹೊತ್ತಿಗೆ 24.5 ರಿಂದ 25.5 ಮಿಲಿಮೀಟರ್ ಹೊಂದಿರುವ ಹತ್ತಿಗೆ ಹಾಗೂ ಮೈಕ್ರೋನೈರ್ ಹತ್ತಿಗೆ ಮೌಲ್ಯವು 4.3 ರಿಂದ 5.1 ಮತ್ತು ಉದ್ದವಾದ ಹತ್ತಿಗೆ ಸ್ಟೇಪಲನ್ನು ನಿಗದಿಪಡಿಸಿದೆ. 2023 24ರ ಹತ್ತಿ ಸೀಸಂಗೆ ಬೇರೆ ಕ್ವಾಲಿಟಿಯ ನ್ಯೂ ಕ್ರಾಪ್ ಸೀಟ್ ಕಾಟನ್ 3.5 ರಿಂದ 4.3 ಮೈಕ್ರೋ ಮೌಲ್ಯದೊಂದಿಗೆ ಇದರ ಉದ್ದವು 29.5 ರಿಂದ 30.5 ಮಿಲಿಮೀಟರ್ ವರೆಗೆ ಇದ್ದು ೬೦೨೦ ರುಪಾಯಿಗೆ ಮಧ್ಯಮ ಹತ್ತಿ ಗೆ ಬೆಂಬಲ ಬೆಲೆಯನ್ನು ಕ್ವಿಂಟಲ್ ಗೆ ನಿಗದಿಪಡಿಸಲಾಗಿದೆ ಹಾಗೂ 7020 ರೂಪಾಯಿಗಳನ್ನು ಕ್ವಿಂಟಲ್ ಗೆ ಉದ್ದವಾದ ಸ್ಟೇಪಲ್ ಹತ್ತಿಗೆ ನಿಗದಿಪಡಿಸಲಾಗಿದೆ.
ಹತ್ತಿ ಖರೀದಿ ಕೇಂದ್ರಗಳ ಸ್ಥಳ :
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಕಟಣೆಯ ಪ್ರಕಾರ ಹತ್ತಿ ಖರೀದಿ ಕೇಂದ್ರಗಳು ಯಾವುವೆಂದರೆ ಶ್ರೀಲಕ್ಷ್ಮೀ ಕಾಟನ್ ನಂಬರ್ 135 ಮೂರನೇ ಬೇಲೂರು ಇಂಡಸ್ಟ್ರಿಯಲ್ ಏರಿಯಾ ಧಾರವಾಡ 580011 ಹಾಗೂ ಅನಿಲ್ ಕುಮಾರ ಅಂಡ್ ಕಂಪನಿ, ಅಮ್ಮಿನಭಾವಿ ಧಾರವಾಡ 5 8 0 2 0 1 ಈ ಕೇಂದ್ರಗಳಿಗೆ ಭೇಟಿ ನೀಡಿ ಹತ್ತಿ ಖರೀದಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಧಾರವಾಡ ಭಾರತೀಯ ಹತ್ತಿ ನಿಗಮ ಲಿಮಿಟೆಡ್ ವ್ಯವಸ್ಥಾಪಕ ಪ್ರಮೋದ್ ಇವರ ಮೊಬೈಲ್ ನಂಬರ್ ಆದ 9028155111 ಈ ನಂಬರ್ಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಹಾಗೂ ಹತ್ತಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಭತ್ತ ರಾಗಿ ಜೋಳ ಖರೀದಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ :
ರೈತರಿಂದ ಭಕ್ತರಾಗಿ ಮತ್ತು ಜೋಳ ಖರೀದಿಗೆ 2023 24ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಕಾರಟಗಿ ಗಂಗಾವತಿ ಕೊಪ್ಪಳ ಯಲಬುರ್ಗಾ ಕನಕಗಿರಿ ಕುಷ್ಟಗಿ ಮತ್ತು ಕುಕನೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇವುಗಳ ಕನಿಷ್ಠ ಬೆಂಬಲ ಬೆಲೆ ಮುಂಗಾರು ಋತುವಿನಲ್ಲಿ ನೋಡುವುದಾದರೆ, 2183 ಸಾಮಾನ್ಯ ಭತ್ತಕ್ಕೆ ,2203 ಗ್ರೇಡ್ ಎ ಗೆ , 3180 ಬಿಳಿ ಜೋಳ ಹೈಬ್ರಿಡ್, 325 ಬಿಳಿ ಜೋಳ ಮಾಲದಂಡಿ, ಹಾಗೂ 3846 ರಾಗಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ನಿಗದಿಪಡಿಸಲಾಗಿದೆ.
ಇದನ್ನು ಓದಿ : ಚಿನ್ನವನ್ನು ಖರೀದಿಸುವವರಿಗೆ ಮಹತ್ವದ ಸುದ್ದಿ ಚಿನ್ನದ ಬೆಲೆ ಇಳಿಕೆ
ಇವುಗಳ ಖರೀದಿಗೆ ಸಹಾಯವಾಣಿ ಸಂಖ್ಯೆ :
ಸರ್ಕಾರವು ಇವುಗಳ ಖರೀದಿಗೆ ಕೊಪ್ಪಳ ಎಪಿಎಂಸಿಯಲ್ಲಿ ಅಧಿಕಾರಿಗಳನ್ನಾಗಿ ಸಗಟು ಮಳಿಗೆ ನಿರ್ವಾಹಕರಾದ ಎಂ ವಿ ಕೋನಪುರ ಇವರ ಮೊಬೈಲ್ ನಂಬರ್ 9739228720, ಭತ್ತ ಖರೀದಿಗೆ ಗಂಗಾವತಿ ಎಪಿಎಂಸಿಯಲ್ಲಿ ಅಧಿಕಾರಿಯನ್ನಾಗಿ ಆಹಾರ ನಿರೀಕ್ಷಕರಾದ ಶೇಖರಪ್ಪ 9980226881, ಭತ್ತ ಖರೀದಿಗಾಗಿ ಕಾರಟಗಿ ಎಪಿಎಂಸಿಯಲ್ಲಿ ಆಹಾರ ನಿರೀಕ್ಷಕರಾದ ನವೀನ್ ಮಠದ್ 8123453419, ಜೋಳ ಖರೀದಿಗಾಗಿ ಕುಕನೂರು ಎಪಿಎಂಸಿಯಲ್ಲಿ ಸಗಟು ಮಳಿಗೆ ನಿರ್ವಾಹಕರಾದ ಎಂ ವಿ ಕೋನಾಪುರ 9739228720, ಜೋಳ ಖರೀದಿಗಾಗಿ ಕುಷ್ಟಗಿ ಎಪಿಎಂಸಿಯಲ್ಲಿ ಸಗಟು ಮಳಿಗೆ ನಿರ್ವಾಹಕರಾದ ಸೋಮಶೇಖರ 6361289585 ಇವರುಗಳನ್ನು ಸರ್ಕಾರವು ನಿಯೋಜಿಸಲಾಗಿದ್ದು ಇವರುಗಳ ಸಮ್ಮುಖದಲ್ಲಿ ಭತ್ತ ಜೋಳ ಹಾಗೂ ರಾಗಿಯನ್ನು ಖರೀದಿಸಬಹುದಾಗಿದೆ.
ಒಟ್ಟಾರಿಯಾಗಿ ಸರ್ಕಾರವು ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿರುವುದರ ಮೂಲಕ ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಸದೃಢಪಡಿಸಿಕೊಳ್ಳಬಹುದಾಗಿದೆ. ಹಾಗಾಗಿ ಈ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದ್ದು ಇವುಗಳ ಖರೀದಿಗೆ ಸಗಟು ವ್ಯಾಪಾರಿಗಳನ್ನು ಸಹ ಆಯೋಜಿಸಲಾಗಿದೆ ಎಂಬುದರ ಈ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- SBI ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಪ್ರತಿಯೊಬ್ಬ ವಿದ್ಯಾರ್ಥಿಗೆ 10,000 ಹಣ
- ಹೆಣ್ಣು ಮಕ್ಕಳಿಗೆ 2.50 ಲಕ್ಷ ಸಿಗಲಿದೆ PUC ಪಾಸಾದವರು ಅಪ್ಲೈ ಮಾಡಿ.!