News

ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ನಿಮ್ಮ ಜಿಲ್ಲೆಯಲ್ಲಿ ಉದ್ಯೋಗ ಅವಕಾಶ

Application Invitation for Home Guard Posts

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಚಿಕ್ಕಮಗಳೂರು ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಿಂದ ಸ್ವಯಂ ಸೇವಕ ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಮುಂಗಾರು ಹುದ್ದೆಯನ್ನು ಪಡೆಯಬಹುದಾಗಿದೆ.

Application Invitation for Home Guard Posts
Application Invitation for Home Guard Posts

ಸ್ವಯಂಸೇವಕ ಹೋಂ ಗಾಡ್ ಹುದ್ದೆಗಳು :

ಒಟ್ಟು 247 ಸ್ವಯಂ ಸೇವಕ ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಗೃಹರಕ್ಷಕ ದಳ ಚಿಕ್ಕಮಗಳೂರಿನಲ್ಲಿ ಅರ್ಜಿಯನ್ನು ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ. ಗೃಹರಕ್ಷಕ ಅಥವಾ ಗೃಹರಕ್ಷಕೆ ಹುದ್ದೆಗಳು ಖಾಲಿ ಇದ್ದು 10ನೇ ತರಗತಿ ಪಾಸ್ ಆಗಿರುವ ಎಲ್ಲಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಟ್ಟು 247 ಹುದ್ದೆಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇವೆ.

ಹುದ್ದೆಗಳಿಗೆ ಅಗತ್ಯವಿರುವ ದಾಖಲೆಗಳು :

ಅಭ್ಯರ್ಥಿಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇರುವ ಸ್ವಯಂಸೇವಕ ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ವಿದ್ಯಾರ್ಥಿಯ ಪ್ರಮಾಣ ಪತ್ರ ಜನ್ಮ ದಿನಾಂಕ ಗಳನ್ನು ಪಡೆದುಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ : ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!

ಯಾರೆಲ್ಲ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ :


ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಹತ್ತನೇ ತರಗತಿಯನ್ನು ಪಾಸಾಗಿರಬೇಕು ಹಾಗೂ ಇವರ ವಯಸ್ಸು 19 ರಿಂದ ಗರಿಷ್ಠ 50 ವರ್ಷದ ಒಳಗೆ ಇರಬೇಕು. 6 ಕಿ.ಮೀ ವ್ಯಾಪ್ತಿಯ ಒಳಗೆ ತಮ್ಮ ವಾಸ ಸ್ಥಳದಿಂದ ತಾವು ಸೇರಬಯಸುವ ಘಟಕಕ್ಕೆ ಇರಬೇಕಾಗುತ್ತದೆ. ಬಹು ಮುಖ್ಯವಾಗಿ ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಅಭ್ಯರ್ಥಿಗಳು ಹೊಂದಿರಬಾರದು. ಅಭ್ಯರ್ಥಿಯು ಧೃಡಕಾಯರಾಗಿದ್ದು ಆರೋಗ್ಯವಂತರಾಗಿರಬೇಕು ಅಲ್ಲದೆ ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಬಾರದು.

ಉದ್ಯೋಗ ಸ್ಥಳದ ಬಗ್ಗೆ ಮಾಹಿತಿ :

ಒಟ್ಟು 247 ಹುದ್ದೆಗಳಿಗೆ ಉದ್ಯೋಗ ಸ್ಥಳದ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ ಉದ್ಯೋಗ ಸ್ಥಳದ ಮಾಹಿತಿಯನ್ನು ನೋಡುವುದಾದರೆ,
ಚಿಕ್ಕಮಗಳೂರು ಜಿಲ್ಲಾ ಗೃಹರಕ್ಷಕ ದಳದ ವ್ಯಾಪ್ತಿಯ ಚಿಕ್ಕಮಗಳೂರು ಕಡೂರು, ಬೆಳವಾಡಿ ಬೀರೂರು ಕಾಟಗರಿ ತರೀಕೆರೆ ಶಿವನೇ ಬಾಳೆಹೊನ್ನೂರು ಶೃಂಗೇರಿ ಕಳಸಾಪುರ ಕೊಪ್ಪ ಲಿಂಗದಹಳ್ಳಿ ಎನ್ಆರ್ ಪುರ ಜಯಪುರ ಹರಿಹರಪುರ ಸಕರಾಯಪಟ್ಟಣ ಕೋಚಿಹಳ್ಳಿ ಜವೂರು ಹಾಗೂ ಮೂಡಿಗೆರೆ ಭಾಗಗಳಲ್ಲಿ ಉದ್ಯೋಗವನ್ನು ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಇದೇ ಜನವರಿ 31 2024ರ ಒಳಗಾಗಿ ಚಿಕ್ಕಮಗಳೂರು ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಿಂದ ಹಾಗೂ ಘಟಕ ಅಧಿಕಾರಿ ಕಚೇರಿ ಗೃಹರಕ್ಷಕ ದಳ ಇವರಿಂದ ಉಚಿತವಾಗಿ ಅರ್ಜಿಗಳನ್ನು ಪಡೆದು ಸಂಬಂಧಪಟ್ಟ ಗೃಹ ರಕ್ಷಕ ಘಟಕ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ :

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಅಭ್ಯರ್ಥಿಗಳು ಜಿಲ್ಲಾ ಗೃಹರಕ್ಷಕ ದಳದ ಕಚೇರಿ
ಅಗ್ನಿಶಾಮಕ ಇಲಾಖೆ ಪಕ್ಕ
ಕೆ ಎಂ ರಸ್ತೆ ಚಿಕ್ಕಮಗಳೂರು
ಇರುವ ಸಹಾಯಕ ಬೋಧಕರಾದ ಕರಿಬಸಪ್ಪಯ್ಯ ವಿವರ ದೂರವಾಣಿ ಸಂಖ್ಯೆಯಾದ 8151914734 ಹಾಗೂ ಕಚೇರಿ ಮೊಬೈಲ್ ನಂಬರ್ ಅದ 9164283743 ಈ ಸಂಖ್ಯೆಗೆ ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ.

ಒಟ್ಟಾರೆಯಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ವಯಂಸೇವಕ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಆಸಕ್ತ ಅಭ್ಯರ್ಥಿಗಳು ತಮ್ಮ ಹತ್ತಿರವಿರುವ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಹುದ್ದೆಯನ್ನು ಪಡೆಯಬಹುದಾಗಿದೆ.

ಇತರೆ ವಿಷಯಗಳು :

Treading

Load More...