ನಮಸ್ಕಾರ ಸ್ನೇಹಿತರೇ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಒಂದು ಮಹತ್ವದ ಪ್ರಕಟಣೆಯನ್ನು ಹೊರಡಿಸಲಾಗಿದೆ. ನೀವೇನಾದರೂ ಇನ್ನೂ ಸಹ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಕೊಳ್ಳದಿದ್ದರೆ ಇದೊಂದು ಮತ್ತೊಂದು ಅವಕಾಶ ಎಂದು ಹೇಳಬಹುದು. ಯಾವ ಯಾವ ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಬಹುದು ಎಂಬುದರ ಮಾಹಿತಿಯನ್ನು ಇದರಲ್ಲಿ ತಿಳಿದುಕೊಳ್ಳಬಹುದು.
ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ :
ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದ್ದು ಈ ಅವಕಾಶವೂ ಕೆಲವು ಜಿಲ್ಲೆಗಳಲ್ಲಿ ಹಾಗೂ ಕೆಲವು ಸಮಯದವರೆಗೆ ಮಾತ್ರ ಮೀಸಲಿ ದೆ. ರೇಷನ್ ಕಾರ್ಡ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅನ್ನ ಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಅಗತ್ಯವಾಗಿರುವ ದಾಖಲೆಯಾಗಿದ್ದು ಯಾವುದೇ ರೀತಿಯ ತಪ್ಪು ಮುದ್ರಣ ಏನಾದರೂ ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನಲ್ಲಿದ್ದರೆ ಅಂತಹ ಕುಟುಂಬದವರು ಯಾವುದೇ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಮೂರು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರವು ಈಗಾಗಲೇ ಅವಕಾಶ ಕಲ್ಪಿಸಲಾಗಿದ್ದು ಮತ್ತೆ ಎರಡು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದೆ. ಯಾವುದೇ ಸದಸ್ಯರ ಹೆಸರನ್ನು ಹಾಗೂ ಮನೆಯಲ್ಲಿ ಇಲ್ಲದ ಸದಸ್ಯರಾ ಅಥವಾ ಮರಣ ಹೊಂದಿದ ಸದಸ್ಯರ ಹೆಸರನ್ನು ತೆಗೆದು ಹಾಕಿಸಲು ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರವು ಅವಕಾಶ ಕಲ್ಪಿಸಲಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ಈ ಜಿಲ್ಲೆಗಳಲ್ಲಿ ಮಾತ್ರ :
ತಿದ್ದುಪಡಿಗೆ ನವೆಂಬರ್ 29 ಹಾಗೂ 30ನೇ ತಾರೀಖಿನಂದು ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಹತ್ತಿರದಿಂದ ಹನ್ನೆರಡು ಗಂಟೆಯವರೆಗೆ ಸಮಯವನ್ನು ನಿಗದಿಪಡಿಸಲಾಗಿದೆ ಹಾಗಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡಿ ಇದ್ದರೆ ನಿಮ್ಮ ಹತ್ತಿರದ ಗ್ರಾಮವನ್ನು ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಇದನ್ನು ಓದಿ : ಸ್ವಯಂ ಉದ್ಯೋಗಕ್ಕೆ ಕರ್ನಾಟಕ ಸರ್ಕಾರದಿಂದ ಧನ ಸಹಾಯ 3 ಲಕ್ಷ ಸಿಗುತ್ತೆ
ಹೊಸ ರೇಷನ್ ಕಾರ್ಡಿಗೆ ಅರ್ಜಿ :
ಕೆಲವು ಕುಟುಂಬದವರಿಗೆ ಮಾತ್ರ ಇನ್ನೂ ಪಡಿತರ ಚೀಟಿಯನ್ನು ಪಡೆದುಕೊಂಡಿರುವುದಿಲ್ಲ ಆ ಕುಟುಂಬದವರು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಡಿಸೆಂಬರ್ ಮೂರನೇ ತಾರೀಕಿನಂದು ಅವಕಾಶ ಕಲ್ಪಿಸಲಾಗಿದ್ದು ಗ್ರಾಮವನ್ ಕರ್ನಾಟಕಒನ್ ನಲ್ಲಿ ಆಧಾರ್ ಕಾರ್ಡ್ ಮನೆಯ ವಿಳಾಸ ಮತ್ತು ಇತರ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಬೆಳಿಗ್ಗೆ 11:00 ಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಮಯಾವಕಾಶ ಕಲ್ಪಿಸಲಾಗಿದ್ದು ಕಲಬುರ್ಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗ್ರಾಹಕ ವ್ಯಹಾರಗಳ ಇಲಾಖೆಯ ಉಪನಿರ್ದೇಶಕರಾದ ಶಾಂತಗೌಡ ಜಿ ಅವರು ಕಲಬುರ್ಗಿ ಜನತೆಗೆ ತಿಳಿಸಿದ್ದಾರೆ.
ಹೀಗೆ ಕಲಬುರ್ಗಿ ಜಿಲ್ಲೆಯ ಜನತಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹಾಗೂ ರೇಷನ್ ಕಾರ್ಡ್ ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಕಲಬುರ್ಗಿ ಜಿಲ್ಲೆಯಲ್ಲಿ ವಾಸ ಮಾಡುತ್ತಿದ್ದಾರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಗೃಹಲಕ್ಷ್ಮಿ ಹಣ ಪಡೆದ ಫಲಾನುಭವಿಗಳಿಗೆ ಹೊಸ ಸೂಚನೆ. ಈ ರೀತಿ ಮಾಡಿದರೆ ಹಣ ಇಲ್ಲ
ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳು ಕ್ಲೋಸ್ : ಇಲ್ಲಿದೆ ಡಿಸೆಂಬರ್ ನ ರಜಾದಿನಗಳ ವಿವರಗಳು