ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬೆಸ್ಕಾಂ ನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. 4 ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಲು ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಹಾಗಾದ್ರೆ ಯಾವ ಹುದ್ದೆಗಳು ಖಾಲಿ ಇವೆ. ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಅರ್ಹತೆಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೋಡಬಹುದು.
ಬೆಸ್ಕಾಂ ನಲ್ಲಿ ಖಾಲಿ ಇರುವ ಹುದ್ದೆಗಳು :
ಒಟ್ಟು 400 ಹುದ್ದೆಗಳು ಬೆಸ್ಕಾಂನಲ್ಲಿ ಖಾಲಿ ಇದ್ದು ಸದ್ಯ ಇದೀಗ ಅಪ್ರಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ತಮ್ಮ ಟ್ರೈನಿಂಗ್ ಅವಧಿಯಲ್ಲಿ ಸ್ತೈಫoಡ್ ಪಡೆಯಲು ಬೆಸ್ಕಾಂ ಅವಕಾಶ ಕಲ್ಪಿಸಿದೆ. 143 ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಹುದ್ದೆಗಳು ಖಾಲಿ ಇವೆ. 116 ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ಹುದ್ದೆಗಳು ಖಾಲಿ ಇವೆ, 36 ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ,ಹುದ್ದೆಗಳು 20 ಫಾರ್ಮೇಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಐದು ಸಿವಿಲ್ ಇಂಜಿನಿಯರಿಂಗ್ ಹುದ್ದೆಗಳು ಖಾಲಿ ಇವೆ. ಹೀಗೆ ಬೆಸ್ಕಾಂ ನಲ್ಲಿ ಹುದ್ದೆಗಳು ಖಾಲಿ ಇದ್ದು ಇವುಗಳಿಗೆ ರೂ.8000ನಿಂದ 9,000ಗಳವರೆಗೆ ಅಪ್ರೆಂಟಿಸ್ ಗಳಿಗೆ ಸ್ಟೈಫಂಡ್ ಆಗಿ ನೀಡಲಾಗುತ್ತದೆ.
ವಿದ್ಯಾರ್ಹತೆ :
ಬೆಸ್ಕಾಂನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯ ಅಡಿಯಲ್ಲಿ ಬಿ ಟೆಕ್ ಬಿಇ ಡಿಪ್ಲೋಮೋ ಪದವಿಯನ್ನು ಬೆಸ್ಕಾಂ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಪಡೆದಿರಬೇಕು.
ಇದನ್ನು ಓದಿ : ಚಿನ್ನವನ್ನು ಖರೀದಿಸುವವರಿಗೆ ಮಹತ್ವದ ಸುದ್ದಿ ಚಿನ್ನದ ಬೆಲೆ ಇಳಿಕೆ
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಕೊನೆಯ ದಿನಾಂಕ :
ಬೆಸ್ಕಾಂ ನ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಬೆಸ್ಕಾಂನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಹುದ್ದೆಗಳಿಗೆ ಅಪ್ಲಿಕೇಶನ್ ಹಾಕಬಹುದು. ಬೆಸ್ಕಾಂನ ಅಧಿಕೃತ ವೆಬ್ ಸೈಟ್ https://nats.education.gov.in/ . ಅರ್ಜಿ ಸಲ್ಲಿಸಲು ಡಿಸೆಂಬರ್ 31 -2023 ಕೊನೆಯ ದಿನಾಂಕವಾಗಿರುತ್ತದೆ.
ವಯಸ್ಸಿನ ಮಿತಿ :
18 ವರ್ಷ ತುಂಬಿದ ಯಾವುದೇ ಅರ್ಹ ಅಭ್ಯರ್ಥಿಗಳು ಬೆಸ್ಕಾಂನ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ ಹಾಗೂ ಅರ್ಜಿ ಸಲ್ಲಿಸಲು ಈ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನೀಡಿರುವುದಿಲ್ಲ.
ಹೀಗೆ ಬೆಸ್ಕಾಂ ನಲ್ಲಿ ಸುಮಾರು 400 ಹುದ್ದೆಗಳು ಖಾಲಿ ಇದ್ದು ಇದೀಗ ಆ ಹುದ್ದೆಗಳಿಗೆ ಅರ್ಜಿಯನ್ನು ಬೆಸ್ಕಾಂ ಆಹ್ವಾನ ಮಾಡಿದೆ ಇದರಿಂದ ಬೆಂಗಳೂರಿನಲ್ಲಿಯೇ ಕೆಲಸ ಮಾಡಬೇಕೆಂಬ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲೈ ಮಾಡುವುದರ ಮೂಲಕ ಬೆಂಗಳೂರಿನಲ್ಲಿ ಕೆಲಸ ಮಾಡಬಹುದಾಗಿದೆ ಹಾಗಾಗಿ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- SBI ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಪ್ರತಿಯೊಬ್ಬ ವಿದ್ಯಾರ್ಥಿಗೆ 10,000 ಹಣ
- ಹೆಣ್ಣು ಮಕ್ಕಳಿಗೆ 2.50 ಲಕ್ಷ ಸಿಗಲಿದೆ PUC ಪಾಸಾದವರು ಅಪ್ಲೈ ಮಾಡಿ.!