ನಮಸ್ಕಾರ ಸ್ನೇಹಿತರೆ ಇವತ್ತಿನ ದಿನದಲ್ಲಿ ಕೆಎಸ್ಆರ್ಟಿಸಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. 133 ಹುದ್ದೆಗಳಿಗೆ ರಾಯಚೂರಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಘಟಕದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜನವರಿ 11ರಂದು 10 ಗಂಟೆಗೆ ವಾಕ್ ಇನ್ ಇಂಟರ್ವ್ಯೂಗೆ ಆಸಕ್ತ ಅಭ್ಯರ್ಥಿಗಳು ಹಾಜರಾಗಬಹುದು.
ಕೆಕೆಆರ್‌ಟಿಸಿ ಅಧಿಕೃತ ಅಧಿಸೂಚನೆ :
ಅಪ್ರೆಂಟಿಸ್ ಪೋಸ್ಟ್ಗಳನ್ನು ಭರ್ತಿ ಮಾಡಲು ಕೆಕೆಆರ್ಟಿಸಿ ಅಧಿಕೃತ ಆದಿ ಸೂಚನೆಯ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಹುದ್ದೆಗಳನ್ನು ನೋಡುವುದಾದರೆ,
46 ಆಟೋ ಮೆಕ್ಯಾನಿಕ್ 28 ಆಟೋ ಎಲೆಕ್ಟ್ರಿಷಿಯನ್ 20 ಆಟೋ ಬಿಲ್ಡರ್ 20 ಆಟೋ ಬಾಡಿ ಫಿಟ್ಟರ್ 10 ಆಟೋ ಪೈಂಟರ್ 9 ಆಟೋ ಮೆಷಿನಿಸ್ಟ್ ಹೀಗೆ ಈ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಹತೆಗಳು :
ಕೆಕೆಆರ್‌ಟಿಸಿಯಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವುದೇ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಐಟಿಐ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಬೇಕು. ಕನಿಷ್ಠ 18 ವರ್ಷಗಳು 31 ಡಿಸೆಂಬರ್ 2023ರಂತೆ. ಹಾಗೂ 40 ವರ್ಷ ಗರಿಷ್ಠ ವಯಸ್ಸನ್ನು ಹೊಂದಿರಬೇಕಾಗುತ್ತದೆ.
ಆಯ್ಕೆಯ ಪ್ರಕ್ರಿಯೆ :
ಈ ಹುದ್ದೆಗಳಿಗೆ ಆಯ್ಕೆಯ ಪ್ರಕ್ರಿಯೆಯನ್ನು ದೈಹಿಕ ಸಾಮರ್ಥ್ಯದ ಪರೀಕ್ಷೆಯ ಮೂಲಕ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ಮೆರಿಟ್ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನು ಓದಿ : ಸರ್ಕಾರದಿಂದ ತಿಂಗಳಿಗೆ 3000 ಪಡೆಯಬಹುದು : ಸಂಪೂರ್ಣವಾಗಿ ತಿಳಿದು ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಧಾನ :
ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅಪ್ರೆಂಟಿಸ್ ಪೋರ್ಟಲ್ ನ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. https://apprenticeshipindia.gov.in ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗಿಯ ಕಚೇರಿ ರಾಯಚೂರು ವಿಭಾಗ ರಾಯಚೂರು ಈ ಕಚೇರಿಗೆ ಭೇಟಿ ನೀಡಬಹುದು ಜೊತೆಗೆ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು. https://kkrtc.karnataka.gov.in ಈ ವೆಬ್ ಸೈಟಿಗೆ ಭೇಟಿ ನೀಡಿ ಕೆಕೆಆರ್ಟಿಸಿಯಲ್ಲಿ ಖಾಲಿ ಇರುವ ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಹಂತಹಂತವಾಗಿ ಆಹ್ವಾನಿಸುತ್ತಿದ್ದು ಇದೀಗ ಕೆಕೆಆರ್ಟಿಸಿಯಲ್ಲಿ 133 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿದೆ ಹಾಗಾಗಿ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಫ್ರೀ ಕರೆಂಟ್ ಖುಷಿಯಲ್ಲಿದ್ದವರಿಗೆ ಬೇಸರದ ಸುದ್ದಿ : ನೀವು ಹೆಚ್ಚಿನ ಹಣ ಕಟ್ಟಬೇಕು ನೋಡಿ
- ನೌಕರರ ಮಕ್ಕಳಿಗು ಕೂಡ ಪಿಂಚಣಿ ಸೌಲಭ್ಯ : ಮಕ್ಕಳಿಗೂ ಕೂಡ ಪಿಂಚಣಿಯ ಹಕ್ಕು ಇದೆ