ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರವು ಗ್ರಾಮೀಣ ಮಹಿಳಾ ಅಭ್ಯರ್ಥಿಗಳಿಂದ ವೆಬ್ಸೈಟ್ ಮುಖಾಂತರ 2023- 24ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಕ್ಕೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.

ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ :
ಉಚಿತವಾಗಿ ಸುಧಾರಿತ ಸಲಕರಣೆ ಗಳನ್ನು ಕುಶಲ ಕಾರ್ಮಿಕರಿಗೆ ಹಾಗೂ ಬಡ್ಡಿ ಸಹಾಯಧನ ಯೋಜನೆಯ ಅಡಿಯಲ್ಲಿ ಕುಶಲಕರ್ಮಿ ಗಳಿಗೆ ಸಹಾಯಧನವನ್ನು ನೀಡಲು ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆಯ ಅಡಿಯಲ್ಲಿ ನಿರ್ಧರಿಸಲಾಗಿದೆ. ಸದ್ಯಕ್ಕೆ ರಾಜ್ಯ ಸರ್ಕಾರವು ಉಚಿತ ಹೋಲಿಗೆ ಯಂತ್ರಕ್ಕೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಲು ಆಹ್ವಾನ ಮಾಡಲಾಗಿದ್ದು ಈ ಯೋಜನೆಗೆ ಸಂಬಂಧಿಸಿ ದಂತೆ ಏನೆಲ್ಲ ದಾಖಲೆಗಳು ಹೊಂದಿರಬೇಕು ಎಂಬುದನ್ನು ನೋಡುವುದಾದರೆ,
ಇದನ್ನು ಓದಿ : Amazon ವತಿಯಿಂದ ವಿದ್ಯಾರ್ಥಿ ವೇತನ : ಸುಮಾರು 50 ಸಾವಿರ ರೂಪಾಯಿ ಸಿಗುತ್ತೆ
ಉಚಿತ ಹೊಲಿಗೆ ಯಂತ್ರಕ್ಕೆ ಅಗತ್ಯವಿರುವ ದಾಖಲೆಗಳು :
ರಾಜ್ಯ ಸರ್ಕಾರವು 202324ನೇ ಸಾಲಿನಲ್ಲಿ ಅಭ್ಯರ್ಥಿಗಳು ತಮ್ಮ ಕಸುಬುಗಳನ್ನು ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಮುಂದುವರೆಸಿಕೊಂಡು ಹೋಗಲು ಇಲಕಾ ಸೌಲಭ್ಯವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ, ಮೊಬೈಲ್ ನಂಬರ್ ಹೊಲಿಗೆ ತರಬೇತಿ ಪಡೆದಿರುವ ಪ್ರಮಾಣ ಪತ್ರ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ರೇಷನ್ ಕಾರ್ಡ್ ಅಥವಾ ಗುರುತಿನ ಚೀಟಿ ಕುಶಲಕರ್ಮಿ ಗುರುತಿನ ಚೀಟಿ ನಿರ್ಗತಿಕ ವಿಧವೆ ಪ್ರಮಾಣ ಪತ್ರ ಅಂಗವಿಕಲ ಚೇತನರ ಪ್ರಮಾಣ ಪತ್ರ ಹೀಗೆ ಅಭ್ಯರ್ಥಿಗಳಿಗೆ ಅನುಗುಣವಾಗಿ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಈ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನ :
ರಾಜ್ಯ ಸರ್ಕಾರವು ಕೇವಲ ಎರಡು ಜಿಲ್ಲೆಗಳಲ್ಲಿ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿಯನ್ನು ಆಹಾರ ಮಾಡಿದ್ದು ಆ ಎರಡು ಜಿಲ್ಲೆಗಳಿದ್ದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 11 ಡಿಸೆಂಬರ್ 2023 ರಿಂದ 25 ಡಿಸೆಂಬರ್ 2023ರ ವರೆಗೆ ಹಾಗೂ ಕೋಲಾರ ಜಿಲ್ಲೆಯಲ್ಲಿ 26 ಅಕ್ಟೋಬರ್ 2023 ರಿಂದ 15 ಜನವರಿ 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹೀಗೆ ಮನೆಯಲ್ಲಿಯೇ ಕುಳಿತು ಕೆಲಸವನ್ನು ಮಾಡಲು ಇಚ್ಛಿಸುವ ಮಹಿಳಾ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ವಿದ್ಯುತ್ ಚಾಲಿತ ಉಚಿತ ಹೊಲಿಗೆ ಯಂತ್ರವನ್ನು ನೀಡಲು ನಿರ್ಧರಿಸಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಗಳಿಗೂ ಉಚಿತ ಹೊಲಿಗೆ ಯಂತ್ರ ಯೋಜನೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಇಂಟರ್ನೆಟ್ ಇಲ್ಲದೆ ಹಣ ಕಳಿಸಬಹುದು ಈ ಮಾಹಿತಿಯನ್ನು ಪ್ರತಿಯೊಬ್ಬರು ನೋಡಲೇಬೇಕು
- ಮೊಮ್ಮಗನಿಗೆ ತಾತನ ಆಸ್ತಿಯ ಮೇಲೆ ಹಕ್ಕು ಇದೆಯಾ ? ಆಸ್ತಿಯ ಬಗ್ಗೆ ಕಾನೂನಿನ ನಿಯಮವೇನು ?