ನಮಸ್ಕಾರ ಸ್ನೇಹಿತರೆ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ರೈತರು ಪಡೆಯಲು ಇದೀಗ ತಹಶೀಲ್ದೀರ್ ಕಚೇರಿಗೆ ಹೋಗುವ ಅಗತ್ಯವಿಲ್ಲ ಕೇವಲ ಒಂದೇ ನಿಮಿಷದಲ್ಲಿ ಮನೆಯಲ್ಲಿಯೇ ಕುಳಿತು ಭೂಮಿಯ ದಾಖಲೆಗಳನ್ನು ಚೆಕ್ ಮಾಡಬಹುದು. ಜಮೀನಿನ ದಾಖಲೆಗಳನ್ನು ಕಂದಾಯ ಇಲಾಖೆಯು ಸುಲಭವಾಗಿ ಮೊಬೈಲ್ ನಲ್ಲಿಯೇ ಪಡೆಯಲು ಭೂಮಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು ರೈತರು ಭೂಮಿ ತಂತ್ರಾಂಶದ ಆಪನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮಗೆ ಅಗತ್ಯ ಇರುವಂತಹ ದಾಖಲೆಗಳನ್ನು ಸುಲಭವಾಗಿ ಚೆಕ್ ಮಾಡಬಹುದು.
ಭೂಮಿ ಆಪ್ :
ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಕರ್ನಾಟಕ ರಾಜ್ಯ ಸರ್ಕಾರವು ಡಿಜಿಟಲೀಕರಣಗೊಳಿಸಿತು. ರೈತರಿಗೆ ಜಮೀನಿಗೆ ಸಂಬಂಧಿಸಿದ ದಾಖಲೆಗಳು 2000 ರಿಂದ ಲಭ್ಯವಾಗುವಂತೆ ಭೂಮಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಭೂಮಿ ಆಪನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಭೂಮಿ ಆಪ್ ಡೌನ್ಲೋಡ್ ಮಾಡಿಕೊಂಡಿರುವ ವಿಧಾನ :
ತಮ್ಮ ಮೊಬೈಲ್ ನಲ್ಲಿ ರೈತರು ಭೂಮಿ ಆಪನ್ನು ಇನ್ಸ್ಟಾಲ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. https://play.google.com/store/apps/details?id=app.bmc.com.BHOOMI_MRTC&pli=1 ಈ ಲಿಂಕ್ ಅನ್ನು ಓಪನ್ ಮಾಡಿದ ನಂತರ ನಿಮಗೆ ಭೂಮಿ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.
ಇದನ್ನು ಓದಿ : ಕರ್ನಾಟಕ ಬ್ಯಾಂಕ್ ನಲ್ಲಿ ಹೊಸ ನೇಮಕಾತಿ : ನಿಮಗೂ ಕೆಲಸ ಸಿಗುತ್ತೆ ಅರ್ಜಿ ಸಲ್ಲಿಸಿ
ಭೂಮಿ ಆಪ್ ನಿಂದ ಯಾವೆಲ್ಲ ದಾಖಲೆ ಪಡೆಯಬಹುದು :
ಭೂಮಿ ಆಪ್ ನಲ್ಲಿ ರೈತರು ವ್ಯೂ ಆರ್‌ಟಿಸಿ ಇಂಫಾರ್ಮೇಷನ್ ಇಂದ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಸರ್ವೆ ನಂಬರ್ ಹಾಕಿ ಅದರಲ್ಲಿ ಹಿಸಾ ನಂಬರನ್ನು ನಮೂದಿಸಬೇಕು ಅದಾದ ನಂತರ ಫೆಚ್ಚೆ ಡೀಟೇಲ್ಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಮೂದಿಸಿ ಸರ್ವೆ ನಂಬರ್ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಅದರಂತೆ ಸರ್ವೆ ನಂಬರ್ ಎಷ್ಟು ಎಕರೆ ಹೊಂದಿದೆ ಯಾವ ಯಾವ ರೈತರು ಸರ್ವೇ ನಂಬರ್ ನಲ್ಲಿದ್ದಾರೆ ಹಿಂಗಾರು ಮುಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಯಾವ ಯಾವ ಬೆಳೆಗೆ ಪರಿಹಾರ ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಭೂಮಿ ಆಪ್ ನಲ್ಲಿ ತಿಳಿದುಕೊಳ್ಳಬಹುದು.
ಒಟ್ಟಾರೆ ಕರ್ನಾಟಕ ಸರ್ಕಾರವು ರೈತರಿಗೆ ಉಪಯೋಗವಾಗುವ ಉದ್ದೇಶದಿಂದ ಭೂಮಿ ಆಪನ್ನು ಬಿಡುಗಡೆ ಮಾಡಿದ್ದು ಈ ಆಪ್ ನ ಮೂಲಕ ಸುಲಭವಾಗಿ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮೊಬೈಲ್ ನಲ್ಲಿಯೇ ಕುಳಿತು ಕೆಲವೇ ನಿಮಿಷಗಳಲ್ಲಿ ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ಮೊಬೈಲ್ ನಲ್ಲಿಯೇ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಬಹುದು ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ನಿಮ್ಮಗೆ 18 ವರ್ಷ ವಯಸ್ಸಾಗಿದ್ದರೆ ಆಧಾರ್ ಕಾರ್ಡ್ ಇದ್ದರೆ 3 ಹಣ ಸಿಗುತ್ತೆ ನೋಡಿ- 5 ನಿಮಿಷದಲ್ಲಿ ಸಿಗುತ್ತೆ
- ಪಶು ಪಾಲಕರಿಗೆ ಆರ್ಥಿಕ ನೆರವು : ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಪಡೆಯಿರಿ