ನಮಸ್ಕಾರ ಸ್ನೇಹಿತರೆ ಸರ್ಕಾರಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಹೊಸ ಹೊಸ ನಿಯಮಗಳನ್ನು ಒಂದು ತಿಂಗಳು ಮುಗಿದ ಇನ್ನೊಂದು ತಿಂಗಳು ಆರಂಭವಾಗುತ್ತಿದ್ದಂತೆ ಜಾರಿಗೆ ತರುತ್ತದೆ. ಅಲ್ಲದೆ ಇರುವಂತಹ ನಿಯಮಗಳಲ್ಲೂ ಸಹ ಪರಿಷ್ಕರಣೆಯನ್ನು ಮಾಡುತ್ತವೆ, ಅದರಲ್ಲಿ ಇದೀಗ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ತಿಂಗಳು ನಾಳೆಯಿಂದಲೇ ಈ ಹೊಸ ನಿಯಮವು ಕೆಲವು ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಬದಲಾವಣೆ ಮಾಡಲಾಗಿದೆ.

ಹಣಕಾಸಿನ ವಹಿವಾಟದಲ್ಲಿ ಬದಲಾವಣೆ :
ಕೆಲವು ಹಣಕಾಸಿನ ವಹಿವಾಟು ವಿಚಾರದಲ್ಲಿ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ತಿಂಗಳಿನಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು ಷೇರು ಮಾರುಕಟ್ಟೆಯಲ್ಲಿ ಬ್ಯಾಂಕ್ ವ್ಯವಹಾರ ಮಾಡುವವರು ಹೂಡಿಕೆ ಮಾಡುವವರು ಹಾಗೂ ಸರ್ಕಾರಿ ಕೆಲಸಗಳಲ್ಲಿ ಇರುವವರು ಈ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಡಿಸೆಂಬರ್ ತಿಂಗಳಿನಿಂದ ಸಾಮಾನ್ಯರು ಕೂಡ ಸರ್ಕಾರವು ವಿಧಿಸಲಿರುವ ಈ ನಿಯಮಗಳನ್ನು ತಿಳಿದುಕೊಳ್ಳದಿದ್ದರೆ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಡಿಸೆಂಬರ್ ನಿಂದ ಹೊಸ ನಿಯಮ :
ಕೆಲವೊಂದು ಮಹತ್ವದ ಬದಲಾವಣೆಗಳನ್ನು ಡಿಸೆಂಬರ್ ತಿಂಗಳಲ್ಲಿ ಮಾಡಲಾಗಿದ್ದು ಅದರಲ್ಲಿಯೂ ಮುಖ್ಯವಾಗಿ ಐದು ಬದಲಾವಣೆಗಳು ನೋಡಬಹುದಾಗಿದೆ ಅವುಗಳೆಂದರೆ,
ಸಿಮ್ ಕಾರ್ಡ್ ಖರೀದಿ ಮಾಡುವ ಸಂದರ್ಭದಲ್ಲಿ :
ಸಿಂಪಲ್ ಖರೀದಿ ಮಾಡುವವರಿಗೆ ಹೊಸ ನಿಯಮವನ್ನು ಸರ್ಕಾರವು ಜಾರಿಗೆ ತಂದಿದ್ದು ಬಲ್ಕ್ ಆಗಿ ಸಿಮ್ ಕಾರ್ಡ್ ಅನ್ನು ಇನ್ನು ಮುಂದೆ ಯಾರೂ ಕೂಡ ಖರೀದಿಸುವಂತಿಲ್ಲ. ಪೊಲೀಸ್ ಪರಿಶೀಲನೆಗೆ ಸಿಮ್ ಕಾರ್ಡ್ ಖರೀದಿ ಮಾಡುವವರು ಸಹ ಹಾಗೂ ಮಾರಾಟ ಮಾಡುವವರು ಸಹ ಒಳಗಾಗಬೇಕು. ವ್ಯಾಪಾರ ಮಾಡುವವರು ಸಿಮ್ ಕಾರ್ಡ್ ಗಳಿಗೆ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರದ ಈ ನಿಯಮಗಳನ್ನು ಉಲ್ಲಂಘಿಸಿದರೆ 10 ಲಕ್ಷ ದಂಡ ಹಾಗೂ ಜೈಲು ಶಿಕ್ಷೆಯನ್ನು ತಪ್ಪದೇ ಅನುಭವಿಸಬೇಕಾಗುತ್ತದೆ. ಅಲ್ಲದೆ ಈ ನಿಯಮ ಡಿಸೆಂಬರ್ ಒಂದರಿಂದ ಜಾರಿಗೆ ಬರಲಿದೆ.
ಪಿಂಚಣಿಯಲ್ಲಿ ಬದಲಾವಣೆ :
2024ರಲ್ಲಿಯೂ ಹಿರಿಯ ನಾಗರಿಕರು ಅಥವಾ 60 ವರ್ಷ ಮೇಲ್ಪಟ್ಟವರು ಪಿಂಚಣಿಯನ್ನು ಪಡೆದುಕೊಳ್ಳಬೇಕಾದರೆ ಜೀವನ ಪ್ರಮಾಣ ಪತ್ರವನ್ನು ಮುಖ್ಯವಾಗಿ ಸಲ್ಲಿಸಲೇಬೇಕು. ಮೂವತ್ತರವರೆಗೆ ಇದಕ್ಕೆ ಸರ್ಕಾರವು ಅವಕಾಶ ಕಲ್ಪಿಸಲಾಗಿದ್ದು ಜೀವನ ಪ್ರಮಾಣ ಪತ್ರವನ್ನು ಇಂದಿನಿಂದಲೇ ಸಲ್ಲಿಕೆ ಮಾಡದಿದ್ದರೆ ಪಿಂಚಣಿ ಹಣ ಖಾತೆಗೆ ಡಿಸೆಂಬರ್ ತಿಂಗಳಿನಿಂದ ಜಮಾ ಆಗುವುದಿಲ್ಲ.
ಇದನ್ನು ಓದಿ : ಕ್ರೆಡಿಟ್ ಕಾರ್ಡ್ ಬಳಸುವವರಿಗೆ EMI ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
ಎಲ್ಪಿಜಿ ಗ್ಯಾಸ್ ಸಿಲೆಂಡರ್ ನಲ್ಲಿ ವ್ಯತ್ಯಾಸ :
ತೈಲ ಕಂಪನಿಗಳು ಬೆಲೆ ಹೆಚ್ಚಿಸಿದ ಪರಿಣಾಮವಾಗಿ ನವೆಂಬರ್ ತಿಂಗಳಿನಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯೂ ಸಹ ಏರಿಕೆ ಮಾಡಲಾಗಿದೆ. ಇದೀಗ ಬೆಲೆ ಪರಿಷ್ಕರಣೆ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದ್ದು ಕನಿಷ್ಠ ಡಿಸೆಂಬರ್ ತಿಂಗಳಿನಲ್ಲಿ ಆದರೂ ಬೆಲೆ ಇಳಿಕೆ ಆಗಬಹುದೆಂದು ಗ್ರಾಹಕರು ನಿರೀಕ್ಷಿಸಿದ್ದಾರೆ ಇಲ್ಲವಾದರೆ ಗ್ರಾಹಕರ ಜೇಬಿಗೆ ಇದರಿಂದ ಕತ್ತರಿ ಬೀಳುವುದು ಗ್ಯಾರಂಟಿಯಾಗಿದೆ.
ಹೀಗೆ ಕೇಂದ್ರ ಸರ್ಕಾರವು ಜನಸಾಮಾನ್ಯರಿಗೂ ಹಾಗೂ ಕೆಲವು ಡೀಲರ್ಗಳಿಗೂ ಈ ಹೊಸ ನಿಯಮಗಳನ್ನು ಡಿಸೆಂಬರ್ 1ರಿಂದ ಜಾರಿಗೆ ತಂದಿದ್ದು ಈ ಹೊಸ ನಿಯಮಗಳನ್ನು ತಪ್ಪದೆ ಎಲ್ಲರೂ ಪಾಲಿಸಬೇಕು ಇಲ್ಲದಿದ್ದರೆ ಸರ್ಕಾರದಿಂದ ಶಿಕ್ಷೆಗೆ ಒಳಪಡಸಲಾಗುತ್ತದೆ. ಹಾಗಾಗಿ ಡಿಸೆಂಬರ್ 1ರಿಂದ ಯಾವೆಲ್ಲ ನಿಯಮಗಳು ಬದಲಾವಣೆ ಯಾಗಿದೆ ಎಂಬುದರ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಲಕ್ಷಾಂತರ ರೈಲ್ವೆ ಪ್ರಯಾಣಿಕರಿಗೆ :ಉಚಿತ ಆಹಾರ, ಹೊಸ ನಿಯಮ
ಸುಲಭವಾಗಿ ಬ್ಯುಸಿನೆಸ್ ಮಾಡಿ : ಈ ಲೇಖನದಲ್ಲಿ ಕೆಲವು ಬೆಸ್ಟ್ ಐಡಿಯಾಗಳಿವೆ