ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ವಿದ್ಯಾರ್ಥಿಗಳಿಗೆ 25,000 ಗಳವರೆಗೆ ಸ್ಕಾಲರ್ಶಿಪ್ ಸಿಗುತ್ತಿದ್ದು ಆಸ್ಕಾಲರ್ಷಿಪ್ನ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. 25000ಗಳನ್ನು ದಿಶಾ ಸ್ಕಾಲರ್ಶಿಪ್ ಅಡಿಯಲ್ಲಿ ನೀಡಲಾಗುತ್ತಿದ್ದು ಈ ಸ್ಕಾಲರ್ಶಿಪ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲ ಅರ್ಹತೆಗಳು ಇರಬೇಕು ಹಾಗೂ ಯಾವೆಲ್ಲ ದಾಖಲೆಗಳು ಇರಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ನೋಡಬಹುದು.
ದಿಶಾ ಸ್ಕಾಲರ್ಶಿಪ್ :
ವೃತ್ತಿಪರ ಡಿಗ್ರಿ ಅಂದರೆ ತಾಂತ್ರಿಕ ಹಾಗೂ ತಾಂತ್ರಿಕೇತರ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಹಾಗೂ ಜನರ ಡಿಗ್ರಿ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಧಿಶ್ಯಾ ಸ್ಕಾಲರ್ಶಿಪ್ ಅನ್ನು ನೀಡುತ್ತಿದ್ದು ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು. ದಿಶಾಸ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಮೊದಲನೇ ವರ್ಷದಲ್ಲಿ ಯಾವುದೇ ಪದವಿ ಪ್ರವೇಶ ಪಡೆದಿರಬೇಕು. ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪಿಯುಸಿ ಪರೀಕ್ಷೆಯಲ್ಲಿ 65 ಪರ್ಸೆಂಟ್ ಅಂಕಗಳೊಂದಿಗೆ ಪಾಸಾಗಿರಬೇಕು.
ಈ ಸ್ಕಾಲರ್ ಶಿಪ್ ಅನ್ನು ಕೇವಲ ಪುಣೆ ಹಾಗೂ ದೆಹಲಿ ಮೂಲದ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದೆ. ಕುಟುಂಬದ ವಾರ್ಷಿಕ ಆದಾಯವು 5 ಲಕ್ಷಕ್ಕಿಂತ ಕಡಿಮೆ ಇರಬೇಕು. ಡಿಷಸ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ 17ರಿಂದ 29 ವರ್ಷದೊಳಗಿರಬೇಕು. ನಾಲ್ಕು ವರ್ಷಗಳವರೆಗೆ ಪದವಿಯನ್ನು ಮುಂದುವರಿಸಿದರೆ ಈ ವಿದ್ಯಾರ್ಥಿ ವೇತನವನ್ನು ನಾಲ್ಕು ವರ್ಷದವರೆಗೂ ಕೂಡ ಪಡೆಯಬಹುದಾಗಿದೆ.
ಇದನ್ನು ಓದಿ : ಭಾರತ್ ಅಕ್ಕಿ 29 ಎಲ್ಲಿ ? ಯಾರಿಗೆ ಈ ಸೌಲಭ್ಯ ಲಭ್ಯ : ಸಾರ್ವಜನಿಕರಿಗೆ ಕೂಡಲೇ ಗಮನಿಸಿ !
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
ದಿಶಾಂಕ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ವಿದ್ಯಾರ್ಥಿಗಳು ಪಾಸ್ಪೋರ್ಟ್ ಸೈಜ್ ಫೋಟೋ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್ ಪ್ರವೇಶ ಪಡೆದಿರುವ ರಶೀದಿ ಬ್ಯಾಂಕ್ ಪಾಸ್ ಬುಕ್ ಅಂಕಪಟ್ಟಿ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಈ ಸ್ಕಾಲರ್ಶಿಪ್ ಅನ್ನು ಬಿರ್ಲಾ ಕಂಪನಿಯವರು ನೀಡುತ್ತಿದ್ದು ಈ ಸ್ಕಾಲರ್ಶಿಪ್‌ಗೆ ಅರ್ಜಿಯನ್ನು ಸಲ್ಲಿಸಲು ಅಧಿಕೃತ ವೆಬ್ಸೈಟ್ ಆದ https://www.buddy4study.com/page/disha-scholarship-program ನೀವು ವೆಬ್ ಸೈಟ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ದಿಶಾಸ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ನಿಗದಿತ ದಿನಾಂಕ ಅಂದರೆ ಫೆಬ್ರವರಿ 25 2024ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟಾರೆ ಬಿರ್ಲಾ ಕಂಪನಿಯವರು ಕೂಡ ದಿಶಾಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಿದ್ದು ದಿಶಾ ಸ್ಕಾಲರ್ಶಿಪ್ನ ಮೂಲಕ ವಿದ್ಯಾರ್ಥಿಗಳು ತಮ್ಮ ಉನ್ನತ ಮಟ್ಟದ ವ್ಯಾಸಂಗವನ್ನು ಮಾಡಬಹುದಾಗಿದೆ. ಹಾಗಾಗಿ ನಿಮಗೆ ತಿಳಿದಿರುವ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ದಿಶಾ ಸ್ಕಾಲರ್ಶಿಪ್ ನ ಮೂಲಕ 25,000ಗಳ ವಿದ್ಯಾರ್ಥಿ ವೇತನವನ್ನು ವಿದ್ಯಾಭ್ಯಾಸ ಮಾಡಲು ಪಡೆಯಿರಿ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- 5 ಲಕ್ಷದವರೆಗೆ ಉಚಿತ ಆರೋಗ್ಯ ಸೌಲಭ್ಯ ಪಡೆಯಿರಿ : ಆಯುಷ್ಮಾನ್ ಯೋಜನೆ
- ಈ ಜಿಲ್ಲೆಯಲ್ಲಿ ಉದ್ಯೋಗವಕಾಶ : DCC ಬ್ಯಾಂಕ್ ನಲ್ಲಿ ಉದ್ಯೋಗವಕಾಶ ! ಅರ್ಜಿ ಸಲ್ಲಿಸಿ !