ನಮಸ್ಕಾರ ಸ್ನೇಹಿತರೆ ರೈತರು ಈಗಾಗಲೇ ರಾಜ್ಯದಲ್ಲಿ ಬರ ಪರಿಹಾರದ ಹಣ ಯಾವಾಗ ಕೈ ಸೇರುತ್ತದೆ ಎಂದು ಕಾದು ಕುಳಿತಿದ್ದಾರೆ. ರಾಜ್ಯದಲ್ಲಿ ಸುಮಾರು 257 ಪ್ರದೇಶಗಳನ್ನು ಕಳೆದ ಎರಡು ಮೂರು ತಿಂಗಳ ಹಿಂದೆ, ಬರಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರವು ಘೋಷಣೆ ಮಾಡಿತು ಹಾಗೂ ಇಂತಹ ಸ್ಥಳದಲ್ಲಿ ವಾಸಿಸುತ್ತಿರುವ ರೈತರಿಗಾಗಿ ಸರ್ಕಾರ ಬರ ಪರಿಹಾರ ನೀಡುವುದಾಗಿಯೂ ಸಹ ಘೋಷಣೆ ಮಾಡಿದ್ದು ಆದರೆ ರೈತರಿಗೆ ಇಲ್ಲಿಯವರೆಗೆ ಯಾವುದೇ ರೀತಿಯ ಬರ ಪರಿಹಾರದ ಹಣ ಸಿಕ್ಕಿರುವುದಿಲ್ಲ.
ಬರ ಪರಿಹಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು :
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚಿಗೆ ಪ್ರಿಯ ಪಟ್ಟಣದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದು ಸದ್ಯದಲ್ಲಿಯೇ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅವರನ್ನು ರಾಜ್ಯಕ್ಕೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವಂತೆ ಭೇಟಿಯಾಗಿ ತಿಳಿಸಲಾಗಿದೆ ಅವರು ಕೂಡ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಆದರೆ ಯಾವುದೇ ರೀತಿಯ ಬರ ಪರಿಹಾರದ ಹಣ ಇದುವರೆಗೂ ಬಿಡುಗಡೆ ಆಗಿಲ್ಲ ಇನ್ನೊಮ್ಮೆ ಸಭೆಯನ್ನು ನಡೆಸಿ ಬರ ಪರಿಹಾರದ ಬಿಡುಗಡೆ ಹಣ ಕಾರಣಾಂತರಗಳಿಂದ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಈ ಬಾರಿಯ ಬಿಗ್ ಬಾಸ್ ನಲ್ಲಿ ಒಂದೇ ದಿನ ಇಬ್ಬರು ವಿಜೇತರು, ಎರಡು ಟ್ರೋಫಿ ಇದು ಡಬ್ಬಲ್ ಧಮಾಕಾ
ರಾಜ್ಯದಿಂದಲೇ ಬರ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತದೆ :
ರಾಜ್ಯಕ್ಕೆ ಇತ್ತೀಚಿಗೆ ಮಾನ್ಯ ಪ್ರಧಾನಮಂತ್ರಿಯವರು ಬಂದಾಗಲೂ ಕೂಡ ಈ ವಿಚಾರವನ್ನು ನಾನು ಅವರ ಗಮನಕ್ಕೆ ತಂದಿದ್ದೇನೆ ಬರ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಅವರಿಗೆ ತಿಳಿಸಿದ್ದೇನೆ ಆದರೆ ಯಾವುದೇ ರೀತಿಯ ಉತ್ತರ ಕೇಂದ್ರ ಸರ್ಕಾರದಿಂದ ಸಿಕ್ಕಿರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು.
ರೈತರಿಗೆ ರಾಜ್ಯದಲ್ಲಿ ಕುಡಿಯುವ ನೀರಿಗೆ ಧನಕರುಗಳನ್ನು ಮೇಯಿಸಲು ಅಥವಾ ಇತರ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಯಾವುದೇ ರೀತಿಯ ಹಿಂದೆಟು ರಾಜ್ಯ ಸರ್ಕಾರ ಹಾಕಿಲ್ಲ ಗುಳೆ ಹೋಗುವುದಕ್ಕೂ ಕೂಡ ರಾಜ್ಯದ ಜನರನ್ನು ಬಿಟ್ಟಿಲ್ಲ ಅದೇ ರೀತಿ ರಾಜ್ಯ ಸರ್ಕಾರದಿಂದಲೇ 550 ಕೋಟಿ ರೂಪಾಯಿಗಳನ್ನು ಬರ ಪರಿಹಾರಕ್ಕೆ ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಹಾಗಾಗಿ ರೈತರ ಖಾತೆಗೆ ಇನ್ನೂ ಒಂದು ವಾರಗಳಲ್ಲಿ ಮೊದಲ ಕಂತಿನ ಎರಡು ಸಾವಿರ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ರಾಜ್ಯದ ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಹೀಗೆ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಪರಿಹಾರದ ಹಣವನ್ನು ಇನ್ನೊಂದೆರಡು ವಾರಗಳಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರಾ ಅಥವಾ ಯಾರಾದರೂ ಬರ ಪರಿಹಾರದ ಹಣಕ್ಕಾಗಿ ಕಾಯುತ್ತಿದ್ದಾರೆ ಅವರಿಗೆ ಶೀಘ್ರದಲ್ಲಿಯೇ ಬರ ಪರಿಹಾರದ ಹಣ ಖಾತೆಗೆ ಜಮಾ ಆಗುತ್ತದೆ ಎಂಬ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಕರ್ನಾಟಕ ಬ್ಯಾಂಕ್ ನಲ್ಲಿ ಮತ್ತೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
- LPG ಸಬ್ಸಿಡಿ ಹಣ ಬಂದಿದೆಯಾ ? ಹಣ ಬಂದಿರುವುದರ ಬಗ್ಗೆ ಹೀಗೆ ಚೆಕ್ ಮಾಡಿಕೊಳ್ಳಿ