News

ಗೃಹಲಕ್ಷ್ಮಿ ಹಣ ಪಡೆಯಬೇಕಾದರೆ E-KYC ಕಡ್ಡಾಯ : ಹಾಗಾದರೆ ಇ-ಕೆವೈಸಿ ಮಾಡಿಸುವುದು ಹೇಗೆ?

E-KYC is mandatory to receive Grilahakshmi money

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಇದುವರೆಗೂ ಕೂಡ ಹಾಗೂ ಈ ತಿಂಗಳಿನ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರದಿದ್ದರೆ ಏನು ಮಾಡಬೇಕು ಎಂಬುದರ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಇನ್ನು ಕೂಡ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇದ್ದರೆ ಈ ಕೆಲಸ ಮಾಡುವುದರ ಮೂಲಕ ಹಣ ಬರುವಂತೆ ಮಾಡಿಕೊಳ್ಳಬಹುದಾಗಿದೆ.

E-KYC is mandatory to receive Grilahakshmi money
E-KYC is mandatory to receive Grilahakshmi money

ಹಣ ಪಡೆಯಲು ಈಕೆವೈಸಿ ಮಾಡಿಸಬೇಕು :

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಬೇಕಾದರೆ ಕೆ ವೈ ಸಿ ಮಾಡಿಸಬೇಕಾಗಿದೆ. ಹಾಗಾದರೆ ಕೆವೈಸಿ ಮಾಡಿಸುವುದು ಹೇಗೆ ಕೆವೈಸಿ ಮಾಡಿಸಲು ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆ ಸಾಕಷ್ಟು ಪ್ರಶ್ನೆಗಳು ಇರುತ್ತವೆ ಅಂತವರಿಗಾಗಿ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ನೀವೇನಾದರೂ ಪಡಿತರ ಚೀಟಿಯನ್ನು ಹಾಕಿ ಕೆವೈಸಿಯನ್ನು ಮಾಡಿಸಿಲ್ಲದಿದ್ದರೆ ಅನ್ನಭಾಗ್ಯ ಯೋಜನೆಯ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ದೊರಕುವುದಿಲ್ಲ.

ಈ ಕೆ ವೈ ಸಿ ಯನ್ನು ಮಾಡಿಸಬೇಕಾದರೆ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಡಿ ಬಿ ಟಿ ಸ್ಟೇಟಸ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಕೆಲವೊಂದಿಷ್ಟು ಪ್ರಕ್ರಿಯೆಗಳು ಕಾಣಿಸುತ್ತವೆ ಆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಂಡ ನಂತರ ಪಡಿತರ ಚೀಟಿಗೆ ಈ ಕೆವೈಸಿ ಮಾಡಿಸಬಹುದಾಗಿದೆ. ಆಧಾರ್ ನಂಬರನ್ನು ಹಾಕುವ ಮೂಲಕ ಸದಸ್ಯರ ಹೆಸರುಗಳ ಮುಂದೆ ಈಕೆ ವೈಸಿ ಮಾಡಿಸಿಲ್ಲವೋ ಇದೆಯೋ ಎಂಬುದರ ಸಂಪೂರ್ಣ ಮಾಹಿತಿಯನ್ನು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಇದನ್ನು ಓದಿ : ರೈತರಿಗೆ ಸಿಹಿ ಸುದ್ದಿ : 8000 ರೈತರ ಖಾತೆಗೆ ಜಮಾ ಆಗುತ್ತದೆ ಕೂಡಲೇ ಲಿಂಕ್ ಬಳಸಿ

ಹೀಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಬೇಕಾದರೆ ಈಕೆ ವೈಸಿ ರೇಷನ್ ಕಾರ್ಡ್ ಗೆ ಕಡ್ಡಾಯವಾಗಿದ್ದು ಹೀಗೆ ತಪ್ಪದೆ ರೇಷನ್ ಕಾರ್ಡ್ ಹೊಂದಿರುವವರು ಮಾಡಿಸಬೇಕಾಗುತ್ತದೆ. ಹಾಗಾಗಿ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬರಬೇಕಾದರೆ ರೇಷನ್ ಕಾರ್ಡ್ ಗೆ ಈ ಕೆವೈಸಿ ಕಡ್ಡಾಯವಾಗಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...