ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಲೆಕ್ಟ್ರಾನಿಕ್ ವಾಹನದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಾಹನಗಳ ಬೇಡಿಕೆ ಬಹಳ ಹೆಚ್ಚಾಗಿದ್ದು ಅದರಲ್ಲಿಯೂ ಹೊಸ ಕಾರು ಏನಾದರೂ ಮಾರುಕಟ್ಟೆಗೆ ಕಾಲಿಟ್ಟರೆ ಅದನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚುತ್ತದೆ. ಅದರಲ್ಲಿಯೂ ಭಾರತದಲ್ಲಿ ಪ್ರತಿವರ್ಷ ಕಾರು ಖರೀದಿ ಹೆಚ್ಚುತ್ತಿದ್ದು ವಾಹನಗಳ ಮಾರಾಟವು ದಾಖಲೆಯ ಮಟ್ಟದಲ್ಲಿದೆ ಎಂದು ಹೇಳಬಹುದು. ಹೊಸ ಕಾರು ಖರೀದಿ ಮಾಡುವ ಸಂದರ್ಭದಲ್ಲಿ ಮುಖ್ಯವಾಗಿ ಮೈಲೇಜ್ ಫೀಚರ್ಸ್ ಹೇಗಿದ್ದರೆ ಒಳ್ಳೆಯದು ಎಂಬುದರ ಕುರಿತು ತಿಳಿದುಕೊಂಡು ಆನಂತರ ಖರೀದಿ ಮಾಡುವುದು ಸೂಕ್ತವಾಗಿರುತ್ತದೆ.
ಎಲೆಕ್ಟ್ರಾನಿಕ್ ವಾಹನದ ಬೇಡಿಕೆ ಹೆಚ್ಚಾಗುತ್ತಿದೆ :
ದಿನದಿಂದ ದಿನಕ್ಕೆ ಇಂದು ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ಎಲೆಕ್ಟ್ರಾನಿಕ್ ವಾಹನದತ್ತ ಜನರು ಆಕರ್ಷಿತರಾಗಿದ್ದಾರೆ. ಟೊಯೋಟೊ ಮೋಟಾರ್ ಎಲೆಕ್ಟ್ರಿಕಲ್ ವಿಭಾಗದಲ್ಲಿ ಇದೀಗ ಹೆಚ್ಚು ಅಭಿವೃದ್ಧಿ ಸಾಧಿಸಲು ಮುಂದಾಗಿದ್ದು ಜಪಾನ್ ಮೂಲದ ಟೊಯೋಟೊ ಮೋಟರ್ ಲಿಥಿಯಂ ಎನ್ ಬ್ಯಾಟರಿಗಳನ್ನು 2026 ರಿಂದ ಬಿಡುಗಡೆಗೊಳಿಸಲಾಗಿದ್ದು ಈ ಬಗ್ಗೆ ಕಾರನ್ನು ಖರೀದಿಸುವ ಹಾಗೂ ಕಾರುಪ್ರಿಯರಲ್ಲಿ ಆಸಕ್ತಿ ಹೆಚ್ಚಾಗಿದೆ ಎಂದು ಹೇಳಬಹುದು.
ಎಲೆಕ್ಟ್ರಿಕ್ ವಾಹನದ ಉತ್ತಮ ಬ್ಯಾಟರಿ ಸಾಮರ್ಥ್ಯ :
ಸಾವಿರ ಕಿಲೋಮೀಟರ್ ಅಷ್ಟು ಚಲಾಯಿಸಲು ಇದು ಕೆಲವೇ ನಿಮಿಷಗಳ ಚಾರ್ಜಿನಲ್ಲಿ ಸಾಧ್ಯವಾಗುತ್ತದೆ ಅಂತಹ ಭಾರಿ ಸಾಮರ್ಥ್ಯದ ಬ್ಯಾಟರಿಗಳನ್ನು ಟೊಯೋಟೊ ಮೋಟಾರ್ ಕಂಪನಿಯು ಅಭಿವೃದ್ಧಿಪಡಿಸಲು ಮುಂದಾಗಿದೆ ಆದರೆ ಈ ಬ್ಯಾಟರಿಗಳು ಹೆಚ್ಚು ದುಬಾರಿಯಾಗಲಿವೆ ಎಂದು ಹೇಳಬಹುದು.
ಇದನ್ನು ಓದಿ : ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ : ತಿಂಗಳಿಗೆ 15,000 ಹಣ ಪಡೆಯಿರಿ
ಈ ಬ್ಯಾಟರಿಯ ಬದಲಾವಣೆ ಏನು ಇರಬಹುದು ?
ಈ ಬ್ಯಾಟರಿಯು ಸಾಂಪ್ರದಾಯಿಕ ಲಿಥಿಯಂ ಅಯಾನ್ ಬ್ಯಾಟರಿಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು ಶಕ್ತಿ ಸಾಮರ್ಥ್ಯವನ್ನು ಹೊಂದಿದೆ ಅಲ್ಲದೆ ಆಗಾಗ್ಗೆ ರಿಚಾರ್ಜ್ ಮಾಡುವ ಅಗತ್ಯವನ್ನು ಕಡಿಮೆ ಮಾಡಲಿಕ್ಕು ಇದು ವೇಗವಾಗಿ ಚಾರ್ಜ್ ಆಗುತ್ತದೆ. ಅದರ ಜೊತೆಗೆ ಆರಾಮ ಪ್ರಯಾಣದ ಅನುಭವವೂ ಕೂಡ ನೀಡಲಿದೆ. ಇದರ ಜೊತೆಗೆ ಎಲೆಕ್ಟ್ರಾನಿಕ್ ವಾಹನದಲ್ಲಿ ಇಂದು ಬೆಂಕಿ ಅಪಾಯ ಹೆಚ್ಚಿರುವ ಕಾರಣ ಈ ಬ್ಯಾಟರಿ ಸುರಕ್ಷಿತ ವಾಗಿದೆ ಎಂದು ಹೇಳಬಹುದು.
ಹೀಗೆ ಒಟ್ಟಾರೆಯಾಗಿ ಭಾರತೀಯ ಮಾರುಕಟ್ಟೆಯಲ್ಲಿ ವಾಹನವನ್ನು ಬಿಡುಗಡೆ ಮಾಡುತ್ತದೆ ಎಂಬುದರ ಸುದ್ದಿ ಹರಿದಾಡುತ್ತಿದ್ದು ಮುಂದಿನ ದಿನಗಳಲ್ಲಿ ಇದರ ಭವಿಷ್ಯ ಏನಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಹಾಗೂ ಕಾರು ಪ್ರೇಮಿಗಳಿಗೂ ಎಲೆಕ್ಟ್ರಿಕ್ ವಾಹನ ಬಿಡುಗಡೆಯಾಗಲಿದೆ ಎಂಬುದರ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಒಂದು ಲಕ್ಷ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತದೆ ತಿಳಿದಿದೆಯಾ ?
- ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಕುಡಿಯುವವರಿಗೆ ಎಚ್ಚರಿಕೆ!!! ನಿಮಗೆ ಏನೆಲ್ಲಾ ಸಮಸ್ಯೆ ಬರುತ್ತೆ ನೋಡಿ