News

ಮತ್ತೊಂದು ಹೊಸ ಯೋಜನೆ ಮಹಿಳೆಯರಿಗಾಗಿ : ತರಬೇತಿ ಜೊತೆಗೆ ಸಾಲವು ಕೂಡ ಲಭ್ಯವಿದೆ

Entrepreneurship Training Scheme for Women

ನಮಸ್ಕಾರ ಸ್ನೇಹಿತರೆ ಮಹಿಳೆಯರ ಸ್ವಾವಲಂಬನೆ ಜೀವನಕ್ಕಾಗಿ ರಾಜ್ಯ ಸರ್ಕಾರ ಒಂದಲ್ಲ ಒಂದು ರೀತಿಯಲ್ಲಿ ಯೋಜನೆಗಳನ್ನು 2023 ರಿಂದ ಜಾರಿಗೆ ತರುತ್ತಿರುವುದನ್ನು ನೋಡಬಹುದು. ಈಗ ಮತ್ತೊಂದು ಹೊಸ ಯೋಜನೆಯನ್ನು ಮಹಿಳೆಯರಿಗಾಗಿ ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ತಮ್ಮ ಉದ್ಯಮವನ್ನು ಆರಂಭಿಸಲು ಮಹಿಳೆಯರು ತರಬೇತಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಸರ್ಕಾರದಿಂದ ಪಡೆಯಬಹುದಾಗಿದೆ.

Entrepreneurship Training Scheme for Women
Entrepreneurship Training Scheme for Women

ಮಹಿಳೆಯರಿಗಾಗಿ ಹೊಸ ಯೋಜನೆ :

ಸ್ವಂತ ಉದ್ಯಮ ಮಾಡುವ ಕನಸನ್ನು ಸಾಕಷ್ಟು ಮಹಿಳೆಯರು ಹೊಂದಿರುತ್ತಾರೆ ಆದರೆ ಈ ಕನಸನ್ನು ಎಲ್ಲರಿಗೂ ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಈ ಹಿನ್ನೆಲೆಯಲ್ಲಿ ಇಂತಹ ಮಹಿಳೆಯರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರವು ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿಯು ಮುಖ್ಯವಾಗಿ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದ್ದು ಪ್ರತಿ ತಿಂಗಳು 2000ಗಳನ್ನು ಈ ಮೂಲಕ ಗೃಹಿಣಿ ಯಾರು ಪಡೆಯಬಹುದಾಗಿದೆ.

ಇದನ್ನು ಓದಿ : 1500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕ : ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ, ಹೆಚ್ಚಿನ ಮಾಹಿತಿ ಇಲ್ಲಿದೆ

ಬೆಂಗಳೂರಿನ ಐಐಎಂ ಸಂಸ್ಥೆ ಮೂಲಕ ಧನ ಸಹಾಯ :

ಮಹಿಳೆಯರಿಗಾಗಿ ಮತ್ತೊಮ್ಮೆ ಹೊಸ ಯೋಜನೆ ಯನ್ನು ರಾಜ್ಯ ಸರ್ಕಾರ ಬೆಂಗಳೂರಿನ ಸಂಸ್ಥೆಯ ಸಹಯೋಗದಲ್ಲಿ ಜಾರಿಗೆ ತಂದಿದ್ದು ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಈ ಯೋಜನೆ ಪ್ರಯೋಜನಕಾರಿಯಾಗಲಿದೆ. ಪರಿಶಿಷ್ಟ ಜಾತಿಯ ಪದವಿ ಮುಗಿಸಿರುವ ಮಹಿಳೆಯರಿಗೆ ಐಐಎಂ ಸಂಸ್ಥೆ ಸ್ವಂತ ಉದ್ಯಮ ಆರಂಭಿಸಲು ಉದ್ಯಮಶೀಲತ ತರಬೇತಿಯನ್ನು ನೀಡುತ್ತಿದ್ದು ಇಲ್ಲಿ ಉದ್ಯಮ ಮಾಡಿಕೊಳ್ಳಲು ಉದ್ಯಮಶೀಲತಾ ತರಬೇತಿಯನ್ನು ಸಹಾಯಕವಾಗುವಂತೆ ಪಡೆದುಕೊಳ್ಳಬಹುದಾಗಿದೆ.

ಉದ್ಯಮಶೀಲತ ತರಬೇತಿಗೆ ಅರ್ಜಿ ಸಲ್ಲಿಸುವ ವಿಧಾನ :

ಪರಿಶಿಷ್ಟ ಜಾತಿಯ ಪದವಿ ಪಡೆದಿರುವ ಆಸಕ್ತ ಮಹಿಳೆಯರು ಸ್ವಂತ ಉದ್ಯಮವನ್ನು ಆರಂಭಿಸುವುದಕ್ಕಾಗಿ ರಾಜ್ಯ ಸರ್ಕಾರವು ಉದ್ಯಮಶೀಲತಾ ತರಬೇತಿಯನ್ನು ಬೆಂಗಳೂರಿನ ಮೂಲಕ ಪಡೆದುಕೊಳ್ಳಬಹುದಾಗಿತ್ತು ಆಸಕ್ತ ಅಭ್ಯರ್ಥಿಗಳು 2024ರ ಜನವರಿ 31ರ ಒಳಗಾಗಿ ಅರ್ಜಿಯನ್ನು ಸಲ್ಲಿಸಿ ತರಬೇತಿಯನ್ನು ಪಡೆಯಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಆದ https://swdservices.karnataka.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರು ನಾಲ್ಕರಿಂದ ಆರು ತಿಂಗಳ ಕಾಲ ಉದ್ಯಮಶೀಲತ ತರಬೇತಿಯನ್ನು ಪಡೆಯಬಹುದಾಗಿದೆ.


ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದೀಗ ಉದ್ಯಮಶೀಲದ ತರಬೇತಿಯನ್ನು ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಬೆಂಗಳೂರಿನ ಐಐಎಂ ಸಂಸ್ಥೆಯ ಮೂಲಕ ನಡೆಸಲಾಗುತ್ತಿದ್ದು ಈ ಮಾಹಿತಿಯನ್ನು ಪರಿಶಿಷ್ಟ ಜಾತಿಯ ಪದವಿ ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಅವರು ಕೂಡ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಮಾಡಿರಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...