Agriculture

ಪಶು ಪಾಲಕರಿಗೆ ಆರ್ಥಿಕ ನೆರವು : ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಪಡೆಯಿರಿ

Financial assistance to animal husbandry

ನಮಸ್ಕಾರ ಸ್ನೇಹಿತರೇ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಹೈನುಗಾರಿಕೆ ಕುರಿ ಮೇಕೆ ಕೋಳಿ ಮೊಲ ಸಾಕಾಣಿಕೆ ಕಸುಬುಗಳಲ್ಲಿ ತೊಡಗಿಕೊಂಡಿರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಪಶುಪಾಲಕರಿಗೂ ಭಾರತ ಸರ್ಕಾರವು 2019 20ನೇ ಸಾಲಿನಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ವಿಸ್ತರಿಸಿದೆ. ಹೈನುಗಾರಿಕೆ ಕೋಳಿ ಮೊಲ ಸಾಕಾಣಿಕೆ ಕುರಿಮೇಕೆ ಸಾಕಾಣಿಕೆ ಕಸುಬುಗಳಲ್ಲಿ ತೊಡಗಿಕೊಂಡಿರುವ ರೈತರಿಗೆ ಈ ಕಾರ್ಯಕ್ರಮವು ಅಲ್ಪಾವಧಿಯ ದುಡಿಯುವ ಬಂಡವಾಳ ನೀಡುವ ಉದ್ದೇಶವನ್ನು ಹೊಂದಿದೆ.

Financial assistance to animal husbandry
Financial assistance to animal husbandry

ಕಡಿಮೆ ಬಡ್ಡಿ ದರದಲ್ಲಿ ಸಾಲ :

ಭಾರತ ಸರ್ಕಾರವು 2019 20ನೇ ಸಾಲಿನಿಂದ ಪಶುಪಾಲಕರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ವಿಸ್ತರಿಸಿದ್ದು ಅಲ್ಪಾವಧಿಯ ದುಡಿಯುವ ಬಂಡವಾಳ ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಪಶುಪಾಲಕರ ಅಗತ್ಯಕ್ಕೆ ತಕ್ಕಂತೆ ದುಡಿಯುವ ಬಂಡವಾಳಕ್ಕೆ ಈ ಯೋಜನೆಯ ಅಡಿಯಲ್ಲಿ ಬ್ಯಾಂಕುಗಳಿಂದ ಆರ್ಥಿಕ ನೆರವನ್ನು ಪಡೆಯಬಹುದಾಗಿದ್ದು .

ಶೇಕಡ ಎರಡರಷ್ಟು ಬಡ್ಡಿ ಸಹಾಯಧನವನ್ನು 2 ಲಕ್ಷ ರೂಪಾಯಿಗಳ ವರೆಗೆ ಸಾಲದ ಮೊತ್ತಕ್ಕೆ ನೀಡಲಾಗುತ್ತದೆ. ಅಲ್ಲದೆ ನಿಗದಿತ ಅವಧಿಯಲ್ಲಿ ಸಾಲವನ್ನು ಮರುಪಾವತಿ ಮಾಡದೇ ಇದ್ದರೆ ಹೆಚ್ಚುವರಿ ಯಾಗಿ ವಾರ್ಷಿಕ ಶೇಕಡ ಮೂರರಷ್ಟು ಬಡ್ಡಿ ಸಹಾಯಧನ ಸೌಲಭ್ಯವನ್ನು ಸಹ ಈ ಯೋಜನೆ ಮೂಲಕ ಪಡೆಯಬಹುದಾಗಿದೆ.

ಯಾರೆಲ್ಲ ಈ ಯೋಜನೆಯ ಸೌಲಭ್ಯ ಪಡೆಯಬಹುದು ?

ಕಿಸಾನ್ ಕ್ರೆಡಿಟ್ ನ ಸೌಲಭ್ಯವನ್ನು ಮೊಲ ಸಾಕಾಣಿಕೆ ಹಂದಿ ಸಾಕಾಣಿಕೆ ಕೋಳಿ ಸಾಕಾಣಿಕೆ ಹೈನುಗಾರಿಕೆ ಕುರಿ ಮೇಕೆ ಸಾಕಾಣಿಕೆ ಸೇರಿದಂತೆ ವಿವಿಧ ರೀತಿಯ ಪಶುಪಾಲಕರು ಜಂಟಿ ಹೊಣೆಗಾರಿಕೆ ಗುಂಪುಗಳು ಸ್ವಸಹಾಯ ಗುಂಪುಗಳು ಮತ್ತು ಮಹಿಳಾ ಸಂಘಗಳು ಈ ಯೋಜನೆ ಸೌಲಭ್ಯವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವ ವಿಧಾನ ಹೇಗೆ ? ಈ ಕಾರ್ಡ್ ಇಲ್ಲ ಅಂದರೆ ಹಣ ಇಲ್ಲ


ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :

ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಸಾಲ ಸೌಲಭ್ಯವನ್ನು ಪಡೆಯಬೇಕಾದರೆ ಪಶುಪಾಲಕರು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಬ್ಯಾಂಕಿನ ಹೆಸರು ಬ್ಯಾಂಕ ಕೆಸಿಸಿ ಖಾತೆಯ ವಿವರ ವಾಸದೃಢೀಕರಣ ಪತ್ರ ಆಧಾರ್ ಕಾರ್ಡ್ ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋ ದುಡಿಯುವ ಬಂಡವಾಳಕ್ಕೆ ಅಗತ್ಯವಿರುವ ಸಾಲ ಪಡೆಯಲು ಉದ್ದೇಶಿಸಿರುವ ಪಶುಪಾಲನ ಚಟುವಟಿಕೆಗಳ ವಿವರಗಳನ್ನು ಅರ್ಜಿಯ ಜೊತೆಗೆ ಹೊಂದಿರಬೇಕಾಗುತ್ತದೆ ಇದರಿಂದ ಅರ್ಹ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ :

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾದರೆ ಈ ಕೆಳಕಂಡ ತಾಲೂಕುಗಳ ಮುಖ್ಯ ಪಶುವೈದ್ಯಾಧಿಕಾರಿಗಳನ್ನು ರೈತರು ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕರಾದ ಡಾ ಜಿ ಎಂ ನಾಗರಾಜ ಅವರು ಪ್ರಕಟಣೆಯಲ್ಲಿ ರೈತರಿಗೆ ತಿಳಿಸಿದ್ದಾರೆ. ಸಹಾಯವಾಣಿ ಸಂಖ್ಯೆ ನೆಲಮಂಗಲ 9845637387

  • ದೊಡ್ಡಬಳ್ಳಾಪುರ- 9845305839
  • ದೇವನಹಳ್ಳಿ- 9480910509
  • ಹೊಸಕೋಟೆ -448988649
  • ಈ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವನ್ನು ನೀಡುತ್ತಿದ್ದು ನಿಮ್ಮ ಸ್ನೇಹಿತರು ಯಾರಾದರೂ ಪಶುಪಾಲನೆ ಮಾಡುತ್ತಿದ್ದರೆ ಅವರಿಗೆ ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಎಂಬ ಈ ಮಾಹಿತಿಯನ್ನು ಶೇರ್ ಮಾಡಿ ಇದರಿಂದ ಅವರು ಸರ್ಕಾರದಿಂದ ಸಾಲ ಸೌಲಭ್ಯ ಪಡೆದು ತಮ್ಮ ಪಶು ಪಾಲನೆಯನ್ನು ಚೆನ್ನಾಗಿ ಮಾಡಿಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...