ನಮಸ್ಕಾರ ಸ್ನೇಹಿತರೆ, ಇನ್ನೇನು ಈ ವರ್ಷ ಮುಗಿಯಲು ಕೇವಲ ಒಂಬತ್ತು ದಿನಗಳಷ್ಟೇ ಬಾಕಿ ಉಳಿದಿವೆ. ಕ್ರಿಸ್ಮಸ್ ಸಂದರ್ಭದಲ್ಲಿ ಈ ಬಾರಿ ಸತತ ಐದು ದಿನಗಳ ವರೆಗೆ ಬ್ಯಾಂಕುಗಳಿಗೆ ರಜೆ ಇರಲಿದೆ. ಯಾವ ಭಾಗದಲ್ಲಿ ಯಾವ ದಿನದಂದು ಬ್ಯಾಂಕುಗಳಿಗೆ ರಜೆ ಇರಲಿದೆ ಎಂಬುದರ ಮಾಹಿತಿಯನ್ನು ಇದೀಗ ನೋಡಬಹುದು.
ಬ್ಯಾಂಕುಗಳಿಗೆ ಸುಧೀರ್ಘ ರಜೆ :
ಕ್ರಿಸ್ಮಸ್ ಸಂದರ್ಭದಲ್ಲಿ ಬ್ಯಾಂಕುಗಳಿಗೆ ಈ ವರ್ಷ ಸುಧೀರ್ಘ ರಜೆ ಇದ್ದು ಡಿಸೆಂಬರ್ 23ರಂದು ನಾಲ್ಕನೇ ಶನಿವಾರದ ಕಾರಣ ಬ್ಯಾಂಕುಗಳು ಮುಚ್ಚಿರಲಿವೆ. ಅಲ್ಲದೆ ಕ್ರಿಸ್ಮಸ್ನ ಕಾರಣದಿಂದಾಗಿ ಕೆಲವು ರಾಜ್ಯಗಳಲ್ಲಿ ಸತತ ಐದು ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇನ್ನೇನು ಕೇವಲ ಒಂಬತ್ತು ದಿನಗಳು ಮಾತ್ರ ಈ ವರ್ಷ ಬ್ಯಾಂಕ್ ರಜೆ ಉಳಿದಿವೆ. ಯಾವುದೇ ಪ್ರಮುಖ ಬ್ಯಾಂಕ್ ಸಂಬಂಧಿತ ಕೆಲಸಕ್ಕಾಗಿ ಬ್ಯಾಂಕಿಗೆ ಹೋಗುವ ಮುನ್ನ ಬ್ಯಾಂಕುಗಳಿಗೆ ಸುಧೀರ್ಘ ರಜೆ ಇರುವ ಕಾರಣ ಬ್ಯಾಂಕ್ ರಜ ಪಟ್ಟಿಯನ್ನು ಚೆಕ್ ಮಾಡುವುದು ಮುಖ್ಯವಾಗಿರುತ್ತದೆ.
ಯಾವ ರಾಜ್ಯಗಳಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ಬ್ಯಾಂಕುಗಳು ಸತತವಾಗಿ ಎಷ್ಟು ದಿನಗಳವರೆಗೆ ಮುಚ್ಚಲಿವೆ ಎಂಬುದರ ಮಾಹಿತಿಯನ್ನು ನೋಡುವುದಾದರೆ, ಡಿಸೆಂಬರ್ 23ರಂದು ನಾಲ್ಕನೇ ಶನಿವಾರ ಆಗಿರುವುದರಿಂದ ದೇಶದಾದ್ಯಂತ ಬ್ಯಾಂಕುಗಳಿಗೆ ರಜೆ ಇರುತ್ತದೆ. ಸೋಮವಾರವೂ ಸಹ ದೇಶದಾದ್ಯಂತ ಬ್ಯಾಂಕುಗಳು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮುಚ್ಚಿರುತ್ತವೆ. ಡಿಸೆಂಬರ್ 26 ಮತ್ತು 27ರಂದು ಕೂಡ ಹಲವು ರಾಜ್ಯಗಳಲ್ಲಿ ಕ್ರಿಸ್ಮಸ್ ಆಚರಣೆಯ ಕಾರಣದಿಂದಾಗಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಇದನ್ನು ಓದಿ : ಯುವನಿಧಿ ಯೋಜನೆಗೆ ನೋಂದಣಿ ಆರಂಭ : ಜನವರಿ 12ಕ್ಕೆ ನಿಮ್ಮ ಖಾತೆಗೆ ಹಣ
ಈ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ :
ನಾಲ್ಕನೇ ಶನಿವಾರದ ಕಾರಣ ಡಿಸೆಂಬರ್ 23ರಂದು ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಭಾನುವಾರ ಡಿಸೆಂಬರ್ 24 ಆಗಿರುವ ಕಾರಣ ಆ ದಿನವೂ ಸಹ ಬ್ಯಾಂಕುಗಳಿಗೆ ದೇಶದಾದ್ಯಂತ ರಜೆ ಇರುತ್ತದೆ. ಅಲ್ಲದೆ ಕ್ರಿಸ್ಮಸ್ ಡಿಸೆಂಬರ್ 25 ಇರುವ ಕಾರಣ ಆ ದಿನವೂ ಸಹ ದೇಶದಾದ್ಯಂತ ಬ್ಯಾಂಕುಗಳಿಗೆ ರಜೆ ಇರುತ್ತದೆ. ಕ್ರಿಸ್ಮಸ್ ಆಚರಣೆಯನ್ನು ಐಜ್ವಾಲ್ ಕೊಹಿಮ ಶೀಲಂಗ್ ನಲ್ಲಿ ಮಾಡುವ ಕಾರಣ ಡಿಸೆಂಬರ್ 26ರಂದು ರಜೆ ಇರುತ್ತದೆ. ಕುಹಿಮದಲ್ಲಿ ಡಿಸೆಂಬರ್ 27ರಂದು ಕ್ರಿಸ್ಮಸ್ ಇರುವ ಕಾರಣ ಬ್ಯಾಂಕ್ ಮುಚ್ಚಿರುತ್ತದೆ. ಕಿಯಾನ್ ನಿಂದಾಗಿ ಶಿಲ್ಲಾಗ್ನಲ್ಲಿಯೂ ಸಹ ಡಿಸೆಂಬರ್ 30ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಮತ್ತೆ ಭಾನುವಾರ ಡಿಸೆಂಬರ್ 31 ಆಗಿರುವ ಕಾರಣ ಎಲ್ಲಾ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಹೀಗೆ ಸತತ ಐದು ದಿನಗಳವರೆಗೆ ಸುಧೀರ್ಘವಾಗಿ ಬ್ಯಾಂಕುಗಳು ರಜೆ ಇರುವ ಕಾರಣ ಅಗತ್ಯ ಕೆಲಸಗಳನ್ನು ಈ ದಿನದಿಂದಲೇ ಮುಗಿಸುವುದು ಮುಖ್ಯವಾಗಿರುತ್ತದೆ. ಹಣ ವರ್ಗಾವಣೆಯು ಡಿಜಿಟಲ್ ವಾಹಿವಾಟಿನ ಮೂಲಕ ಸುಲಭವಾಗಿರುವುದರಿಂದ ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾಯಿಸಲು ಮೊಬೈಲ್ ಬ್ಯಾಂಕಿಂಗ್ ಬಳಸಬಹುದಾಗಿದೆ. ಹೀಗೆ ಸತತ ಐದು ದಿನ ಬ್ಯಾಂಕುಗಳಿಗೆ ರಜೆ ಇರುವ ಕಾರಣ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಅರೆಸ್ಟ್ ಅಸಲಿ ಕಾರಣ ಇಲ್ಲಿದೆ
- ಹಿಂದುಳಿದ ವರ್ಗಗಳ ನಿಗಮದಿಂದ ಅರ್ಜಿ ಆಹ್ವಾನ, ಈ ಲಿಂಕ್ ಬಳಸಿ ವಿವಿಧ ಸಹಾಯಧನ ಪಡೆದುಕೊಳ್ಳಿ