ನಮಸ್ಕಾರ ಸ್ನೇಹಿತರೆ ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಮತ್ತೆ ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಂಪುಟ ಉಪ ಸಮಿತಿಯನ್ನು ಕೋವಿಡ್ ನಿರ್ವಹಣೆಗೆ ರಚಿಸಿದೆ. ಹಾಗಾದರೆ ಈ ಉಪ ಸಮಿತಿಯಲ್ಲಿ ಯಾರೆಲ್ಲಾ ಇದ್ದಾರೆ ಈ ಸಮಿತಿಯ ಕೆಲಸ ಕಾರ್ಯಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡಬಹುದು.
ಕೋವಿಡ್ ನಿಯಂತ್ರಣಕ್ಕೆ ಉಪ ಸಮಿತಿ ರಚನೆ :
ರಾಜ್ಯ ಸರ್ಕಾರವು ಕೋವಿಡ್ ನಿರ್ವಹಣೆಗೆ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಿದ್ದು ಈ ಸಮಿತಿಯು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರ ಅಧ್ಯಕ್ಷತೆಯಲ್ಲಿ ಮೂರು ಸಚಿವರನ್ನು ಒಳಗೊಂಡಿದೆ. ಈ ಸಮಿತಿಯಲ್ಲಿ ಸಚಿವರಾದ ಹೆಚ್ಚಿಸಿ ಮಹದೇವಪ್ಪ ಶರಣುಪ್ರಕಾಶ್ ಪಾಟೀಲ್ ಹಾಗೂ ಎಂ ಸಿ ಸುಧಾಕರ್ ಅವರನ್ನು ಉಪ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು ಕೋವಿಡ್ ಸೇರಿ ಸಾಂಕ್ರಾಮಿಕ ರೋಗಗಳ ಕುರಿತು ಈ ಸಮಿತಿಯು ಪರಾಮರ್ಶಿಸುತ್ತದೆ.
ಇದನ್ನು ಓದಿ : ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಇನ್ನುಮುಂದೆ ಬೇರೆ ರೀತಿಯಲ್ಲಿ ಮಾಡಲು ಪ್ಲಾನ್
ಸಮಿತಿಯ ಕಾರ್ಯಗಳು :
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಕಾರಣದಿಂದಾಗಿ ನಿನ್ನೆ ಅಂದರೆ ಡಿಸೆಂಬರ್ 21ರಂದು ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು. ಕೆಲವೊಂದು ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಭೆಯಲ್ಲಿ ನೀಡಿದ್ದರು ಅಲ್ಲದೆ ಕೋವಿಡ್ ನಿರ್ವಹಣೆಗೆಂದು ಒಂದು ಸಂಪುಟ ಉಪ ಸಮಿತಿಯನ್ನು ರಚಿಸುವುದಾಗಿ ಹೇಳಿದರು ಈ ಬಗ್ಗೆ ನಿನ್ನ ನಡೆದ ಸಚಿವ ಸಂಪುಟದಲ್ಲೂ ಸಹ ಸಮಿತಿ ರಚನೆಗೆ ತೀರ್ಮಾನಿಸಲಾಗಿದ್ದು, ಅದರಂತೆ ಇದೀಗ ಅಧಿಕೃತವಾಗಿ ಸಂಪುಟ ಉಪ ಸಮಿತಿಯನ್ನು ರಾಜ್ಯ ಸರ್ಕಾರವು ರಚನೆ ಮಾಡಿ ಆದೇಶವನ್ನು ಹೊರಡಿಸಿದೆ. ಈ ಸಮಿತಿಯು ಔಷಧ ಖರೀದಿ ಮಾಸ್ಕ ಕಡ್ಡಾಯ ಸೇರಿದಂತೆ ಎಲ್ಲಾ ವಿಷಯಗಳನ್ನು ನಿರ್ಧರಿಸುತ್ತದೆ.
ಹೀಗೆ ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಇದೀಗ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಿದೆ. ಇದರಿಂದ ಕೋವಿಡ್ ನಿಯಂತ್ರಣವನ್ನು ಮಾಡಬಹುದು ಎಂಬ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದ್ದು, ಈ ಬಗ್ಗೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವುದರ ಮೂಲಕ ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಒಂದು ಸಮಿತಿಯನ್ನು ರಚಿಸಿದೆ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಮೊಮ್ಮಗನಿಗೆ ತಾತನ ಆಸ್ತಿಯ ಮೇಲೆ ಹಕ್ಕು ಇದೆಯಾ ? ಆಸ್ತಿಯ ಬಗ್ಗೆ ಕಾನೂನಿನ ನಿಯಮವೇನು ?
- ಬ್ಯಾಂಕುಗಳಿಗೆ ಸತತ 5 ದಿನ ರಜೆ : ಯಾವ ದಿನದಂದು ಎಂದು ತಿಳಿದುಕೊಳ್ಳಿ