ನಮಸ್ಕಾರ ಸ್ನೇಹಿತರೇ ಮೂವತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅರ್ಹ ಫಲಾನುಭವಿಗಳಿಗೆ 4000 ಯಂತ್ರ ಚಾಲಿತ ವಾಹನವನ್ನು ಉಚಿತರಿಸಲು ರಾಜ್ಯ ಸರ್ಕಾರವು ಯೋಜನೆ ಯನ್ನು ಆಯೋಜಿಸಿದೆ. ಹಾಗಾದರೆ ಈ ಯೋಜನೆಗೆ ಯಾರೆಲ್ಲ ಅರ್ಹರು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ದ್ವಿಚಕ್ರ ವಾಹನ :
ಅಂಗವಿಕಲರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ತ್ರಿಚಕ್ರ ವಾಹನಗಳ ವಿತರಣೆಗೆ ರಾಜ್ಯ ಸರ್ಕಾರವು ಸಿದ್ಧವಾಗಿದ್ದು ಇದೀಗ 36 ಕೋಟಿ ರೂಪಾಯಿ ವೆಚ್ಚದಲ್ಲಿ 202324ನೇ ಸಾಲಿಗೆ ಅಂಗವಿಕಲರಿಗೆ ಹೆಚ್ಚುವರಿ ಯಾಗಿ 4000 ಯಂತ್ರ ಚಾಲಿತ ದ್ವಿಚಕ್ರ ವಾಹನವನ್ನು ಖರೀದಿಸುವುದರ ಮೂಲಕ ಸಚಿವ ಸಂಪುಟ ಸಭೆಯಲ್ಲಿ ವಿತರಿಸಲು ಅನುಮತಿ ನೀಡಲಾಗಿದೆ. ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಯಂತ್ರ ಚಾಲಿತ ವಿಚಕ್ರವಾಹನಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಕಾರ್ಯಕ್ರಮದ ವಿತರಣೆ :
ವಿಶ್ವ ಅಂಗವಿಕಲರ ದಿನಾಚರಣೆ ಡಿಸೆಂಬರ್ 3ರಂದು ಇದರ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಂಗವಿಕಲ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರವು ಕೈಗೊಂಡಿರುವ ಕಾರ್ಯಕ್ರಮಗಳ ವಿವರಣೆಯನ್ನು ಬೆಂಗಳೂರಿನ ಕಂಠೀರವ ಒಳಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು. ಉತ್ತೇಜನ ನೀಡಿದ್ದು ನವೆಂಬರ್ 27ರಂದು ನಡೆಸಿದ ಜನಸ್ಕಂದನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಂಗವಿಕಲರು ಆಗಮಿಸಿದ್ದು ಉದ್ಯೋಗ ಶಿಕ್ಷಣ ಹಾಗೂ ವಾಹನ ಖರೀದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಬೇಡಿಕೆ ಇಟ್ಟಿದ್ದಾರೆ ಅವರ ಬೇಡಿಕೆಗಳ ಕುರಿತಂತೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಬಂಧ ಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರವು ಅಂಗವಿಕಲರ ಸ್ವಾವಲಂಬನೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಕಾರ್ಯಕ್ರಮಗಳ ವಿವರಣೆಯನ್ನು ನೋಡುವುದಾದರೆ,
ಕಾರ್ಯಕ್ರಮಗಳ ವಿವರಣೆ :
ಎರಡು ಕೋಟಿ ವೆಚ್ಚದಲ್ಲಿ ಏಳು ಜಿಲ್ಲೆಗಳಲ್ಲಿ 10 ವಸತಿ ಶಾಲೆಗಳನ್ನು 2023-24ನೇ ಸಾಲಿನಲ್ಲಿ ಬುದ್ದಿಮಾಂದ್ಯ ಮಕ್ಕಳಿಗೆ ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. 284.27 ಕೋಟಿ ರುಪಾಯಿಯನ್ನು ಅಂಗವಿಕಲರ ಶೈಕ್ಷಣಿಕ ವೈದ್ಯಕೀಯ ಪುನರ್ವಸತಿ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿಗೆ ಮೀಸಲಿಡಲಾಗಿದೆ.
ಇದನ್ನು ಓದಿ : ಇನ್ನು ಮುಂದೆ ರೈತರ ಖಾತೆಗೆ 2,000 ಹಣ ಘೋಷಣೆ ಮಾಡಿದ ಸಿದ್ದರಾಮಯ್ಯ
ಉಚಿತ ವಾಹನ ವಿತರಣೆ :
ರಾಜ್ಯದಲ್ಲಿ ಒಟ್ಟು 2011ರ ಜನಗಣತಿಯ ಪ್ರಕಾರ 13,24,205 ಅಂಗವಿಕಲರಿದ್ದಾರೆ. ಈ ಸಂಖ್ಯೆ ಬಹಳಷ್ಟು ಹೆಚ್ಚಾಗಿದ್ದು ಯಾರ ಅವಲಂಬನೆಯೂ ಇಲ್ಲದೆ ಅಂಗವಿಕಲರು ಸ್ವಾವಲಂಬನೆಯ ಜೀವನ ನಡೆಸಲು ಉದ್ಯೋಗ ಮತ್ತು ವಾಹನ ನೆರವು ಇವರ ಮುಖ್ಯ ಬೇಡಿಕೆಯಾಗಿದ್ದು ರಾಜ್ಯ ಸರ್ಕಾರವು ಹೀಗಾಗಿ ಅವರಿಗೆ ವಾಹನ ಖರೀದಿ ಮಾಡಲು ಸಹಕಾರ ನೀಡುತ್ತಿದೆ. ಶೇಕಡಾ 50ರಷ್ಟು ಪ್ರತಿ ವರ್ಷ ಅಂಗವಿಕಲರಿಗೆ ರಿಯಾಯಿತಿ ದರದಲ್ಲಿ ತ್ರಿಚಕ್ರ ವಾಹನ ಸರ್ಕಾರದಿಂದ ವಿಧರಿಸಲಾಗುತ್ತಿತ್ತು ಆದರೆ ರಾಜ್ಯದ ಅಂಗವಿಕಲರಿಗೆ 2024 ರಿಂದ ಉಚಿತವಾಗಿ ತ್ರಿಚಕ್ರ ವಾಹನ ವಿತರಿಸಲಾಗುತ್ತಿದೆ.
ಹೀಗೆ ರಾಜ್ಯ ಸರ್ಕಾರವು ಅಂಗವಿಕಲರಿಗೆ ತ್ರಿಚಕ್ರ ವಾಹನವನ್ನು ಉಚಿತವಾಗಿ ವಿವರಿಸಲಾಗುತ್ತಿದೆ ಎಂಬ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಅಂಗವಿಕಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಇದರಿಂದ ಅವರು ಸಹ ರಾಜ್ಯ ಸರ್ಕಾರದಿಂದ ತ್ರಿಚಕ್ರ ವಾಹನವನ್ನು ಉಚಿತವಾಗಿ ಪಡೆದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್: ಹೊಸ ವರ್ಷಕ್ಕೆ ಮೋದಿ ಸರ್ಕಾರದಿಂದ ಬಿಗ್ ಗಿಫ್ಟ್
- ಮಹಿಳೆಯರಿಗೆ ಉಚಿತವಾಗಿ 6,000 ರೂ : ಸರ್ಕಾರದ ಮಹತ್ವದ ಯೋಜನೆ