News

ಅಂಗನವಾಡಿಗೆ ಮಕ್ಕಳನ್ನು ಕಳುಹಿಸುವ ಪೋಷಕರಿಗಾಗಿ ಸಿಹಿ ಸುದ್ದಿ : ಹೈಕೋರ್ಟ್ ನಿಂದ ಮಹತ್ವದ ಆದೇಶ

Good news for parents sending children to Anganwadis

ನಮಸ್ಕಾರ ಸ್ನೇಹಿತರೆ ಅಂಗನವಾಡಿಯಲ್ಲಿ ಮಕ್ಕಳು ಶಿಕ್ಷಣವನ್ನು ಮೊದಲು ಪ್ರಾರಂಭಿಸುತ್ತಾರೆ. ಅನೇಕ ವಿಷಯಗಳ ಬಗ್ಗೆ ಅಂಗನವಾಡಿಯಲ್ಲಿ ಶಿಕ್ಷಣವನ್ನು ಪಡೆದ ನಂತರ ಶಾಲೆಯ ಮೆಟ್ಟಿಲನ್ನು ಮಕ್ಕಳು ಏರುತ್ತಾರೆ. ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ಅಂಗನವಾಡಿಯಲ್ಲಿ ನೀಡಲಾಗುತ್ತದೆ. ಮಕ್ಕಳು ಯಾವ ರೀತಿಯ ಶಿಸ್ತು ಶಿಕ್ಷಣವನ್ನು ಪಡೆಯುತ್ತಾರೋ ಅಂಗನವಾಡಿಯಲ್ಲಿ ಅದೇ ರೀತಿಯಲ್ಲಿಯೇ ಶಾಲೆಗಳಲ್ಲಿಯೂ ಕೂಡ ಅವರ ಈ ಹವ್ಯಾಸ ಮುಂದುವರೆಯುತ್ತದೆ.

Good news for parents sending children to Anganwadis
Good news for parents sending children to Anganwadis

ಮಕ್ಕಳಿಗೆ ವಿಶೇಷ ಸೌಲಭ್ಯ ಸಿಗಲಿದೆ :

ಶಾಲೆಗೆ ಹೋಗುವ ಮುನ್ನ ಮಕ್ಕಳು ಅಂಗನವಾಡಿಯಲ್ಲಿ ಶಿಕ್ಷಣವನ್ನು ಪಡೆಯುವುದರಿಂದ ಅಂಗನವಾಡಿಯಲ್ಲಿನ ವಿದ್ಯಾರ್ಥಿಗಳಿಗೂ ಸರ್ಕಾರ ಅನೇಕ ರೀತಿಯ ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಅನೇಕ ಸೌಲಭ್ಯವನ್ನು ಅಂಗನವಾಡಿಯಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರ ಒದಗಿಸುತ್ತದೆ. ಇನ್ನು ಸಣ್ಣ ವಯಸ್ಸಿನ ಮಕ್ಕಳು ಅಂಗನವಾಡಿಯಲ್ಲಿ ಇರುವುದರಿಂದ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ ಆದ್ದರಿಂದ ಪೌಷ್ಟಿಕಾಂಶ ನೀಡುವುದು ಸಣ್ಣ ವಯಸ್ಸಿನ ಮಕ್ಕಳಿಗೆ ಅಗತ್ಯವಾಗಿದೆ. ಅದರಂತೆ ತಿಂಡಿ ಬಿಸಿಊಟ ಸೌಲಭ್ಯವನ್ನು ಅಂಗನವಾಡಿ ಮಕ್ಕಳಿಗೆ ನೀಡಲಾಗುತ್ತದೆ. ಸದ್ಯ ಇದೀಗ ಸರ್ಕಾರ ಮಕ್ಕಳ ಆರೋಗ್ಯ ವೃದ್ಧಿಗಾಗಿ ಹೊಸ ಸೌಲಭ್ಯವನ್ನು ಮಕ್ಕಳಿಗಾಗಿ ನೀಡಲು ಮುಂದಾಗಿದೆ.

ಇದನ್ನು ಓದಿ : ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಲು ಗಡುಗು ವಿಸ್ತರಣೆ : ಕೊನೆ ದಿನಾಂಕ ಯಾವಾಗ .?

ಇನ್ಸ್ಟಂಟ್ ಆಹಾರ ಸಿಗಲಿದೆ :

ಸದ್ಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡಲು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದು ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಲು ಹೈಕೋರ್ಟ್ ಆದೇಶ ನೀಡಿದೆ. ಅಂಗನವಾಡಿ ಮಕ್ಕಳಿಗೆ ರೆಡಿ ಟು ಮಿಕ್ಸ್ ಆಹಾರವನ್ನು ನೀಡಲು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶದ ಕಾರಣದಿಂದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮುಂದಾಗಿದೆ. ಇನ್ನು ಮುಂದೆ ಸಿರಿಧಾನ್ಯಗಳ ಲಡ್ಡು ಕಿಚಡಿ ಸಾಂಬಾರ್ ಮೊದಲಾದವುಗಳನ್ನು ಅಂಗನವಾಡಿಗಳಲ್ಲಿ ನೀಡಲಾಗುತ್ತದೆ.


ಒಟ್ಟಾರೆಯಾಗಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಅಂಗನವಾಡಿ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಇನ್ಸ್ಟಂಟ್ ಆಹಾರವನ್ನು ಹಾಗೂ ಪೌಷ್ಟಿಕಾಂಶವುಳ್ಳ ಆಹಾರವನ್ನು ಒದಗಿಸಲು ಆದೇಶ ನೀಡಲಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರ ಮಕ್ಕಳು ಯಾರಾದರೂ ಅಂಗನವಾಡಿಗೆ ಹೋಗುತ್ತಿದ್ದರೆ ಅವರಿಗೆ ಶೇರ್ ಮಾಡುವ ಮೂಲಕ ಇನ್ನು ಮುಂದೆ ಅಂಗನವಾಡಿಗಳಲ್ಲಿ ಪೌಷ್ಟಿಕಾಂಶದ ಆಹಾರವನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...