ನಮಸ್ಕಾರ ಸ್ನೇಹಿತರೇ ರೈತರಿಗೆ ವಿಶೇಷವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಯೋಜನೆಗಳನ್ನು ಪರಿಚಯಿಸುತ್ತಿದೆ. ಸಾಕಷ್ಟು ಸೌಲಭ್ಯಗಳನ್ನು ರೈತರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ನೀಡುತ್ತಿದ್ದು ಸರ್ಕಾರ ರೈತರಿಗೆ ಇದೀಗ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಭರ್ಜರಿ ಸುದ್ದಿ ಒಂದನ್ನು ನೀಡಿದ್ದು ಸರ್ಕಾರವು ರೈತರ ಸಾಲ ಮನ್ನಾವನ್ನು ಕುರಿತಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ :
ಹೊಸ ಅಧಿಕಾರವನ್ನು ತೆಲಂಗಾಣದಲ್ಲಿ ಪಡೆದ ನಂತರ ಹೊಸ ಹೊಸ ಸೌಲಭ್ಯಗಳನ್ನು ಸರ್ಕಾರ ಪರಿಚಯಿಸುತ್ತಿದೆ. ಸದ್ಯ ಇದೀಗ ರೈತರ ಸಾಲ ಮನ್ನಾ ಮಾಡುವ ಬಗ್ಗೆ ತೆಲಂಗಾಣ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ರೈತರ ಸಾಲದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದ್ದು ಸರ್ಕಾರವು ರೈತರ ಸಾಲ ಮನ್ನಾ ವಿಚಾರವಾಗಿ ಮಹತ್ವದ ಘೋಷಣೆಯನ್ನು ಮಾಡಲಿದೆ. ಈ ನಿರ್ಧಾರವನ್ನು ತೆಲಂಗಾಣ ಸರ್ಕಾರ ತೆಗೆದುಕೊಂಡಿದ್ದು ನಮ್ಮ ಕರ್ನಾಟಕ ಸರ್ಕಾರದಲ್ಲಿಯೂ ಕೂಡ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ರೈತರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಇದನ್ನು ಓದಿ : ಸಾಲಕ್ಕಾಗಿ ಕಾಯುತ್ತಿದ್ದೀರಾ? ಇಲ್ಲಿ ಡಾಕ್ಯುಮೆಂಟ್ ಇಲ್ಲದೆ ಸಿಗಲಿದೆ ಸಾಲ; ಇಲ್ಲಿದೆ ಕಂಪ್ಲೀಟ್ ಅಪ್ಡೇಟ್
ತೆಲಂಗಾಣದಲ್ಲಿ ರೈತರ ಸಾಲ ಮನ್ನಾ :
ಸರ್ಕಾರದ ನಿರ್ಧಾರ ಚುನಾವಣೆಯಲ್ಲಿ ನೀಡಿರುವ ಭರವಸೆಯಂತೆ ರೈತರ ಸಾಲ ಮನ್ನ ಮಾಡಲು ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ನಂತರ ಸರ್ಕಾರ ತಕ್ಷಣವೇ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ. ವರದಿಗಳ ಪ್ರಕಾರ ರೇವಂತ್ ರೆಡ್ಡಿ ಅವರು ಕೃಷಿ ಸಾಲ ಮನ್ನಾ ವಿಷಯದ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದು. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ನೀಡಿದ ಭರವಸೆಗಳನ್ನು ಅನುಷ್ಠಾನಗೊಳಿಸುವಂತಹ ಹೆಚ್ಚು ಗಮನಹರಿಸುತ್ತಿದೆ.
ವಿಶೇಷ ನಿಗಮ :
ರೇವಂತ್ ರೆಡ್ಡಿ ಸರ್ಕಾರವು ರಾಜ್ಯದಲ್ಲಿ ರೈತರ ಸಾಲ ಮನ್ನಾ ಸಂಬಂಧಿಸಿದಂತೆ ವಿಶೇಷ ನಿಗಮ ಸ್ಥಾಪಿಸಲು ನಿರ್ಧರಿಸಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಸರ್ಕಾರದಿಂದ ಬಂದಿರುವುದಿಲ್ಲ ಸುಮಾರು 30 ಲಕ್ಷ ರೈತರಿಗೆ ತೆಲಂಗಾಣದಲ್ಲಿ ಅನುಕೂಲವಾಗುವಂತೆ 32 ಸಾವಿರ ಕೋಟಿ ರೂಪಾಯಿ ಬೆಳೆ ಸಾಲವನ್ನು ಮನ್ನಾ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ಕೆಲವೊಂದು ವರದಿಗಳು ಸೂಚಿಸಿವೆ. ಬ್ಯಾಂಕರ್ ಗಳೊಂದಿಗೆ ಇದೇ ವಿಚಾರವಾಗಿ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದ್ದು ಒಂದೇ ಬಾರಿಗೆ ಎಲ್ಲಾ ಸಾಲಗಳನ್ನು ಮನ್ನಾ ಮಾಡುವಂತೆ ಸರ್ಕಾರ ಬ್ಯಾಂಕುಗಳಿಗೆ ಮನವಿ ಮಾಡಲಾಗಿದೆ.
ಒಟ್ಟಾರೆಯಾಗಿ ತೆಲಂಗಾಣ ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ ಮಾಡುವ ಕುರಿತು ಬಿಗ್ ಅಪ್ಡೇಟ್ ಮಾಡಿದ್ದು ಈ ಬಗ್ಗೆ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಮಾಡಬೇಕೆಂದು ರೈತರು ನಮ್ಮ ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಹೀಗೆ ಈ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ರಾಜ್ಯದಲ್ಲಿ ರೈತರ ಸಾಲ ಮನ್ನಾ ಆಗದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಮಹಿಳೆಯರಿಗೆ ಮತ್ತೊಮ್ಮೆ ಹೊಸ ಯೋಜನೆ ಸಿಗುತ್ತೆ 3 ಲಕ್ಷ , ಅರ್ಹತೆ ಏನು ..?
- ಆರ್ಥಿಕ ವರ್ಷದ ಆರಂಭದೊಳಗೆ ಈ 5 ಕೆಲಸಗಳನ್ನು ಮಾಡಿ ಮುಗಿಸಿ! ಇಲ್ಲದಿದ್ದರೆ ಭಾರಿ ದಂಡ ಕಟ್ಬೇಕು