ನಮಸ್ಕಾರ ಸ್ನೇಹಿತರೇ ಹೆಚ್ಚಿನ ಪ್ರದೇಶ ರಾಜ್ಯದ ಕರಾವಳಿ ಮಲೆನಾಡು ಭಾಗದಲ್ಲಿ ಕಾಡಿನಿಂದ ಕೂಡಿದ್ದು ಇಲ್ಲಿ ತಲತಲಾಂತರದಿಂದಲೂ ಜನರು ತಮ್ಮ ಜೀವನವನ್ನು ನಡೆಸುವ ಉದ್ದೇಶದಿಂದ ಅರಣ್ಯ ಹೊತ್ತುವರಿ ಮಾಡಿಕೊಂಡು ಭೂಮಿಯನ್ನು ಉಳುಮೆ ಮಾಡಿ ತೋಟಗಳಾಗಿ ಪರಿವರ್ತಿಸಿ ಬಾಳೆ ಅಡಿಕೆ ತೆಂಗು ಕಾಳು ಮೆಣಸು ಹೀಗೆ ವಿವಿಧ ಬೆಳೆಗಳನ್ನು ಬೆಳೆದು ಜೀವನವನ್ನು ನಡೆಸುತ್ತಿದ್ದಾರೆ. ಇಷ್ಟಾದರೂ ಕೂಡ ಜಮೀನು ಅವರ ಹೆಸರಿನಲ್ಲಿ ಇರುವುದಿಲ್ಲ ಹಾಗಾಗಿ ಅತಿಕ್ರಮಣ ಮಾಡಿದ ಜಮೀನನ್ನು ಸರ್ಕಾರವು ತಮ್ಮ ಹೆಸರಿಗೆ ಮಾಡಿ ಕೊಡಬೇಕೆಂದು ದಶಕಗಳಿಂದ ಹೋರಾಟ ನಡೆಯುತ್ತಲೇ ಬಂದಿದ್ದು ಈ ಹೋರಾಟಕ್ಕೆ ಈಗ ಫಲ ಸಿಕ್ಕಿದಂತಾಗಿದೆ.
ರೈತರ ಹೋರಾಟಕ್ಕೆ ಫಲ ಸಿಗುವ ಸಮಯ :
ಸಾಕಷ್ಟು ವರ್ಷಗಳಿಂದ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಹೋರಾಟ ಮಾಡುತ್ತಿದ್ದು ಆದರೆ ಫಲ ಈಗ ಸಿಗುವ ಸಮಯ ಬಂದಿದೆ ಇದೇ ತಿಂಗಳು ಏಳು ಸಾವಿರ ರೈತರಿಗೆ ಜಮೀನು ಹಕ್ಕು ಪತ್ರ ನೀಡಲು ಸರ್ಕಾರ ನಿರ್ಧರಿಸಿದ್ದು ಈ ಕುರಿತು ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆ ಸಚಿವರಾಗಿದ್ದು ಸುದ್ದಿಗೋಷ್ಠಿ ನಡೆಸಿ ರೈತರಿಗೆ ಮಾಹಿತಿ ನೀಡಿದ್ದಾರೆ. ಆದರೆ ಜಮೀನಿನ ಹಕ್ಕು ಪತ್ರ ಎಲ್ಲರಿಗೂ ಸಿಗುವುದಿಲ್ಲ ಸರ್ಕಾರ ರೂಪಿಸಿರುವ ನಿಯಮಗಳಿಗೆ ಅನುಸಾರವಾಗಿ ಇರುವಂತಹ ರೈತರಿಗೆ ಮಾತ್ರ ಈ ಹಕ್ಕು ಪತ್ರ ಸಿಗಲಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ ಸ್ವಂತ ಮನೆ ಕಟ್ಟಿಕೊಳ್ಳಲು : ಕೂಡಲೇ ಅರ್ಜಿ ಸಲ್ಲಿಸಿ
ಅರಣ್ಯ ಇಲಾಖೆಯಿಂದ 400 ಎಕರೆ ಪ್ರದೇಶ ಸಂರಕ್ಷಣೆ :
ಈಗಾಗಲೇ ರಾಜ್ಯದಲ್ಲಿ ಸಾವಿರಾರು ಹೆಕ್ಟರ್ ಅರಣ್ಯ ಪ್ರದೇಶ ಒತ್ತುವರಿಯಾಗಿದೆ ಆದರೆ ತಮ್ಮ ಪ್ರಭಾವ ಬೀಳಸಿ ಕೆಲವೊಂದಿಷ್ಟು ಜನರು ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ ಈಗ ಅಂತಹ ಅತಿಕ್ರಮಣ ತೆರವು ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಅರಣ್ಯ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ. ಸುಮಾರು 400 ಎಕರೆ ಅರಣ್ಯ ಪ್ರದೇಶವನ್ನು ಬೆಂಗಳೂರು ಸಮೀಪದ ಕೊತ್ತೂರು ಪ್ರದೇಶದಲ್ಲಿ ಒತ್ತುರಿಯಾಗಿದ್ದ ಭೂಮಿಯನ್ನು ಸಂರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದ್ದು. ಈ ರೀತಿಯ ಅಕ್ರಮ ಮಾಡಲು ಸಹಕಾರ ನೀಡಿದ ತಹಶೀಲ್ದಾರ ಹಾಗೂ ಉಪತಹಶೀಲ್ದಾರ್ಗಳ ವಿರುದ್ಧವೂ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಕೃಷಿಯನ್ನು ಮಾಡುತ್ತಾ ಬಂದಿರುವ ರೈತರಿಗೆ ಭೂಮಿಯ ಹಕ್ಕು ಪತ್ರವನ್ನು ನೀಡಲು ನಿರ್ಧರಿಸಿದ್ದು ಈ ತಿಂಗಳಲ್ಲಿ ಸುಮಾರು ಏಳು ಸಾವಿರ ರೈತರು ಒತ್ತುವರಿ ಭೂಮಿಯ ಹಕ್ಕು ಪತ್ರ ಪಡೆಯಲಿದ್ದಾರೆ ಎಂದು ಹೇಳಬಹುದು. ಹೀಗೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಹೊಸ ಯೋಜನೆ : ಉಚಿತ ಹೊಲಿಗೆ ಯಂತ್ರ ಪ್ರತಿಯೊಬ್ಬರಿಗೂ ಸಿಗುತ್ತೆ -2024
- ಗೃಹಲಕ್ಷ್ಮಿ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆ ಏಪ್ರಿ