ನಮಸ್ಕಾರ ಸ್ನೇಹಿತರೇ ಈಗಾಗಲೇ ರಾಜ್ಯದಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಯಾಗಿದೆ. ತಮ್ಮ ನಂದಾಯ್ತಾ ಮೊಬೈಲ್ ಸಂಖ್ಯೆಗೆ ಇನ್ನು ಎಸ್ಎಂಎಸ್ ಬಾರದೆ ಇದ್ದಿದ್ದಕ್ಕೆ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದು ಭಾವಿಸಿರುತ್ತಾರೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯಲ್ಲಿ ಸಂಪೂರ್ಣ ಯಶಸ್ಸನ್ನು ಸಾಧಿಸಿರುವ ರಾಜ್ಯ ಸರ್ಕಾರ ಇನ್ನು ಹಲವಾರು ಕ್ರಮಗಳನ್ನು ಯೋಜನೆಗೆ ಸಂಬಂಧಿಸಿ ದಂತೆ ಕೈಗೊಳ್ಳುತ್ತಿದೆ. ಇದರಿಂದಾಗಿ ಉಳಿದ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಬೇಕು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಈಗ ಮೂರು ಕಂತಿನ ಹಣವು ಒಟ್ಟಿಗೆ ಜಮಾ ಆಗಿರುವುದರ ಬಗ್ಗೆ ರಾಜ್ಯ ಸರ್ಕಾರವು ತಿಳಿಸಿದ್ದು ಈ ಹಣ ಜಮಾ ಆಗಿದೆಯಾ ಎಂಬುದನ್ನು ಸ್ಟೇಟಸ್ ಚೆಕ್ ಮಾಡಿಕೊಳ್ಳುವುದರ ಮೂಲಕ ತಿಳಿದುಕೊಳ್ಳಬಹುದು.

ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ :
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಮೂಲಕ ಸಾಕಷ್ಟು ಮಹಿಳೆಯರು ಸರ್ಕಾರದಿಂದ ಸಾವಿರ ರೂಪಾಯಿಗಳನ್ನು ಪಡೆದು ಬಹಳ ಪ್ರಯೋಜನಕಾರಿಯಾಗಿದೆ ಎಂದು ಹೇಳಬಹುದಾಗಿದೆ ಆದರೆ ಇನ್ನೂ ಮೂರರಿಂದ ನಾಲ್ಕು ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಿರುವುದಿಲ್ಲ ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಆರ್ಥಿಕ ನೆರವು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಸರ್ಕಾರವು ಬೇರೆ ಬೇರೆ ರೀತಿಯ ತಂತ್ರಗಳನ್ನು ರೂಪಿಸುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣವು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಪ್ರಯತ್ನಿಸುತ್ತಿದೆ.
ಒಟ್ಟಿಗೆ ಆರು ಸಾವಿರ ರೂಪಾಯಿಗಳು :
ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಇಂದಿಗೂ ಸಂಪೂರ್ಣವಾಗಿ ಆಗಿರದ ಕಾರಣ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಆಧಾರ್ ಕಾರ್ಡ್ ಲಿಂಕ್ ಆಗಿದ್ದರು ಸಹ ಸರ್ಕಾರದ ಡೇಟಾಬೇಸ್ ನಲ್ಲಿ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ತೋರಿಸುತ್ತಿಲ್ಲ. ಇಂತಹ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಸಹ ಮಹಿಳೆಯರು ಅವುಗಳನ್ನು ಪರಿಹರಿಸಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರವು ಚಿಂತನೆ ನಡೆಸಿದ್ದು ಈಗಾಗಲೇ ಮೊದಲನೇ ಕಂತಿನ ಹಣವು ಬರದೇ ಇದ್ದರೆ ಅಕ್ಟೋಬರ್ ತಿಂಗಳಿನಲ್ಲಿ ಖಾತೆಯನ್ನು ಮಹಿಳೆಯರು ಸರಿಪಡಿಸಿಕೊಂಡಿದ್ದರೆ ಅಂತವರಿಗೆ ಎರಡು ಕಂತಿನ ಹಣವನ್ನು ಅಂದರೆ 4000ಗಳನ್ನು ಸರ್ಕಾರವು ಜಮಾ ಮಾಡಿದೆ. ಅದರಂತೆ ಇದೀಗ ಸರ್ಕಾರವು ಮೊದಲ ಕಂತಿನ ಹಣವನ್ನು ಸೇರಿಸಿ ಒಟ್ಟಿಗೆ ಮೂರು ಕಂತಿನ ಹಣವನ್ನು ಅಂದರೆ ಆರು ಸಾವಿರ ರೂಪಾಯಿಗಳನ್ನು ಇದುವರೆಗೂ ಯಾರು ಪಡೆದುಕೊಂಡಿಲ್ಲವೋ ಅಂತಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.
ಇದನ್ನು ಓದಿ : ರೈತರ ಸಾಲ ಮನ್ನಾ ಸರ್ಕಾರದಿಂದ ಬಂಪರ್ ಕೊಡುಗೆ , ಪಟ್ಟಿ ಬಿಡುಗಡೆ
ಪೆಂಡಿಂಗ್ ಇರುವ ಹಣವು ಕೂಡ ವರ್ಗಾವಣೆ :
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸರ್ಕಾರವು ಈಗಾಗಲೇ ಪೆಂಡಿಂಗ್ ಇರುವ ಹಣವನ್ನು ಕೂಡ ಬಿಡುಗಡೆ ಮಾಡಲು ನಿರ್ಧರಿಸಿದ್ದು ಒಂದೇ ಒಂದು ತಿಂಗಳು ಕೂಡ ಮಹಿಳೆಯರು ಮಿಸ್ ಆಗದೆ ಪ್ರತಿ ತಿಂಗಳಿನ ಹಣವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಹಣ ಸಂದಾಯವಾಗಲು ಮಹಿಳೆಯರ ಬ್ಯಾಂಕ್ ಖಾತೆಗೆ ಗ್ರಾಮ- ಅದಾಲತ್ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಈ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಯಾವುದೇ ಕುಟುಂಬದ ಮಹಿಳೆಯರು ವರಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಸಾಧ್ಯವಾಗದೇ ಇದ್ದರೆ ಅಂತಹ ಮಹಿಳೆಯರನ್ನು ಗುರುತಿಸಿ ಅವರ ಹೆಸರುಗಳನ್ನು ಲಿಸ್ಟ್ ಮಾಡುವುದರ ಮೂಲಕ ಸರ್ಕಾರಕ್ಕೆ ನೀಡಿ ಅಂತಹ ಮಹಿಳೆಯರು ಹಣ ವರ್ಗಾವಣೆಯಾಗಲು ಆಗಬೇಕಾದಂತಹ ಎಲ್ಲಾ ಕೆಲಸಗಳನ್ನು ಮಾಡಬೇಕೆಂದು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸರ್ಕಾರ ಆದೇಶ ನೀಡಿದೆ.
ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣವು ಸರ್ಕಾರವು ತಿಳಿಸಿರುವಂತೆ 15 ರಿಂದ 20ನೇ ತಾರೀಖಿನ ಒಳಗಾಗಿ ಜಮಾ ಆಗುತ್ತದೆ ಎಂದು ಹೇಳಲಾಗಿದೆ. ಪ್ರತಿ ಮನೆಗೆ ಹೋಗಿ ಅಂಗನವಾಡಿ ಸಹಾಯಕರು ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಇರುವಂತಹ ಸಮಸ್ಯೆಗಳನ್ನು ಅವರನ್ನೇ ಬ್ಯಾಂಕಿಗೆ ನೇರವಾಗಿ ಕರೆದುಕೊಂಡು ಹೋಗುವುದರ ಮೂಲಕ ಸ್ವತಃ ಸಮಸ್ಯೆಗಳನ್ನು ಪರಿಹರಿಸಬೇಕಾಗಿಯು ಎಂದು ಸರ್ಕಾರವು ತಿಳಿಸಿದ್ದ ಡಿಸೆಂಬರ್ ತಿಂಗಳ ಹೊತ್ತಿಗೆ ಶೇಕಡ 100 ರಷ್ಟು ಅರ್ಜಿ ಸಲ್ಲಿಸಿದ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಬಹುದು ಎನ್ನುವ ನಿರೀಕ್ಷೆ ಇದೆ.
ಹೀಗೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ ಹಲವಾರು ಉಪಕ್ರಮಗಳನ್ನು ಜಾರಿಗೆ ತರುತ್ತಿದ್ದು ಈ ಕ್ರಮಗಳಿಂದ ಶೇಕಡ 100ರಷ್ಟು ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಬಹುದು ಎಂಬ ಖಾತರಿಯನ್ನು ರಾಜ್ಯ ಸರ್ಕಾರವು ತಿಳಿಸಿದ್ದು ಒಟ್ಟಾರೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೆಚ್ಚಿನ ಗಮನವನ್ನು ರಾಜ್ಯ ಸರ್ಕಾರ ವಹಿಸಿದೆ ಎಂದು ಹೇಳಬಹುದಾಗಿದೆ. ಹೀಗೆ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೆಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು,
ಇತರೆ ವಿಷಯಗಳು :
ಮನೆ ಕಟ್ಟುವವರೇ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 5 ಲಕ್ಷ ಸಿಗುತ್ತೆ
ರೈತರ ಸಾಲ ಮನ್ನಾ ಸರ್ಕಾರದಿಂದ ಬಂಪರ್ ಕೊಡುಗೆ , ಪಟ್ಟಿ ಬಿಡುಗಡೆ