ನಮಸ್ಕಾರ ಸ್ನೇಹಿತರೆ ಬಹಳ ದೊಡ್ಡ ಮೊತ್ತದ ಅನುದಾನವನ್ನು ಗುರುಲಕ್ಷ್ಮೀ ಯೋಜನೆಗಾಗಿ ಬಿಡುಗಡೆ ಮಾಡಿದೆ. ಗೃಹಲಕ್ಷ್ಮಿ ಯೋಜನೆಗಾಗಿ ರಾಜ್ಯ ಸರ್ಕಾರವು 2444 ಕೋಟಿ ರೂಪಾಯಿಗಳನ್ನು ಅನುದಾನ ನೀಡುವುದು ಎಂದರೆ ದೊಡ್ಡ ವಿಚಾರವೇ ಆಗಿದೆ. ಇಷ್ಟು ದೊಡ್ಡ ಮೊತ್ತದ ಅನುದಾನ ಗೃಹಲಕ್ಷ್ಮಿ ಯೋಜನೆಗೆ ಬಿಟ್ಟರೆ ಬೇರೆ ಯಾವ ಗ್ಯಾರೆಂಟಿ ಯೋಜನೆಗಳಿಗೂ ಕೂಡ ಸಿಕ್ಕಿರುವುದಿಲ್ಲ. ಇಷ್ಟಾದರೂ ಸಹ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಮಹಾಲಕ್ಷ್ಮಿ ಯೋಜನೆಯ ಹಣ ತಲುಪಿದೆಯಾ ಎಂದರೆ ಉತ್ತರ ಇಲ್ಲ. ಅದಕ್ಕೆ ಸಂಬಂಧಿಸಿದಂತೆ ಇವತ್ತಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿಯೊಬ್ಬರ ಖಾತೆಗೆ ತಲುಪಿಲ್ಲ :
ಪ್ರತಿಯೊಬ್ಬರ ಖಾತೆಗೂ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿರುವುದಿಲ್ಲ ಆದರೆ ಸ್ವಲ್ಪ ಸೈಡಿಗೆ ಈ ವಿಚಾರವನ್ನು ಇಟ್ಟುಕೊಂಡರೆ ಮತ್ತೊಂದು ಆತಂಕದ ವಿಚಾರವನ್ನು ನಾವು ನಿಮಗೆ ಹೇಳುತ್ತಿದ್ದೇವೆ ಅದೇನೆಂದರೆ ಸ್ವಲ್ಪ ನೀವು ಯಾಮಾರಿದರು ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳು ಮಾತ್ರವಲ್ಲದೆ ನಿಮ್ಮ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ನೀವು ಕಳೆದುಕೊಳ್ಳುವಂತಹ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿಯೇ ಇದೆ. ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಸಾಕಷ್ಟು ವಂಚನೆಗಳು ನಡೆಯುತ್ತಿದೆ.
ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ವಂಚನೆ :
ಗೃಹಲಕ್ಷ್ಮಿ ಯೋಜನೆಯನ್ನು ಎಲ್ಲರಿಗೂ ಗೊತ್ತಿರುವ ಹಾಗೆ ಸಂಪೂರ್ಣ ಡಿಜಿಟಲೀಕರಣ ಗೊಳಿಸಲಾಗಿದೆ. ಗುರು ಲಕ್ಷ್ಮಿ ಯೋಜನೆಯ ಹಣವನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರವೇ ನೇರವಾಗಿ ವರ್ಗಾವಣೆ ಮಾಡುತ್ತದೆ. ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಡೇಟಾಬೇಸ್ ನಲ್ಲಿ ಫಲಾನುಭವಿಗಳ ಹೆಸರಿನಲ್ಲಿ ಇರುವುದರಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಸುಲಭವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಡಿ ಬಿ ಟಿ ಕರ್ನಾಟಕ ಎನ್ನುವ ಅಪ್ಲಿಕೇಶನ್ ಅನ್ನು ಕೂಡ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಲು ಮಹಿಳೆಯರಿಗೆ ಬಿಡುಗಡೆ ಮಾಡಲಾಗಿದೆ. ಇದನ್ನೇ ಮಂಚ ಕರು ಬಂಡವಾಳವಾಗಿಸಿಕೊಂಡು ಸರ್ಕಾರದ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಹೋಲುವ ಬೇರೆ ಬೇರೆ ರೀತಿಯಲ್ಲಿ ನಕಲಿ ಅಪ್ಲಿಕೇಶನ್ಗಳನ್ನು ತಯಾರಿಸಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಇದನ್ನು ಓದಿ : ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ : ಯಾವ ದಿನಾಂಕದಂದು ನಡಿಯಲಿದೆ ಗೊತ್ತಾ?
ನಕಲಿ ಅಪ್ಲಿಕೇಶನ್ ಗಳಿಂದ ಹಣ ಮಾಯ :
ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಉಪಯೋಗವಾಗುವ ಉದ್ದೇಶದಿಂದ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಒಂದು ವೆಬ್ಸೈಟ್ ಅನ್ನು ಬಿಡುಗಡೆ ಮಾಡಿತ್ತು ಆದರೆ ವಂಚಕರು ನಕಲಿ ಅಪ್ಲಿಕೇಶನ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬಿಡುಗಡೆ ಮಾಡಿ ಡೌನ್ಲೋಡ್ ಮಾಡಿಕೊಂಡ ಸಾಕಷ್ಟು ಮಹಿಳೆಯರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಉದಾಹರಣೆಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆ ಒಬ್ಬರು ಕುಂದಗೋಳ ತಾಲೂಕಿನ ಯಾರಗುಪ್ಪಿ ಗ್ರಾಮದಲ್ಲಿರುವವರು ತಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆಯಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಹೋಗಿ 64,000 ತಮ್ಮ ಖಾತೆಯಲ್ಲಿರುವ ಇರುವುದರಿಂದ ಆ ಹಣವನ್ನು ಕಳೆದುಕೊಂಡಿದ್ದಾರೆ.
ಯಾವುದೇ ಅಪ್ಲಿಕೇಶನ್ ಗಳಿಗೆ ಒಟಿಪಿ ಕಳುಹಿಸುವ ಮುನ್ನ ಎಚ್ಚರವಾಗಿದ್ದು ಇದು ಸರ್ಕಾರದ ಅಪ್ಲಿಕೇಶನ್ ಹೌದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಹಾಗಾಗಿ ನಿಮ್ಮ ಮೊಬೈಲ್ ನಲ್ಲಿ ಯಾವುದಾದರೂ ಲಿಂಕ್ ಬಂದರೆ ಅದನ್ನು ತಕ್ಷಣವೇ ಕ್ಲಿಕ್ ಮಾಡುವುದರ ಮೂಲಕ ತಮ್ಮ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳಬೇಡಿ ಹಾಗಾಗಿ ಸ್ವಲ್ಪ ಪರೀಕ್ಷಿಸಿ ಚೆಕ್ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.
ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಶೇರ್ ಮಾಡುವ ಮೂಲಕ ಈ ರೀತಿಯ ವಂಚನೆಗಳು ನಡೆಯುತ್ತಿವೆ ಎಂಬುದರ ಮಾಹಿತಿಯನ್ನು ತಿಳಿಸಿ ಇದರಿಂದ ಅವರು ಸಹ ಎಚ್ಚರದಿಂದ ವಂಚನೆಗಳ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ 35,000 ರೂ ಪ್ರೋತ್ಸಾಹ ಧನ ಎಲ್ಲರಿಗೂ ನೀಡಲಾಗುವುದು
ಇನ್ನು ಮುಂದೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ : ಈ ರೀತಿ ತಪ್ಪು ಮಾಡಬೇಡಿ