ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕೆಲವೊಂದು ಫಲಾನುಭವಿಗಳಿಗೆ ಇದುವರೆಗೂ ಕೂಡ ಹಣ ಬಾರದೆ ಇದ್ದರೆ ಬ್ಯಾಂಕ್ ಖಾತೆಯನ್ನು ಬದಲಾವಣೆ ಮಾಡುವುದರ ಮೂಲಕ ಹೊಸ ಬ್ಯಾಂಕ್ ಖಾತೆಯನ್ನು ಪೋಸ್ಟ್ ಆಫೀಸ್ ನಲ್ಲಿ ತೆರೆಯ ಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಹಿಂದೆಯೇ ತಿಳಿಸಿದರು. ಅದರಂತೆ ಹೊಸ ಖಾತೆಯನ್ನು ಈಗ ಸಾಕಷ್ಟು ಜನ ತೆರೆದು ತಮ್ಮ ಖಾತೆಗೆ ಹಣ ಬಂದಿರುವುದರ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು.
ಬ್ಯಾಂಕ್ ಖಾತೆಗೆ ಈ ಕೆವೈಸಿ ಕಡ್ಡಾಯ :
ಈಗಾಗಲೇ ಮಹಿಳೆಯರಿಗೆ ತಿಳಿಸಿರುವಂತೆ ಬ್ಯಾಂಕ್ ಖಾತೆಗೆ ಕೆವೈಸಿ ಕಡ್ಡಾಯ ಎಂದು ಹೇಳಲಾಗಿದ್ದು ಈವರೆಗೂ ಕೂಡ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಇರುವ ಕಾರಣ ಕೆಲವೊಂದು ತಾಂತ್ರಿಕ ದೋಷಗಳಿಂದಾಗಿ ಈ ಕೆ ವೈ ಸಿ ಯನ್ನು ಪೂರ್ಣಗೊಳಿಸಲಾಗುವುದಿಲ್ಲ ಇದರಿಂದಾಗಿ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಜಮಾ ಆಗಿರುವುದಿಲ್ಲ. ಇದರಿಂದ ಬ್ಯಾಂಕ್ ಖಾತೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಂಡ ನಂತರವೇ ಸರ್ಕಾರವು ಹಣ ವರ್ಗಾವಣೆ ಮಾಡುವುದರ ಬಗ್ಗೆ ಮಾಹಿತಿ ನೀಡಿತ್ತು.
ಇದನ್ನು ಓದಿ : ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಲು ಗಡುಗು ವಿಸ್ತರಣೆ : ಕೊನೆ ದಿನಾಂಕ ಯಾವಾಗ .?
ಪೋಸ್ಟ್ ಆಫೀಸ್ನಲ್ಲಿ ಹೊಸ ಖಾತೆ ತೆರೆಯಿರಿ :
ಈ ಕೆ ವೈ ಸಿ ಬ್ಯಾಂಕ್ ಅಕೌಂಟಿಗೆ ಆಗುವುದು ಮಾತ್ರವಲ್ಲದೆ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಹೆಸರು ಕೂಡ ಎಲ್ಲವೂ ಸರಿಯಾಗಿರಬೇಕು ಈ ರೀತಿ ಆಗದೇ ಇದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಬರಲು ಸಾಧ್ಯವಿಲ್ಲ. ಸಾಕಷ್ಟು ಮಹಿಳೆಯರು ಪೋಸ್ಟ್ ಆಫೀಸ್ನಲ್ಲಿ ಖಾತೆಯನ್ನು ಆರಂಭಿಸಿದ ನಂತರ ಹಣ ವರ್ಗಾವಣೆ ಆಗಿದೆ ಎಂದು ತಿಳಿಸಿದ್ದಾರೆ ಅದರಲ್ಲೂ ಖಾತೆ ಆರಂಭಿಸಿದ ಮೊದಲ ದಿನದಲ್ಲೇ ಹಣ ವರ್ಗಾವಣೆಯಾಗಿದ್ದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ನೀವೇನಾದರೂ ಗೃಹಲಕ್ಷ್ಮಿ ಯೋಜನೆಯ ಮೊದಲ ಹಾಗೂ ಎರಡನೇ ಕಂತಿನ ಹಣವನ್ನು ಪಡೆಯದೆ ಇದ್ದರೆ ಹಂಚಿಕಛೇರಿಯಲ್ಲಿ ಖಾತೆಯನ್ನು ಪ್ರಾರಂಭಿಸಿದ ನಂತರ ಮೂರನೇ ಕoತಿನ ಹಣವನ್ನು ಅಂಚೆಕಚೇರಿಯಲ್ಲಿ ಖಾತೆ ತೆರೆದ ನಂತರ ಪಡೆಯಬಹುದಾಗಿದೆ.
ಸರಿಯಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಬೇಕಾದರೆ ಪೋಸ್ಟ್ ಆಫೀಸ್ ನಲ್ಲಿ ಖಾತೆಯನ್ನು ತೆರೆದ ನಂತರ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕoತಿನ ಹಣವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಪೋಸ್ಟ್ ಆಫೀಸ್ನಲ್ಲಿ ಖಾತೆಯನ್ನು ತೆರೆಯುವುದರಿಂದ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವನ್ನು ಪಡೆಯಬಹುದು ಎಂಬ ಈ ಮಾಹಿತಿಯನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ : ಈ ವಿಷಯ ಮಹಿಳೆಯರಿಗೆ ತಿಳಿದಿರಲಿ
- ನಿಮ್ಮ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಇಲ್ವಾ….? ಚಿಂತಿಸಬೇಡಿ ಕೇವಲ 10 ನಿಮಿಷದಲ್ಲಿ ಸಿಗುತ್ತೆ