ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಆರೋಗ್ಯಕ್ಕೆ ಯಾವುದು ಹೆಚ್ಚು ಸೂಕ್ತವಾಗಿದೆ ಎಂಬುದರ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಒಂದು ಕಪ್ ಟಿಯನ್ನು ತಲೆಬಿಸಿ ಆದರೆ ಕುಡಿಯಬೇಕು ಅನಿಸುತ್ತದೆ ಅದೇನು ಸರಿ ಆದರೆ ಮತ್ತೆ ಮತ್ತೆ ಟೀಯನ್ನು ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ ಹಾಗೆ ಕುಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದರೆ ಟಿಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದರಿಂದ ಏನಾಗುತ್ತದೆ ಎಂಬುದರ ಮಾಹಿತಿಯನ್ನು ಈ ಕೆಳಕಂಡಂತೆ ನೋಡಬಹುದು.

ಬಿಸಿ ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ಅಪಾಯಕಾರಿ :
ಒಂದು ಕಪ್ ಟೀ ಕುಡಿಯುವುದು ಬೆಳಿಗ್ಗೆ ಎದ್ದಾಗ ಅನೇಕರ ಇಷ್ಟವಾಗಿರುತ್ತದೆ ಅದು ಗ್ರೀನ್ ಟೀ ಅಥವಾ ಲೆಮನ್ ಟೀ ಆಗಿರಲಿ ಅಲ್ಲದೆ ಕೆಲವು ರೀತಿಯ ಚಹಾ ಕುಡಿಯುವುದು ಕೆಲವರ ಹವ್ಯಾಸವಾಗಿರುತ್ತದೆ. ಅದರಂತೆ ಚಹಾದಲ್ಲಿ ಹಲವಾರು ವಿಧಗಳಿದ್ದು ಯಾವುದೇ ಒಂದು ಒತ್ತಡದ ಕೆಲಸ ಮಾಡುತ್ತಿದ್ದರೆ ಒಂದು ಕಪ್ ಟೀ ಕುಡಿಯುವುದು ಎಲ್ಲರಿಗೂ ಅನಿಸುತ್ತದೆ ಅದರಂತೆ ಕೆಲಸ ಮಾಡಿ ಸುಸ್ತಾದರು ಸಹ ನಾವು ಒಂದು ಕಪ್ ಟೀ ಕುಡಿಯಬೇಕೆಂದು ಬಯಸುತ್ತೇವೆ. ಜಗತ್ತಿನಾದ್ಯಂತ ಟೀ ಸ್ಟಾಲ್ ಬಳಿ ಕುಳಿತುಕೊಂಡರೆ ದೇಶದಲ್ಲಿ ಮಾತ್ರವಲ್ಲದೆ ಎಲ್ಲಾ ಕಡೆ ನಡೆಯುವ ಸಂಗತಿಗಳು ಸಹ ತಿಳಿಯುತ್ತವೆ. ಆದರೂ ನೀವು ಟೀಯನ್ನು ಕುಡಿಯಬೇಕಾದರೆ ಹೊಸದಾಗಿ ಮಾಡಿ ಕುದಿಸಿ ಕುಡಿಯುವುದು ಉತ್ತಮವಾಗುತ್ತದೆ ಅಲ್ಲದೆ ಅದೊಂದು ವಿಭಿನ್ನ ರುಚಿಯನ್ನು ನೀಡುತ್ತದೆ. ಕೆಲವರು ಟೀಯನ್ನು ಒಟ್ಟಿಗೆ ಒಮ್ಮೆಲೇ ಮಾಡಿಟ್ಟು ಅದನ್ನು ಫ್ಲಾಸ್ಕ್ ನಲ್ಲಿ ಸುರಿದು ನಿಧಾನವಾಗಿ ದಿನಪೂರ್ತಿ ಕುಡಿಯುತ್ತಾರೆ. ಇನ್ನು ಕೆಲವರು ಟೀಯನ್ನು ಕುದಿಸಿ ಕುದಿಸಿ ಕುಡಿಯುತ್ತಾರೆ. ಆದರೆ ಪದೇ ಪದೇ ಟೀಯನ್ನು ಬಿಸಿ ಮಾಡಿ ಕುಡಿಯುವುದರಿಂದ ಒಳ್ಳೆಯದಲ್ಲ. 4:00 ಗಿಂತ ಹೆಚ್ಚು ಸಮಯದವರೆಗೆ ಟೀಯನ್ನು ಇಟ್ಟುಕೊಂಡರೆ ಮತ್ತೆ ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕಾರ ಎಂದು ತಜ್ಞರು ಹೇಳುತ್ತಾರೆ.
ಇದನ್ನು ಓದಿ : ಸುಲಭವಾಗಿ ಬ್ಯುಸಿನೆಸ್ ಮಾಡಿ : ಈ ಲೇಖನದಲ್ಲಿ ಕೆಲವು ಬೆಸ್ಟ್ ಐಡಿಯಾಗಳಿವೆ
ಅನಾರೋಗ್ಯಕ್ಕೆ ಒಳಗಾಗುವುದು :
ಶಿಲೀಂದ್ರವು ಕುದಿಸಿದ ಚಹಾದಲ್ಲಿ ರೂಪುಗೊಳ್ಳುತ್ತದೆ ಅದರಲ್ಲಿರುವ ಬ್ಯಾಕ್ಟೀರಿಯದಂತಹ ಸೂಕ್ಷ್ಮಜೀವಿಗಳು ಬೆಳೆಯುತ್ತವೆ ಆದ್ದರಿಂದ ಪದೇಪದೇ ಟೀಯನ್ನು ಬಿಸಿ ಮಾಡಿ ಕುಡಿಯುತ್ತಿದ್ದರೆ ನೀವು ಅನಾರೋಗ್ಯಕ್ಕೆ ಒಳಗಾಗುವುದಂತು ಖಂಡಿತ. 41 ರಿಂದ 140 ಡಿಗ್ರಿ ಫ್ಯಾರನ್ ಹೀಟ್ ಗಳ ನಡುವೆ ಹಾಲಿನೊಂದಿಗೆ ತಯಾರಿಸಿದ ಚಹಾ ವನ್ನು ಬಿಸಿ ಮಾಡಲಾಗುತ್ತದೆ ಇದು ಬ್ಯಾಕ್ಟೀರಿಯವನ್ನು ಸೃಷ್ಟಿಸುವುದಲ್ಲದೆ ಚಹಾದಲ್ಲಿರುವ ರುಚಿಯನ್ನು ಸಹ ಬದಲಾಯಿಸುತ್ತದೆ ಹಾಗಾಗಿ ಬಿಸಿ ಮಾಡಿದ ನಂತರ ಟೀಯನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಹರ್ಬಲ್ ಟೀ ಎರಡನೇ ಬಾರಿ ಕುಡಿಯುವುದು ತಪ್ಪು :
ಅದರಂತೆ ಎರಡನೇ ಬಾರಿ ಹರ್ಬಲ್ ಟೀಯನ್ನು ಬಿಸಿ ಮಾಡಿ ಕುಡಿಯಬಾರದು ಹಾಗೆ ಬಿಸಿ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ಹಾಗೂ ಖನಿಜಗಳು ನಾಶವಾಗುತ್ತದೆ ಇಂತಹ ಹರ್ಬಲ್ ಟೀಯನ್ನು ಕುಡಿದರೆ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ ಇಲ್ಲದೆ ಅತಿಸಾರಕ್ಕೆ ಈ ಹರ್ಬಲ್ ಟೀ ಕಾರಣವಾಗಬಹುದು. ವಾಕರಿಕೆ ಮತ್ತು ಹೊಟ್ಟೆ ಉಬ್ಬುವುದು ಮುಂತಾದ ಜೀರ್ಣಕಾರಿ ಸಮಸ್ಯೆಗಳು ಇದರಿಂದ ಉಂಟಾಗುತ್ತದೆ.
ಒಟ್ಟಾರಿಯಾಗಿ ಟೀ ಕುಡಿಯುವುದು ಒಳ್ಳೆಯದು ಆದರೆ ಪದೇ ಪದೇ ಟೀಯನ್ನು ಬಿಸಿ ಮಾಡಿಕೊಡುವುದರಿಂದ ಆರೋಗ್ಯಕ್ಕೆ ಹಾನಿಕರವಾಗುತ್ತದೆ ಟೀ ಕುಡಿಯಬೇಕೆಂದರೆ ಫ್ರೆಶ್ ಆಗಿ ಕುಡಿದರೆ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ರೀತಿಯ ಕೆಟ್ಟ ಪರಿಣಾಮಗಳು ಬೀರುವುದಿಲ್ಲ ಹಾಗಾಗಿ ನಿಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಬಾರದು ಎಂದು ಯೋಚಿಸುತ್ತಿದ್ದರೆ ಹೊಸದಾಗಿ ತಯಾರಿಸಿದ ಟೀಯನ್ನು ಕುಡಿಯುವುದು ಉತ್ತಮವಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಚಹಾ ಕುಡಿಯುವ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಕ್ರೆಡಿಟ್ ಕಾರ್ಡ್ ಬಳಸುವವರಿಗೆ EMI ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
ಲಕ್ಷಾಂತರ ರೈಲ್ವೆ ಪ್ರಯಾಣಿಕರಿಗೆ :ಉಚಿತ ಆಹಾರ, ಹೊಸ ನಿಯಮ