ನಮಸ್ಕಾರ ಸೇಹಿತರೇ .ಕರ್ನಾಟಕ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಅದರಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಪಡೆಯಬೇಕಾದರೆ. ರೇಷನ್ ಕಾರ್ಡ್ ಕಡ್ಡಾಯ ಮಾಡಿದ್ದು ಈ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರ ಅರ್ಜಿ ಬಾಕಿ ಇದ್ದು ಇಂಥವರಿಗೆ ಬಿಪಿಎಲ್ ಕಾರ್ಡ್ ಲಭಿಸುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಪ್ರಮುಖ ಯೋಜನೆಯಾದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ, ಪ್ರಯೋಜನ ಪಡೆಯಲು ಸಾವಿರಾರು ಕುಟುಂಬಗಳು ಅರ್ಜಿಯನ್ನು ಸಲ್ಲಿಸುತ್ತಾರೆ ಹಾಗೂ ಸಾವಿರಾರು ಕುಟುಂಬಗಳು ಈಗಾಗಲೇ ಪ್ರಯೋಜನವನ್ನು ಸಹ ಪಡೆಯುತ್ತಿದ್ದಾರೆ ಅದಕ್ಕೆಲ್ಲ ಮುಖ್ಯ ಕಾರಣ ರೇಷನ್ ಕಾರ್ಡ್ ಆಗಿದೆ ರಾಜ್ಯದಲ್ಲಿ ಅನೇಕ ಕುಟುಂಬಗಳು ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಿರುತ್ತವೆ.
ಮಾರ್ಚ್ 23 ರ ವರೆಗೆ ಒಟ್ಟು ಅರ್ಜಿಗಳ ಸಂಖ್ಯೆ 2.95 ಲಕ್ಷ ಬಾಕಿ ಇದೆ ಚುನಾವಣೆಗು ಮುನ್ನವೇ ನಿಯಮದಂತೆ ಈ ಅರ್ಜಿ ಪ್ರಕ್ರಿಯೆಯನ್ನು ಮುಚ್ಚಲಾಗುತ್ತದೆ .ಅರ್ಜಿಗಳು ಸರ್ಕಾರ ಅನುಮೋದನೆಯನ್ನು ಪಡೆಯಲು ಬಾಕಿ ಉಳಿದಿವೆ ಎಂಬ ಮಾಹಿತಿಯನ್ನು ಸರ್ಕಾರಿ ಅಧಿಕಾರಿಗಳು ಹೇಳಿರುತ್ತಾರೆ.
ಜನರು ಹೇಳುವುದೇನು ನೋಡೋಣ:
ಜನರು ಮಾಧ್ಯಮ ಒಂದರಲ್ಲಿ ಪ್ರತಿಕ್ರಿಯೆ ನೀಡುವಾಗ ಬಾಗಲಕೋಟೆ ಜಿಲ್ಲೆಯಲ್ಲಿರುವ ಕರಡಿ ಗ್ರಾಮದ ನಿವಾಸಿ ಒಬ್ಬರು ಚುನಾವಣೆಗೂ ಮುನ್ನ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದೇವೆ .ಅನ್ನಭಾಗ್ಯ ಯೋಜನೆ, ನಮ್ಮ ಮೂವರು ಕುಟುಂಬಕ್ಕೆ ಆಹಾರ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂಬ ಭರವಸೆ ಹೊಂದಿದ್ದವು ಆ ಸಂದರ್ಭದಲ್ಲಿ ಎಲ್ಲಾ ವಸ್ತುಗಳ ಬೆಲೆ ಅಧಿಕವಾಗುತ್ತದೆ ಆದರೆ ಈಗ ಅರ್ಜಿ ಅನುಮೋದನೆ ಆಗಿಲ್ಲ. ಹೀಗಾಗಿ ಎಲ್ಲಾ ಕುಟುಂಬಗಳಿಗೂ ಬೇಸರ ವ್ಯಕ್ತವಾಗಿದೆ ಎಂಬ ಮಾಹಿತಿಯನ್ನು ತಿಳಿಸಿದರು.
ಇದನ್ನು ಓದಿ : ಕೇವಲ 87 ಹೂಡಿಕೆ ಮಾಡಿ 11 ಲಕ್ಷ ಪಡೆಯುವ ಯೋಜನೆ ಇಲ್ಲಿದೆ ,ಯಾರು ಮಿಸ್ ಮಾಡಬೇಡಿ
ಮಂಗಳೂರಿನ ಮಹಿಳೆಯೊಬ್ಬರು ನಾವಿರುವುದು ಬಾಡಿಗೆ ಮನೆಯಲ್ಲಿ ನಮಗೆ ಮಗ ಸೊಸೆ ಇದ್ದಾರೆ ಆದರೂ ಸಹ ರೇಷನ್ ಕಾರ್ಡ್ ಸಿಕ್ಕಿಲ್ಲ ಈಗ ಇರುವ ಕಾರ್ಡ್ ರದ್ದು ಮಾಡಿ ಹೊಸ ಕಾರ್ಡ್ ಗಾಗಿ ಅರ್ಜಿ ಹಾಕಿದ್ದೆವು ಎಂದರು
ಇನ್ನು ರೇಷನ್ ಕಾರ್ಡ್ ರದ್ದು ಮಾಡಿದ ಬಳಿಕ ಒಂದು ವಾರದೊಳಗೆ ಬನ್ನಿ ಎಂದು ತಿಳಿಸಿದರು ನಂತರ ಹೋದರೆ ನಮಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಚುನಾವಣೆ ಘೋಷಣೆಯಾಗಿದೆ ಎಂದು ತಿಳಿಸಿ ಕಳುಹಿಸಿದರು .ಆದರೆ ಇದೀಗ ನಮಗೆ ಗೃಹಜೋತಿ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ ಮಾಸಿಕ 2,000 ಹಣ ಸಿಗುತ್ತಿಲ್ಲ ನಮ್ಮ ಕುಟುಂಬಕ್ಕೆ ಸಹಾಯವಾಗುತ್ತಿಲ್ಲ ಎಂದರು.
ಬಿಪಿಎಲ್ ಕಾರ್ಡ್ ಶೀಘ್ರ ಹಂಚಿಕೆ:
ಅನೇಕ ಬಡ ಕುಟುಂಬಗಳಿಗೆ ಸರ್ಕಾರದ ಯೋಜನೆ ಶೀಘ್ರವಾಗಿ ಹಂಚಿಕೆ ಮಾಡಬೇಕೆಂದು ಬಡ ಕುಟುಂಬಗಳು ಸರ್ಕಾರದ ಪ್ರಯೋಜನನ್ನು ಪಡೆದುಕೊಳ್ಳಬೇಕೆಂದು ಆಗ್ರಹ ಮಾಡಿದ್ದಾರೆ ಲಕ್ಷಾಂತರ ಅರ್ಜಿಗಳು ಬಾಕಿ ಇದೆ .ಈ ಅರ್ಜಿಗಳನ್ನು ಪರಿಶೀಲನೆ ಮಾಡಿ ಅನುಮೋದಿಸಲಾಗುವುದು ಎಂದು ತಿಳಿಸಲಾಗಿದೆ.
ಇನ್ನು ರೇಷನ್ ಕಾರ್ಡ್ ನಲ್ಲಿ ಯಜಮನೆ ಹೆಸರು ಕುರಿತುಸಲ್ಪಡುವ ಒಂದು ಕುಟುಂಬದ ಒಂದು ಮಹಿಳೆಗೆ ಮಾಸಿಕವಾಗಿ 2,000 ಹಣ ನೀಡುವ ಯೋಜನೆ ಗೃಹಲಕ್ಷ್ಮಿ ಆಗಿದೆ ಇದಕ್ಕೆ ರೇಷನ್ ಕಾರ್ಡ್ ಅತಿ ಮುಖ್ಯವಾಗಿದೆ ಆದರೆ ಇನ್ನೂ ರೇಷನ್ ಕಾರ್ಡ್ ಕೆಲವೊಬ್ಬರಿಗೆ ಸಿಕ್ಕಿಲ್ಲ. ಹಾಗಾಗಿ ಮಹಿಳೆಯರು ಈ ಪ್ರಯೋಜನ ಪಡೆಯುವಂತಾಗುತ್ತಿಲ್ಲ ಹಾಗಾಗಿ ಕೂಡಲೇ ಇದಕ್ಕೆಲ್ಲ ಪರಿಹಾರ ದೊರೆಯಲಿದೆ ಎಂಬ ಮಾಹಿತಿ ತಿಳಿದು ಬರುತ್ತಿದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಈ ಮಾಹಿತಿಯನ್ನು ನಿಮ್ಮ ಪ್ರತಿಯೊಬ್ಬ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಿಳಿಸುವ ಮುಖಾಂತರ ರೇಷನ್ ಕಾರ್ಡ್ ಶೀಘ್ರವಾಗಿ ದೊರೆಯಲಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಸಿದ್ದರಾಮಯ್ಯ ಖಡಕ್ ಎಚ್ಚರಿಕೆ : ಗೃಹಲಕ್ಷ್ಮಿ ಹಣ ಬರದೆ ಇದ್ದವರಿಗೆ ಈ ದಿನದಂದು ಫಿಕ್ಸ್ ಹಣ ಬರುವುದು
ಹಳೆಮನೆ ಹೊಂದಿದವರಿಗೆ ಹೊಸ ಮನೆ ಭಾಗ್ಯ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್