ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ದೇಶದಲ್ಲಿ ವಾಸಿಸುವ ಜನರಿಗೆ ಸ್ವಂತ ಸೂರು ನಿರ್ಮಿಸಿ ಕೊಡುವ ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತಂದಿವೆ. ಅಂತಹದೆ ಆದ ಈ ಯೋಜನೆಯ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅದಕ್ಕಾಗಿ ತಪ್ಪದೇ ಕೊನೆವರೆಗೂ ಓದಿ.
ಪ್ರಧಾನಮಂತ್ರಿಯ ಆವಾಸ್ ಯೋಜನೆ ಇರಬಹುದು ರಾಜೀವ್ ಗಾಂಧಿ ವಸತಿ ಯೋಜನೆ ಇರಬಹುದು, ಹೀಗೆ ಬೇರೆ ಬೇರೆ ಯೋಚನೆಗಳ ಮೂಲಕ ಬಡವ ಹಾಗೂ ಹಿಂದುಳಿದ ಕುಟುಂಬಗಳಿಗೆ ಅನುಕೂಲವಾಗುವಂತೆ ಸ್ವಂತ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ.
ಇದೀಗ ಸುಮಾರು ಒಂದು ಲಕ್ಷ ಮನೆಗಳ ದರ ಇಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸುಮಾರು ಒಂದು ಲಕ್ಷ ಕುಟುಂಬಗಳಿಗೆ 1BHK ಮನೆಯನ್ನು ಒದಗಿಸಿ ಕೊಡಲು ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. ಇದರ ಅಡಿಯಲ್ಲಿ ಅತಿ ಕಡಿಮೆ ಬೆಲೆಗೆ ಹಿಂದುಳಿದ ಕುಟುಂಬಗಳು ಮನೆ ಖರೀದಿಸಿ ತಮ್ಮ ಸ್ವಂತ ಮನೆಯಲ್ಲಿ ಜೀವನ ನಡೆಸಬಹುದು.
ವಸತಿ ಯೋಜನೆಯ ದರ ಇಳಿಕೆ ಮಾಡಿ
ಇಂಡಿಯನ್ ಫ್ರೀಡಂ ಪ್ಯಾಂಥರ್ಸ್ ನ ಉಪಾಧ್ಯಕ್ಷ ಅರುಣ್ ಕುಮಾರ್ ಡಿ, ಹಾಗೂ ಹೋರಾಟಗಾರ್ತಿ ಬಿ ಟಿ ಲಲಿತ ನಾಯಕ್ ತಮ್ಮ ಮನವಿಯಲ್ಲಿ ವಸತಿ ದರ ಇಳಿಕೆ ಮಾಡುವಂತೆ ಆಗ್ರಹಿಸಿದ್ದಾರೆ.
ಮನವಿಯಲ್ಲಿ ಏನಿದೆ?
ವಸತಿ ಯೋಜನೆ ಬಡವರಿಗೆ ಸೂರು ಒದಗಿಸಿ ಕೊಡುವ ಸಲುವಾಗಿ ಆರಂಭಿಸಿರುವ ಯೋಜನೆ ಆಗಿದೆ. ಆದ್ರೆ ಇದೇ ಯೋಜನೆ ಇಂದು ಬಡವರಿಗೆ ದೊಡ್ಡ ಹೊರೆ ಆಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ, ವಸತಿ ಯೋಜನೆಗೆ ಬಡವರು ಪ್ರತಿ ತಿಂಗಳು 8 ರಿಂದ 10,000ಗಳನ್ನು ಪಾವತಿ ಮಾಡಬೇಕು. ದಿನವೂ ದುಡಿದು ತಿನ್ನುವವರ ಬಳಿ ಇಷ್ಟು ಹಣ ಬರಲು ಸಾಧ್ಯವೇ ಇಲ್ಲ ಹಾಗಾಗಿ ಪ್ರತಿ ತಿಂಗಳು ಪಾವತಿ ಮಾಡಲಾಗುತ್ತಿರುವ ಮೊತ್ತ ಬಡವರಿಗೆ ದೊಡ್ಡ ಹೊರೆಯಾಗಿದೆ.
ಬ್ಯಾಂಕಿನಿಂದ ಸಾಲ ಪಡೆದುಕೊಂಡಿದೆ ಪ್ರತಿ ತಿಂಗಳು ಎಂಟರಿಂದ ಹತ್ತು ಸಾವಿರ ರೂಪಾಯಿಗಳನ್ನು ಬಡವರು ಪಾವತಿ ಮಾಡಬೇಕು. ಇದು ವಸತಿ ಫಲಾನುಭವಿಗಳಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.
ವಸತಿ ಯೋಜನೆ ಫಲಾನುಭವಿಗಳಿಗೆ ಸುಲಭವಾಗಿ ಸಿಗುವಂತೆ ಸರ್ಕಾರ ಮಾಡಬೇಕು. ಬ್ಯಾಂಕ್ ಗಳಲ್ಲಿ, ಸಿಬಿಲ್ ಸ್ಕೋರ್ ಮತ್ತಿತರ ಕಾರಣಕ್ಕೆ ಸಾಲ ನೀಡದೆ ನಿರಾಕರಿಸಬಾರದು. ಜಿ ಎಸ್ ಟಿಯನ್ನು ವಿಧಿಸಬಾರದು ಹಾಗೂ ಬಡ ವಸತಿ ಫಲಾನುಭವಿಗಳ ಸಾಲದ ಮೊತ್ತಕ್ಕೆ ಪ್ರತಿ ತಿಂಗಳು ಪಾವತಿ ಮಾಡಬೇಕಾದ ಹಣ 3,000 ರೂ. ಮೀರದಂತೆ ಇರಬೇಕು ಎಂದು ಸರ್ಕಾರ ಮನವಿ ಮಾಡಲಾಗಿದೆ.
ಒಟ್ಟಿನಲ್ಲಿ ವಸತಿ ಯೋಜನೆ ಬಡವರಿಗೆ ಸ್ವಂತ ನಿರ್ಮಾಣ ಮಾಡಿಕೊಳ್ಳಲು, ಸಹಾಯಕವಾಗಬೇಕೆ ಹೊರತು, ವಸತಿ ಯೋಜನೆಗಾಗಿ ಬಡವರಿಗೆ ಪಾವತಿ ಮಾಡುವ ಹಣದ ಹೊರೆಯೇ ಜಾಸ್ತಿ ಆಗಬಾರದು ಎನ್ನುವುದು ಹಲವರ ಹಂಬಲ.
ಇತರೆ ವಿಷಯಗಳು:
ಸರ್ಕಾರದಿಂದ ಲ್ಯಾಪ್ಟಾಪ್ ದ್ವಿಚಕ್ರ ವಾಹನ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ: ಆನ್ ಲೈನ್ ಅರ್ಜಿ ಆಹ್ವಾನ