ನಮಸ್ಕಾರ ಸ್ನೇಹಿತರೇ ,ಪ್ರತಿಯೊಬ್ಬ ಭಾರತೀಯನ ವಿಶಿಷ್ಟ ಗುರುತಾಗಿ ಆಧಾರ್ ಕಾರ್ಡ್ ಅನ್ನು ನೋಡಬಹುದು. ಅದೆಷ್ಟೋ ಕೆಲಸಗಳು ಆಧಾರ್ ಕಾರ್ಡ್ ಇಲ್ಲದಿದ್ದರೆ ನಡೆಯುವುದೇ ಇಲ್ಲ. ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯುವುದಕ್ಕಾಗಲಿ, ಮಕ್ಕಳಿಗೆ ಶಾಲೆ ಅಥವಾ ಕಾಲೇಜಿನಲ್ಲಿ ಪ್ರವೇಶ ಪಡೆಯುವುದಕ್ಕಾಗಲಿ , ಮನೆ ಖರೀದಿಸುವುದಕ್ಕಾಗಲಿ,ಅರ್ಜಿಯನ್ನು ಸಾಲಕ್ಕೆ ಸಲ್ಲಿಸುವುದಕ್ಕೆ ಆಗಲಿ ಹಾಗೂ ಸರ್ಕಾರದ ಇನ್ಯಾವುದೇ ಪ್ರಯೋಜನಗಳನ್ನು ಪಡೆಯುವುದಕ್ಕಾಗಲಿ ಆಧಾರ್ ಕಾರ್ಡ್ ಮುಖ್ಯವಾಗಿದೆ. ನೀವೇನಾದರೂ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ತಪ್ಪಾಗಿ ಆಧಾರ್ ಕಾರ್ಡ್ ನಲ್ಲಿ ನಮೂದಿಸಿದ್ದರೆ ಈ ಎಲ್ಲ ಪ್ರಯೋಜನಗಳಿಂದ ವಂಚಿತರಾಗಬೇಕಾಗುತ್ತದೆ. ಹಾಗಾದರೆ ಆಧಾರ್ ಕಾರ್ಡ್ ನಲ್ಲಿರುವ ಮಸ್ಯೆಗಳನ್ನು ಎಷ್ಟು ಬಾರಿ ಅಂದರೆ ಹೆಸರು ಡೇಟ್ ಆಫ್ ಬರ್ತ್‌ಗಳನ್ನು ಎಷ್ಟು ಬಾರಿ ಬದಲಾವಣೆ ಮಾಡಬೇಕು ಹಾಗೂ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.
ಆಧಾರ್ ಕಾರ್ಡ್ ಅಪ್ಡೇಟ್ :
ನಿಮ್ಮದೇನಾದರೂ ಆಧಾರ್ ಕಾರ್ಡ್ ಹಳೆಯದಾಗಿದ್ದರೆ ಪ್ರತಿ 10 ವರ್ಷಕ್ಕೊಮ್ಮೆ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸುವುದರ ಮೂಲಕ ಸರ್ಕಾರದಿಂದ ಸಿಗುವಂತಹ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ನೀವು ಹುಟ್ಟಿದ ದಿನಾಂಕದಲ್ಲಿ ಹಾಗೂ ಹೆಸರಿನಲ್ಲಿ ಬದಲಾವಣೆಗಳಿದ್ದರೆ ಸರ್ಕಾರಿ ಕೆಲಸಗಳಲ್ಲಿ ನಿಮಗೆ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ನೀವೇನಾದರೂ ಆಧಾರ್ ಕಾರ್ಡ್ ನಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಯೋಚಿಸುತ್ತಿದ್ದರೆ ಈ ತಪ್ಪುಗಳನ್ನು ಸರಿಪಡಿಸಲು ಕೂಡ ನಿಯಮಗಳಿರುವುದನ್ನು ನೀವು ತಿಳಿದುಕೊಳ್ಳಬೇಕು. ಎಷ್ಟು ಬಾರಿ ಈ ತಪ್ಪುಗಳನ್ನು ನೀವು ಸರಿಪಡಿಸಬಹುದು ಎಂಬುದಕ್ಕೆ ನಿಯಮವಿದ್ದು ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕ ಹಾಗೂ ಹೆಸರನ್ನು ಅಪ್ಡೇಟ್ ಮಾಡಬೇಕಾದರೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎಂದು ನೋಡುವುದಾದರೆ,
ಜನ್ಮ ದಿನಾಂಕ ಮತ್ತು ಹೆಸರನ್ನು ಬದಲಾಯಿಸಬಹುದು :
ನೀವೇನಾದರೂ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗೂ ಜನ್ಮ ದಿನಾಂಕವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಯಾರೇ ಆಧಾರ್ ಕಾರ್ಡ್ ಅನ್ನು ಹೊಂದಿರುವವರು ಎರಡು ಬಾರಿ ಮಾತ್ರ ತಮ್ಮ ಜೀವನದಲ್ಲಿ ತಮ್ಮ ಹೆಸರು ಹಾಗೂ ಜನ್ಮ ದಿನಾಂಕವನ್ನು ಬದಲಾಯಿಸಲು ಸರ್ಕಾರವು ಅವಕಾಶ ಕಲ್ಪಿಸಿದೆ. ಇದಲ್ಲದೆ ಜನ್ಮ ದಿನಾಂಕದ ಮಾಹಿತಿಯನ್ನು ಆಧಾರ್ ಕಾರ್ಡ್ ನಲ್ಲಿ ನೀಡಲಾಗಿದ್ದು ಜನ್ಮ ದಿನಾಂಕವನ್ನು ಸಹ ಎರಡು ಬಾರಿ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದ್ದು ಲಿಂಗವನ್ನು ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡುವ ಸೌಲಭ್ಯವನ್ನು ಒಂದು ಬಾರಿ ಮಾತ್ರ ಕಲ್ಪಿಸಲಾಗಿದೆ. ಹೀಗೆ ಈ ಎಲ್ಲಾ ಮಾಹಿತಿಯನ್ನು ಅಪ್ಡೇಟ್ ಮಾಡಲು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಯುಐಡಿಎಐ ಮಿತಿಯನ್ನು ನಿರ್ಧರಿಸಿರುತ್ತದೆ.
ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಕ್ಯಾಶ್ ಬ್ಯಾಕ್ ಯೋಜನೆ : ಹೆಚ್ಚಿನ ಮಾಹಿತಿಗಾಗಿ ಓದಿ
ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಮಾಡುವುದು ಹೇಗೆ ?
ನೀವೇನಾದರೂ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಹೆಸರನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಮೊದಲು ನೀವು ಯುಐಡಿಎಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://myaadhaar.uidai.gov.in/ಈ ವೆಬ್ ಸೈಟ್ಗೆ ಭೇಟಿ ನೀಡಿ ಲಾಗಿನ್ ಆದ ನಂತರ ನಿಮ್ಮ ಆಧಾರ್ ಕಾರ್ಡ್ ಹಾಗೂ ಕ್ಯಾಪ್ಚಾ ಕೊಡನ್ನು ಭರ್ತಿ ಮಾಡಿದ ನಂತರ ನೀವು ಆಧಾರ್ ಕಾರ್ಡ್ ಗೆ ನೋಂದಾಯಿಸಲಾದ ಮೊಬೈಲ್ ನಂಬರ್ ಗೆ ಓಟಿಪಿಯನ್ನು ಕಳುಹಿಸಲಾಗುತ್ತದೆ. ಓಟಿಪಿಯನ್ನು ನಮೂದಿಸಿದ ನಂತರ ನೀವು ಪ್ರೊಸೀಡ್ ಟು ಅಪ್ಡೇಟ್ ಆಧಾರ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಹೊಸ ಪುಟ್ಟ ತಿಳಿಯುತ್ತದೆ ಅದರಲ್ಲಿ ನೀವು ಹೆಸರನ್ನು ಬದಲಾವಣೆ ಮಾಡಲು ಆಯ್ಕೆಯನ್ನು ಅನುಸರಿಸಿ ನಿಮ್ಮ ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ನಂತರ ಅಟ್ಯಾಚ್ ಮಾಡಿ ಸಬ್ಮಿಟ್ ಮಾಡಬೇಕಾಗುತ್ತದೆ ಅದರಲ್ಲಿ ನಿಮಗೆ ಮತ್ತೆ ಒಟಿಪಿ ಆಯ್ಕೆಯು ಕಂಡುಬರುತ್ತದೆ.
ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಏನು ನಮೂದಿಸಿದ ನಂತರ ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ನೀವೇನಾದರೂ ಆಧಾರ್ ಕಾರ್ಡ್ ನಲ್ಲಿ ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ ಆಧಾರ್ ಕಾರ್ಡ್ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಬದಲಾವಣೆ ಆಗುವುದಿಲ್ಲ. ಯಾವುದೇ ಮಾಹಿತಿಯನ್ನು ಆಧಾರ್ ಕಾರ್ಡ್ ನಲ್ಲಿ ನವೀಕರಿಸಲು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆದ ಮೊಬೈಲ್ ಸಂಖ್ಯೆಯನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ. ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಗೆ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡುವಾಗ ಓಟಿಪಿ ಬರುತ್ತದೆ ಓಟಿಪಿಯನ್ನು ನಮೂದಿಸದೆ ನೀವು ನಿಮ್ಮ ಹೆಸರು ವಿಳಾಸ ಮತ್ತು ಇನ್ ಯಾವುದೇ ಮಾಹಿತಿಗಳನ್ನು ನವೀಕರಿಸಲು ಆಧಾರ್ ಕಾರ್ಡ್ ನಲ್ಲಿ ಸಾಧ್ಯವಾಗುವುದಿಲ್ಲ.
ಹೀಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಎಷ್ಟು ಬಾರಿ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗೂ ಜನ್ಮ ದಿನಾಂಕವನ್ನು ಬದಲಾಯಿಸಬೇಕು ಎಂಬುದಕ್ಕೆ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದು ನಿಮ್ಮ ಸ್ನೇಹಿತರು ಯಾರಾದರೂ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗೂ ಜನ್ಮ ದಿನಾಂಕವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಅವರಿಗೆ ಕೇವಲ ಎರಡು ಬಾರಿ ಮಾತ್ರ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಬದಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ತಿಳಿಸಿ. ಅದರ ಜೊತೆಗೆ ಮಾಹಿತಿಯನ್ನು ನಿಮ್ಮೆಲ್ಲ ಬಂದು ಮಿತ್ರರು ಹಾಗೂ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ರೈತರಿಗೆ ಗುಡ್ ನ್ಯೂಸ್ : ಈ ಹೊಸ ಯೋಜನೆಯಲ್ಲಿ ರೈತರಿಗೆ ಹಣ ಸಿಗುತ್ತದೆ
ಟ್ರೂ ಕಾಲರ್ ಬಳಸುವವರು ತಪ್ಪದೆ ನೋಡಿ : ಕಾದಿದೆ ಶಾಕ್ ನಿಮ್ಮಗಾಗಿ