ನಮಸ್ಕಾರ ಸ್ನೇಹಿತರೆ ಆಧಾರ್ ಕಾರ್ಡ್ ದೇಶದ ಪ್ರತಿಯೊಬ್ಬರಿಗೂ ಪ್ರಮುಖ ಗುರುತಿನ ದಾಖಲೆಯಾಗಿದ್ದು ಈ ಆಧಾರ್ ಕಾರ್ಡ್ ನ ಮೂಲಕವೇ ಸರ್ಕಾರದಿಂದ ಬಿಡುಗಡೆಯಾಗುವ ಯೋಜನೆಗಳು ಹಾಗೂ ಸಬ್ಸಿಡಿಯನ್ನು ಪಡೆಯಬಹುದಾಗಿದೆ. ಅಲ್ಲದೆ ಆಧಾರ್ ಸಂಖ್ಯೆಯನ್ನು ಕೆಲವೊಂದು ಸಂದರ್ಭಗಳಲ್ಲಿ ನೀಡಬೇಕಾಗಿರುತ್ತದೆ ಹೀಗೆ ಆಧಾರ ಸಂಖ್ಯೆಯನ್ನು ನೀಡಿದಾಗ ದುರುಪಯೋಗಪಡಿಸಿಕೊಳ್ಳುವ ಆತಂಕ ಎಲ್ಲರಲ್ಲೂ ಮೂಡುತ್ತದೆ.

ಕೋಟಿ ರೂಪಾಯಿಗಳು ದೋಚಿದ್ದಾರೆ :
ಸೈಬರ್ ವಂಶಕರು ಕಳೆದ ಕೆಲವು ತಿಂಗಳುಗಳಿಂದ ಆದೆ ಆಧಾರ್ ಕಾರ್ಡ್ ಬಳಸಿ ಕೋಟಿ ಕೋಟಿ ರೂಪಾಯಿಗಳನ್ನು ದೋಚಿರುವುದಲ್ಲದೆ, ಇತರರ ಆಧಾರ್ ಕಾರ್ಡ್ ಅನ್ನು ಬಳಸಿ ಕೆಲ ದಿನಗಳ ಹಿಂದೆ ಹೊಸ ಸಿಮ್ ಕಾರ್ಡ್ ಸಕ್ರಿಯಗೊಳಿಸಲು ಒಂದು ಗ್ಯಾಂಗ್ ಕೂಡ ಸಿಕ್ಕಿಬಿದ್ದಿತ್ತು. 658 ಸಿಮ್ ಕಾರ್ಡ್ಗಳನ್ನು ವೋಟರ್ ಐಡಿ ಬಳಸುವುದರ ಮೂಲಕ ನೀಡಲಾಗುವುದು ಎಂಬ ಜಾಹೀರಾತು ಕೂಡ ಕೇಳಿ ಬಂದಿತ್ತು ಅದಾದ ಮೇಲೆ ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದನ್ನು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಜನರು ಎಚ್ಚರಿಕೆವಹಿಸುತ್ತಿದ್ದಾರೆ. ನಮ್ಮ ಬಳಕೆಗೆ ಮಾತ್ರವೇ ಆಧಾರ್ ಕಾರ್ಡ್ ಇರಬೇಕು ಅದೊಂದು ಪ್ರಮುಖ ಗುರುತಾಗಿದ್ದು ಇದನ್ನು ಕಂಡ ಕಂಡಲ್ಲಿ ಹಂಚಿಕೊಳ್ಳಬಾರದು ಎಂಬ ಸುಮಾರು ಜನರಲ್ಲಿ ಈಗ ಸಾಮಾನ್ಯ ಜ್ಞಾನ ಬಂದಿದೆ. ತೆರೆಮರಿಯಲ್ಲಿ ಅಡಗಿ ಕೆಲವೊಂದಿಷ್ಟು ವಂಚಕರು ಹಣ ವರ್ಗಾವಣೆಯನ್ನು ಆಧಾರ್ ಕಾರ್ಡ್ ಬಳಸುವುದರ ಮೂಲಕ ಮಾಡುತ್ತಿದ್ದಾರೆ.
ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವ ವಿಧಾನ :
ಸಾಮಾನ್ಯವಾಗಿ ಎಲ್ಲರಿಗೂ ನಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಕುತೂಹಲವಾಗಿರುತ್ತದೆ ಅದರಂತೆ ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಯುಐಡಿಎಐ ಅಧಿಕೃತ ವೆಬ್ಸೈಟ್ನಲ್ಲಿ ಆಧಾರ್ ಆಥೆಂಟಿಕೇಷನ್ ಹಿಸ್ಟರಿ ಎಂಬ ಟೂಲ್ ನಲ್ಲಿ ತಿಳಿದುಕೊಳ್ಳಬಹುದಾಗಿದೆ. ಯು ಐ ಡಿ ಎ ಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಮೈ ಆಧಾರ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಬದಿಯಲ್ಲಿ ಮೇಲ್ಭಾಗದಲ್ಲಿ ಒಂದು ವೆಬ್ಸೈಟ್ ತೆಗೆದುಕೊಳ್ಳುತ್ತದೆ ಅದರಲ್ಲಿ ನೀವು ಕ್ಲಿಕ್ ಮಾಡಿದ ತಕ್ಷಣ ಡ್ರಾಪ್ಡೌನ್ ಎಂಬ ಮೆನು ಕಾಣಿಸುತ್ತದೆ.
ಇದನ್ನು ಓದಿ : ಸ್ಕಾಲರ್ ಶಿಪ್ ಗೆ ಮತ್ತೆ ಅವಕಾಶ ನೀಡಲಾಗಿದೆ : ಎಲ್ಲ ವಿದ್ಯಾರ್ಥಿಗಳಿಗೂ ಸಿಗುತ್ತೆ
ಅದರಲ್ಲಿ ನೀವು ಆಧಾರ್ ಸೇವಾ ವಿಭಾಗದಲ್ಲಿ ಆಧಾರ್ ಅಥೆಂಟಿಕೇಶನ್ ಹಿಸ್ಟರಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಒಂದು ಹೊಸ ಪುಟ ತೆರೆಯುತ್ತದೆ ಅದರಲ್ಲಿ ನೀವು ನಿಮ್ಮ ಆಧಾರ ಸಂಖ್ಯೆ ಬಳಸಿಕೊಂಡು ಲಾಗಿನ್ ಆದ ನಂತರ ನಿಮ್ಮ ಆಧಾರ್ ನಂಬರ್ ಎಲ್ಲೆಲ್ಲಿ ಬಳಕೆಯಾಗಿದೆ ಹಾಗೂ ಹಿಂದಿನ ದೃಢೀಕರಣ ಮನವಿಗಳು ಎಲ್ಲವೂ ಸಹ ತಿಳಿಯುತ್ತದೆ. ನೀವು ಯು ಐ ಡಿ ಎ ಐ ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಟೋಲ್ ಫ್ರೀ ನಂಬರ್ ಅದ 1947 ಅಥವಾ help@uidai.gov.in ಸಂಪರ್ಕಿಸಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಾಗೂ ನಿಮ್ಮ ಆಧಾರ್ ಕಾರ್ಡ್ ಬೇರೆ ಯಾರಾದರೂ ಬಳಸಿದ್ದರೆ ಅದರ ವಿರುದ್ಧವು ದೂರನ್ನು ನೀಡಬಹುದಾಗಿದೆ.
ಹೀಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆ ಆಗುತ್ತಿದೆ ಎಂಬ ಅನುಮಾನವಿದ್ದರೆ ಈ ಲೇಖನವನ್ನು ಪೂರ್ಣವಾಗಿ ಓದುವುದರ ಮೂಲಕ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಇದರಲ್ಲಿ ನೀಡಿರುವ ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನಿಮ್ಮ ಆಧಾರ್ ಕಾರ್ಡ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ದೂರುಗಳು ಏನಾದರೂ ಇದ್ದರೆ ಅವುಗಳನ್ನು ಸಹ ನೀಡಬಹುದಾಗಿದೆ. ಹಾಗಾಗಿ ಆಧಾರ್ ಕಾರ್ಡ್ ಈ ಮಹತ್ವದ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಉಚಿತವಾಗಿ ಅನ್ಲಿಮಿಟೆಡ್ ಡೇಟಾ ಪಡೆಯಿರಿ :ಈ ಸಿಮ್ ಹೊಂದಿರುವವರಿಗೆ ಮಾತ್ರ ಆಫರ್
- ಮೈಚಾಂಗ್ ಚಂಡಮಾರುತ : ನೌಕರರಿಗೆ ಮನೆಯಲ್ಲಿಯೇ ಕೆಲಸ ಮಾಡಲು ಸೂಚನೆ; ಶಾಲಾ ಕಾಲೇಜುಗಳ ಕಥೆ ಏನು..?