Agriculture

ತುಂತುರು ಹನಿ ನೀರಾವರಿ ಯೋಜನೆಗೆ ಸಹಾಯಧನ ಪಡೆದುಕೊಳ್ಳುವ ಮಾಹಿತಿ

Information on availing subsidy for Drip Irrigation Scheme

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ .ಈ ಲೇಖನದಲ್ಲಿ ನೀರಾವರಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದು ಶೇಕಡ 90ರಷ್ಟು ಸಹಾಯಧನವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಲಿದ್ದೇವೆ. ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದರೆ ನಿಮಗೆ ಈ ಮಾಹಿತಿ ದೊರೆಯಲಿದೆ.

Information on availing subsidy for Drip Irrigation Scheme
Information on availing subsidy for Drip Irrigation Scheme

ಯೋಜನೆಗಳ ಮಾಹಿತಿ :

ಅಟಲ್ ಭೂಜಲ ಯೋಜನೆ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಇದರೊಂದಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮೂಲಕ ನೀರಿನ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ತುಂತುರು ಅಥವಾ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿರುತ್ತದೆ .ಇದರಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಶೇಕಡ 90ರಷ್ಟು ಸಹಾಯಧನವನ್ನು ಪಡೆದುಕೊಳ್ಳಬಹುದು ಹಾಗೂ ಇದರೊಂದಿಗೆ ಇತರೆ ಹಿಂದುಳಿದ ವರ್ಗದ ರೈತರು ಸಹ 45ರಷ್ಟು ಸಹಾಯಧನವನ್ನು ಪಡೆದುಕೊಳ್ಳಬಹುದು ಹಾಗಾಗಿ ಈ ಮಾಹಿತಿಯನ್ನು ತಿಳಿದುಕೊಳ್ಳಿ.

ಇದನ್ನು ಓದಿ : ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ

ಯಾವ ಜಿಲ್ಲೆಗಳಲ್ಲಿ ನೀಡಲಾಗುತ್ತಿದೆ :

ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಹಾಗೂ ರೈತರು ನಿಮ್ಮ ತಾಲೂಕಿನಲ್ಲಿ ಇರುವಂತಹ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ .ಇದರಲ್ಲಿ ಪ್ರಮುಖವಾಗಿ ಚಿಕ್ಕಬಳ್ಳಾಪುರ ಚಿಕ್ಕಮಂಗಳೂರು ದಾವಣಗೆರೆ ಗದಗ ಕೋಲಾರ ತುಮಕೂರು ರಾಮನಗರ ಹೀಗೆ ಇನ್ನೂ ಅನೇಕ ಜಿಲ್ಲೆಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು :

  • ಆಧಾರ ಕಾರ್ಡ್ ಬೇಕಾಗುತ್ತದೆ
  • ನಿಮ್ಮ ಬ್ಯಾಂಕ್ ಪಾಸ್ ಪುಸ್ತಕ
  • ಇತ್ತೀಚೆಗಿನ ಭಾವಚಿತ್ರ
  • ನಿಮ್ಮ ಜಾತಿ ಆದಾಯ ಪ್ರಮಾಣ ಪತ್ರ
  • ಕೊಳವೆಬಾವಿ ಒಂದಿರುವುದರ ಬಗ್ಗೆ ಪತ್ರ
  • ವಿದ್ಯುತ್ ಪರವಾನಿಗೆ ಬೇಕಾಗುತ್ತದೆ
  • 20 ರೂಪಾಯಿ ಚಾಪಾಕಾಗದ ಬೇಕಾಗುತ್ತದೆ
  • ಇದರೊಂದಿಗೆ ಅರ್ಜಿ ನಮೂನೆ ಬೇಕಾಗುತ್ತದೆ

ಈ ಮೇಲ್ಕಂಡ ದಾಖಲೆಗಳನ್ನು ನೀವು ನೀಡುವ ಮೂಲಕ ತುಂತುರು ಹನಿ ನೀರಾವರಿ ಯೋಜನೆಯಿಂದ ಶೇಕಡವಾರು ಸಹಾಯಧನವನ್ನು ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸುವ ಮೂಲಕ ಯೋಜನೆ ಲಾಭವನ್ನು ಪಡೆಯಲು ತಿಳಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...