ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯವೆಂದರೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ತಿಳಿಸಲಾಗುತ್ತಿದೆ. ಹಲವು ಯೋಜನೆಗಳನ್ನು ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆ ವತಿಯಿಂದ ಜಾರಿಗೆ ತರಲಾಗುತ್ತದೆ ಆ ಯೋಜನೆಗಳ ಸೌಲಭ್ಯವನ್ನು ಪಡೆಯಬೇಕಾದರೆ ಮೊದಲು ಕಾರ್ಮಿಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅನೇಕ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಕರ್ನಾಟಕ ಸರ್ಕಾರವು ಅನುಷ್ಠಾನಕ್ಕೆ ತರಲಾಗುತ್ತಿದೆ ಅದಕ್ಕಾಗಿ ಕಾರ್ಮಿಕರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ಕಾರ್ಮಿಕರಿಗಾಗಿ ಲಭ್ಯವಿರುವ ಸೌಲಭ್ಯಗಳು :
ಕರ್ನಾಟಕ ಸರ್ಕಾರವು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೊಂದಾಯಿಸಿಕೊಂಡಂತಹ ಅರ್ಹ ಫಲಾನುಭವಿಗಳಿಗೆ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದ್ದು ಆಯೋಜನೆಗಳೆಂದರೆ ಅಪಘಾತ ಪರಿಹಾರ ಮದುವೆ ಸಹಾಯಧನ ವೈದ್ಯಕೀಯ ಸಹಾಯಧನ ಪ್ರಮುಖ ವೈದ್ಯಕೀಯ ವೆಚ್ಚ ಸಹಾಯ ಧನ ಶೈಕ್ಷಣಿಕ ಸಹಾಯಧನ ತಾಯಿ ಮಗು ಸಹಾಯ ಹಸ್ತ ಪಿಂಚಣಿ ಮುಂದುವರಿಕೆ ದುರ್ಬಲತೆ ಪಿಂಚಣಿ ಸೌಲಭ್ಯ ಶ್ರಮ ಸಾಮರ್ಥ್ಯ ಟೋಲ್ ಗೇಟ್ ಉಚಿತ ಸಾರಿಗೆ ಬಸ್ ಪಾಸ್ ಸೌಲಭ್ಯ ಹೀಗೆ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದು ಕಾರ್ಮಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ಸರ್ಕಾರವು ಮಾಡುತ್ತಿದೆ.
ಕಾರ್ಮಿಕರ ಕಾರ್ಡ್ ಪಡೆಯಬೇಕಾದರೆ ಇರುವ ಅರ್ಹತೆಗಳು :
ಕಾರ್ಮಿಕ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಲು ಫಲಾನುಭವಿಗಳು 12 ತಿಂಗಳಲ್ಲಿ ನೋಂದಣಿ ಪೂರ್ವದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳವರೆಗೆ ಕೆಲಸ ಮಾಡಿರಬೇಕಾಗುತ್ತದೆ.
ಇದನ್ನು ಓದಿ : ಶಾಲಾ ಮಕ್ಕಳ ಪರೀಕ್ಷಾ ವೇಳಾಪಟ್ಟಿ : 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಕಟಣೆ
ಕಾರ್ಮಿಕ ಕಾರ್ಡಗಾಗಿ ಅಗತ್ಯವಿರುವ ದಾಖಲೆಗಳು :
ಕಾರ್ಮಿಕ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು 90 ದಿನಗಳ ಉದ್ಯೋಗ ದೃಢೀಕರಣ ಪತ್ರ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಕಾರ್ಮಿಕರು ಹೊಂದಿರಬೇಕು.
ಲೇಬರ್ ಕಾರ್ಡ್ ನೋಂದಣಿ ಅಭಿಯಾನ :
2023 ಡಿಸೆಂಬರ್ 30 ರಿಂದ ಮಾರ್ಚ್ 2024 ಮೂವತ್ತರ ವರೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಅಭಿಯಾನವು ಬೆಂಗಳೂರು ನಗರದಲ್ಲಿ ನಡೆಯಲಿದೆ ಎಂದು ಕಾರ್ಮಿಕ ಇಲಾಖೆಯು ತಿಳಿಸಿದೆ.
ಒಟ್ಟಾರೆಯಾಗಿ ಕರ್ನಾಟಕ ಸರ್ಕಾರವು ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ನೀಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಅಭಿಯಾನ ಪ್ರಾರಂಭ ಮಾಡಿದ್ದು ಅರ್ಹ ಫಲಾನುಭವಿಗಳು ಕಾರ್ಮಿಕ ಕಾರ್ಡು ಪಡೆದು ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದಾಗಿದೆ ಧನ್ಯವಾದಗಳು.
ಇತರೆ ವಿಷಯಗಳು :
- ಅನ್ನಭಾಗ್ಯ ಹಾಗು ಗೃಹಲಕ್ಷಿ ಹಣ ಪಡೆಯಲು E-KYC ಮತ್ತು NPCI ಕಡ್ಡಾಯವಾಗಿ ಮಾಡಿಸಬೇಕು
- 2024ರ ಕೊನೆಯಲ್ಲಿ ಚಿನ್ನ ಹಾಗು ಬೆಳ್ಳಿ ದರದಲ್ಲಿ ಎಷ್ಟು ಏರಿಕ್ಕೆ ಆಗುತ್ತೆ ನೋಡಿ , ಕೂಡಲೇ ಖರೀದಿಸಿ