ನಮಸ್ಕಾರ ಸ್ನೇಹಿತರೇ ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ಎರಡೂ ಕೂಡ ರಾಜ್ಯದಲ್ಲಿ ಬಹಳ ಮುಖ್ಯವಾದ ದಾಖಲೆಗಳಾಗಿದ್ದು ಹೆಚ್ಚಿನ ಸೌಲಭ್ಯ ಜನರಿಗೆ ನೀಡುವಲ್ಲಿ ಈ ಎರಡು ಕಾರ್ಡುಗಳು ಸಹಾಯ ಮಾಡುತ್ತವೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಹೆಚ್ಚಿನ ಪ್ರಯೋಜನಗಳು ಸಿಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ಸರ್ಕಾರದ ಉಚಿತ ರೇಷನ್ ಜೊತೆಗೆ ಹಲವಾರು ಸೌಲಭ್ಯಗಳು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಗುತ್ತವೆ. ಬಡತನದ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ಕಾರ್ಡನ್ನು ವಿತರಿಸಲಾಗುತ್ತದೆ.
ಹೊಸ ರೇಷನ್ ಕಾರ್ಡ್ ವಿತರಣೆ :
ಅನೇಕ ಜನರು ಎಲೆಕ್ಷನ್ ನಡೆಯುವುದಕ್ಕಿಂತ ಮೊದಲೇ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಿರುತ್ತಾರೆ ಆದರೆ ಇನ್ನು ಹೊಸ ರೇಷನ್ ಕಾರ್ಡ್ ಅನ್ನು ಅಂಥವರಿಗೆ ಸರ್ಕಾರವು ವಿತರಣೆ ಮಾಡಿರುವುದಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಕಾರಣದಿಂದಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ಪರಿಶೀಲಿಸಿ ಹೊಸ ರೇಷನ್ ಕಾರ್ಡ್ ಅನ್ನು ವಿತರಣೆ ಮಾಡಲು ಸಾಧ್ಯವಾಗಿಲ್ಲ ಅದರಂತೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವುದಕ್ಕೂ ಕೂಡ ಸರ್ಕಾರ ಅವಕಾಶ ಕಲ್ಪಿಸಿತ್ತು.
ಆ ಸಂದರ್ಭದಲ್ಲಿ ಸಾಕಷ್ಟು ಜನರು ಕೂಡ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿಕೊಂಡಿದ್ದರು ಆದರೆ ಇನ್ನೂ ಹಲವರು ತಿದ್ದುಪಡಿ ಮಾಡಲು ಸಾಧ್ಯವಾಗಲಿಲ್ಲ ಆದರೆ 2016ರ ಬಿಪಿಎಲ್ ರೇಷನ್ ಕಾರ್ಡ್ ನಿಯಮಗಳನ್ನು ರೇಷನ್ ಕಾರ್ಡ್ ಹೊಂದಿರುವ ಜನರು ಪಾಲಿಸದೆ ರೇಷನ್ ಕಾರ್ಡ್ ಹೊಂದಿದ್ದಾರೆ.
ಇದನ್ನು ಓದಿ : ಜನವರಿ ತಿಂಗಳ ಅನ್ನಭಾಗ್ಯ ಹಣ ಜಮಾ ಆಗಿದೆಯಾ : ಕೂಡಲೇ ಚೆಕ್ ಮಾಡಿಕೊಳ್ಳಿ
ಕರ್ನಾಟಕ ಸರ್ಕಾರದ ಕಠಿಣ ಕ್ರಮ :
2016ರ ಬಿಪಿಎಲ್ ರೇಷನ್ ಕಾರ್ಡ್ ನಿಯಮಗಳನ್ನು ಪಾಲಿಸದೆಯೇ ಸಾಕಷ್ಟು ಜನರು ರೇಷನ್ ಕಾರ್ಡ್ ಹೊಂದಿರುವ ಮಾಹಿತಿ ಸರ್ಕಾರಕ್ಕೆ ಕೇಳಿ ಬಂದಿದ್ದು ಅಂಥವರ ವಿರುದ್ಧ ಕ್ರಮ ಸರ್ಕಾರ ತೆಗೆದುಕೊಳ್ಳಲಿದೆ. ರೇಷನ್ ಕಾರ್ಡ್ ಅನ್ನು ರದ್ದು ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು ಅದಕ್ಕಾಗಿ ಎಲ್ಲಾ ರೇಷನ್ ಕಾರ್ಡ್ ಹಾಗೂ ಅದಕ್ಕೆ ಸಂಬಂಧಿಸಿದಂತಹ ಪರಿಶೀಲನೆಯನ್ನು ಕೂಡ ಸರ್ಕಾರ ನಡೆಸುತ್ತಿದ್ದು ಅರ್ಹತೆ ಇಲ್ಲದವರ ರೇಷನ್ ಕಾರ್ಡ್ ಅನ್ನು ರದ್ದು ಮಾಡುತ್ತಿದೆ.
ಈಗಾಗಲೇ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ಸರ್ಕಾರ ಪರಿಶೀಲಿಸಿ ಆದಷ್ಟು ಬೇಗ ಅವರಿಗೆ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲು ನಿರ್ಧರಿಸಿದೆ ಎಂದು ಮಾಹಿತಿಗಳು ತಿಳಿಸುತ್ತೇವೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಶೀಘ್ರದಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಸರ್ಕಾರದಿಂದ ಮಾಹಿತಿ ತಿಳಿದಿದ್ದು ಯಾವುದೇ ತೊಂದರೆ ರೇಷನ್ ಕಾರ್ಡ್ ಗೆ ಆಗಿಲ್ಲ ಎಂದು ತಿಳಿದುಕೊಳ್ಳಲು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ನೀಡಿ ಸ್ಟೇಟಸ್ ಚೆಕ್ ಮಾಡಬಹುದಾಗಿದೆ. ಅದರಂತೆ ಹೊಸದಾಗಿ ಅರ್ಜಿ ಸಲ್ಲಿಸಿರುವ ರೇಷನ್ ಕಾರ್ಡ್ ಗಳನ್ನು ಕೂಡ ವಿತರಣೆ ಮಾಡಲಾಗುತ್ತಿದೆ.
ಇತರೆ ವಿಷಯಗಳು :
- ಗೂಗಲ್ ಪೇ ಬಳಸುವವರು ತಿಂಗಳಿಗೆ 111 EMI ಕಟ್ಟಿದರೆ ನಿಮಗೆ ಸಾಲ ಸಿಗುತ್ತೆ ನೋಡಿ
- ರೈತರ ಖಾತೆಗೆ 25 ಲಕ್ಷ ಬರ ಪರಿಹಾರದ ಹಣ ಜಮ : ಸಂಪೂರ್ಣವಾಗಿ ತಿಳಿದುಕೊಳ್ಳಿ