News

ಈ ವಾರ ಮಕ್ಕಳು ಜನಿಸಿದರೆ ಶುಭ ಶಕುನ : ನೀವು ಯಾವ ವಾರ ಜನಿಸಿದರೆ ಅದರ ಬಗ್ಗೆ ತಿಳಿದುಕೊಳ್ಳಿ

It is a good omen if children are born this week

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಮಗೆ ಯಾವ ವಾರದಂದು ಮಕ್ಕಳು ಜನಿಸಿದರೆ ಏನು ಫಲ ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ಅದರಂತೆ ಯಾವ ವಾರ ಜನಿಸಿದರೆ ಮಕ್ಕಳು ಶುಭ ಶಕುನ ಹಾಗೂ ಆಶುಭ ಎಂದು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.

It is a good omen if children are born this week
It is a good omen if children are born this week

ಭಾನುವಾರದ ದಿನದಂದು :

ಗಂಡು ಮಕ್ಕಳು ಭಾನುವಾರದಂದು ಜನಿಸಿದರೆ ಶುಭ ಫಲ ಎಂದು ಹೇಳಲಾಗುತ್ತದೆ. ಅವತ್ತಿನ ದಿನದಂದು ಮಕ್ಕಳು ಜನಿಸಿದರೆ ಶಿಸ್ತಿನ ಜೀವನವನ್ನು ಪಾಲಿಸುವುದರ ಜೊತೆಗೆ ಉನ್ನತ ಸ್ಥಾನಕ್ಕೆ ಇರುತ್ತಾರೆ ಹಾಗೂ ಶ್ರೇಷ್ಠವಾದ ಗುಣವನ್ನು ಹೊಂದಿರುತ್ತಾರೆ. ಅದೇ ವಾರದಂದು ಹೆಣ್ಣು ಮಕ್ಕಳು ಜನಿಸಿದರೆ ಆ ಹೆಣ್ಣು ಮಗುವು ತಂದೆ ಮನೆಗೆ ಹಾಗೂ ಗಂಡನ ಮನೆಗೆ ಅದೃಷ್ಟ ಅಷ್ಟ ಐಶ್ವರ್ಯವನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ನಂಬಲಾಗಿದೆ.

ಸೋಮವಾರ ದಂದು :

ಸೋಮವಾರದಂದು ಜನಿಸಿದ ಗಂಡು ಮಗು ಶಿವನ ಆರಾಧಕನಾಗುವುದಲ್ಲದೆ ಧಾರ್ಮಿಕ ಕಾರ್ಯದಲ್ಲಿ ತೊಡಗುತ್ತಾನೆ ಹಾಗೂ ಗೌರವದ ಮಾರ್ಗದಲ್ಲಿ ಇವನು ಸಾಧುಸಂತರಲ್ಲಿ ನಂಬಿಕೆ ಇಟ್ಟು ಧ್ಯಾನ ಯಾವ ಮೊದಲಾದವುಗಳಲ್ಲಿ ಭಾಗವಹಿಸುತ್ತಾನೆ. ಅದೇ ರೀತಿ ಹೆಣ್ಣು ಮಗು ಸೋಮವಾರ ಹುಟ್ಟಿದರೆ ತಂದೆ ಮನೆಗೆ ಹೆಸರು ತರುವಂತೆ ಗಂಡನ ಮನೆಯಲ್ಲಿ ಬದುಕುತ್ತಾಳೆ. ತಾಳ್ಮೆಯಿಂದ ಹಾಗೂ ಸಹನಾ ಮೂರ್ತಿಯಾಗಿ ಸಾಧನೆಯನ್ನು ಮಾಡುವುದರ ಜೊತೆಗೆ ತನ್ನ ಜೀವನವನ್ನು ಕುಟುಂಬಕ್ಕಾಗಿ ಮೀಸಲಿಡುತ್ತಾರೆ.

ಮಂಗಳವಾರದಂದು :

ಗಂಡು ಮಕ್ಕಳು ಮಂಗಳವಾರ ದಿನದಂದು ಹುಟ್ಟಿದರೆ ಬಹಳ ಧೈರ್ಯಶಾಲಿಗಳಾಗಿರುತ್ತಾರೆ ಹಾಗೂ ಸಾಹಸ ಪ್ರವೃತ್ತಿಯರವರಾಗಿರುತ್ತಾರೆ. ಅದೇ ರೀತಿ ಹೆಣ್ಣು ಮಗು ಮಂಗಳವಾರ ಹುಟ್ಟಿದರೆ ಅವಳು ಗಂಡು ಮಗನಂತೆ ಮನೆಗೆ ನಿಂತು ತವರು ಮನೆಯ ಕಷ್ಟ ಹಾಗೂ ಗಂಡನ ಮನೆಯಲ್ಲಿರುವ ಕಷ್ಟಗಳಲ್ಲಿ ಕುಟುಂಬಸ್ಥರನ್ನು ಕಾಪಾಡುತ್ತಾಳೆ.

ಬುಧವಾರ ದಿನ :


ಬುಧವಾರದಂದು ಗಂಡು ಮಗು ಜನಿಸಿದರೆ ಮುಂದಿನ ದಿನಗಳಲ್ಲಿ ಆತ ಮಹಾಜ್ಞಾನಿ ಆಗುತ್ತಾನೆ ಜೊತೆಗೆ ಸೌಮ್ಯ ಸ್ವಭಾವವನ್ನು ಹೊಂದಿರುತ್ತಾನೆ. ಅಲ್ಲದೆ ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನದಲ್ಲಿ ಸಾಧಿಸುತ್ತಾನೆ. ಅದೇ ರೀತಿ ಹೆಣ್ಣು ಮಗು ಬುದುವಾರದಂದು ಹುಟ್ಟಿದರೆ ಅದಕ್ಕೆ ಬಹಳ ಬುದ್ಧಿವಂತಳಾಗಿರುತ್ತಾಳೆ. ಕುಟುಂಬವನ್ನು ನಗುನಗುತ್ತಾ ಕರ್ತವ್ಯ ಎರಡನ್ನು ಪಾಲಿಸುತ್ತಾಳೆ.

ಗುರುವಾರ :

ಗಂಡು ಮಗುವು ಗುರುವಾರ ದಿನದಂದು ಹುಟ್ಟಿದರೆ ಆತ ಬೇರೆಯವರ ಕಷ್ಟಗಳಿಗೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಅವನಲ್ಲಿ ಹೆಚ್ಚಿರುತ್ತದೆ ಹಾಗೂ ಏನಾದರೂ ಸಮಸ್ಯೆಯು ಸಹೋದರರಲ್ಲಿ ಬಂದರೆ ಎಲ್ಲರನ್ನು ಮೊದಲು ಸಂಘಟಿಸುತ್ತಾರೆ ಅದರ ಜೊತೆಗೆ ತಮ್ಮಿಂದಾದಂತಹ ಸಹಾಯವನ್ನು ಮಾಡುತ್ತಾರೆ. ಹೆಣ್ಣು ಮಗುವು ಗುರುವಾರ ದಿನದಂದು ಹುಟ್ಟಿದರೆ ದೈವ ಭಕ್ತಿಯಾಗಿರುತ್ತಾಳೆ. ಅದರ ಜೊತೆಗೆ ಅಪಾರ ಪ್ರೀತಿಯನ್ನು ಕುಟುಂಬದ ಮೇಲೆ ಇರಿಸುತ್ತಾಳೆ.

ಶುಕ್ರವಾರ :

ಬಹಳ ಅದ್ದೂರಿಯಾಗಿ ಜೀವನದಲ್ಲಿ ಶುಕ್ರವಾರದಂದು ಹುಟ್ಟಿದ ಗಂಡು ಮಗು ಹಾಗೂ ಇವರಿಗೆ ಯಾವುದೇ ರೀತಿಯ ಹಣಕಾಸಿನ ಕೊರತೆ ಬರುವುದೇ ಇಲ್ಲ. ಹೆಣ್ಣು ಮಗುವು ತಂದೆಯ ಮನೆಯಲ್ಲಿ ಶುಕ್ರವಾರದಂದು ಜನಿಸಿದರೆ ದರಿದ್ರ ದನ ಬಂದರೂ ಸಹ ಆಕೆ ಗಂಡನ ಮನೆಯಲ್ಲಿ ಅದೃಷ್ಟಲಕ್ಷ್ಮಿಯಾಗಿ ಕಾಣುತ್ತಾಳೆ ಅದರಂತೆ ಎಲ್ಲಾ ಅಧಿಕಾರಗಳನ್ನು ಗಂಡನ ಮನೆಯಲ್ಲಿ ಅನುಭವಿಸುತ್ತಾಳೆ.

ಇದನ್ನು ಓದಿ : ನಿಜವಾಗಿಯೂ ಧನಲಕ್ಷ್ಮಿ ಒಲಿಯಬೇಕಾದರೆ ನೀವು ಹೀಗೆ ಮಾಡಿ , ಬದುಕಿನಲ್ಲಿ ಬದಲಾವಣೆ ಕಂಡಿತಾ

ಶನಿವಾರ :

ಶನಿವಾರದಂದು ಜನಿಸಿದ ಗಂಡು ಮಗು ಕಿಲಾಡಿ ಆಗಿರುತ್ತಾನೆ ಹಾಗೂ ಯಾರ ಮಾತನ್ನು ಕೇಳುವುದಿಲ್ಲ ಕಿಮ್ಮತ್ತು ಕೊಡುವುದಿಲ್ಲ ಅಲ್ಲದೆ ಸ್ವಲ್ಪ ವಿರೋಧಿಯಾಗಿ ತಂದೆ-ತಾಯಿಗೆ ಬದುಕುತ್ತಾರೆ ಇವರ ಜೀವನದಲ್ಲಿ ಹೆಚ್ಚಾಗಿ ಅಡೆತಡೆಗಳು ಬರುತ್ತವೆ. ಹೆಣ್ಣು ಮಗು ಏನಾದರೂ ಶನಿವಾರ ಹುಟ್ಟಿದರೆ ನಿಷ್ಟೂರವಾದಿಗಳಾಗಿರುತ್ತಾರೆ. ಅಲ್ಲದೆ ಅವಳು ಯಾವುದೇ ಅಳುಕು ಇಲ್ಲದೆ ಸರಿ ತಪ್ಪು ಎನ್ನುವುದನ್ನು ನೇರವಾಗಿ ಹೇಳುತ್ತಾಳೆ.

ಹೀಗೆ ಯಾವ ದಿನದಂದು ಹೆಣ್ಣು ಮಗು ಹುಟ್ಟಿದರೆ ಏನೆಲ್ಲಾ ಆಗಬಹುದು ಹಾಗೂ ಗಂಡು ಮಗು ಹುಟ್ಟಿದರೆ ಏನು ಆಗಬಹುದು ಎಂಬ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಿದ್ದು ನೀವು ಯಾವ ದಿನದಂದು ಹುಟ್ಟಿದ್ದೀರಿ ಎಂಬುದನ್ನು ತಿಳಿದುಕೊಂಡು ಈ ರೀತಿಯ ಗುಣಗಳು ನಿಮ್ಮಲ್ಲಿದೆಯೇ ಎಂಬುದನ್ನು ನೋಡಿಕೊಳ್ಳಿ ಹಾಗೂ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಹಾವಿನ ಪೊರೆ ಮನೆಯಲ್ಲಿಟ್ಟುಕೊಂಡರೆ ಪ್ರಯೋಜನವಾಗುತ್ತದೆ .! ಅಚ್ಚರಿ ಆದರೂ ಸತ್ಯ

ನಿಮ್ಮ ಜಮೀನಿನ ಪಹಣಿ ಸಮಸ್ಯೆ ಇದ್ದರೆ ಶಾಶ್ವತ ಪರಿಹಾರ ಇಲ್ಲಿದೆ

Treading

Load More...