News

PUC ಪಾಸಾದವರಿಗೆ ಉದ್ಯೋಗಾವಕಾಶ : ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

Job opportunities for PUC passers in Gram Panchayat

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಕೇವಲ 12ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳಬಹುದಾಗಿದೆ. ವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಗಾಗಿ ರಾಜ್ಯ ಸರ್ಕಾರವು ಆದಿಶೋಧನೆಯನ್ನು ಪ್ರಕಟಿಸಿದ್ದು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದರಂತೆ ಈ ಹುದ್ದೆಗಳಿಗೆ ನಿಗದಿಪಡಿಸಿರುವ ದಿನಾಂಕ ಹಾಗೂ ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀವ ನೀವು ತಿಳಿದುಕೊಳ್ಳಬಹುದು.

Job opportunities for PUC passers in Gram Panchayat
Job opportunities for PUC passers in Gram Panchayat

ವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ಹುದ್ದೆಗಳ ನೇಮಕಾತಿ :

ವಿಜಯನಗರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 22 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತಿದೆ. ಹುದ್ದೆಯ ಹೆಸರು ಗ್ರಂಥಾಲಯ ಮೇಲ್ವಿಚಾರಕ ಹುದ್ದೆಯಾಗಿದ್ದು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಹುದ್ದೆಯನ್ನು ಪಡೆದುಕೊಳ್ಳಬಹುದಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ :

ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ ಹನ್ನೆರಡನೇ ತರಗತಿ ಹಾಗೂ ಸರ್ಟಿಫಿಕೇಟ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಅನ್ನು ವಿಜಯನಗರ ಗ್ರಾಮ ಪಂಚಾಯಿತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಪೂರ್ಣಗೊಳಿಸಿರಬೇಕಾಗುತ್ತದೆ.

ವಯಸ್ಸಿನ ಮಿತಿ :


ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷಗಳನ್ನು ವಿಜಯನಗರ ಗ್ರಾಮ ಪಂಚಾಯಿತಿ ಅಧಿಸೂಚನೆಯ ಪ್ರಕಾರ ನಿಗದಿಪಡಿಸಲಾಗಿದೆ. ಅಲ್ಲದೆ ಮೂರು ವರ್ಷ ಕೆಟಗರಿ ಟು ಎ ,ಟು ಬಿ, ತ್ರೀ ಎ, 3 ಬಿ ಅಭ್ಯರ್ಥಿಗಳಿಗೆ ಹಾಗೂ ಐದು ವರ್ಷ ಎಸ್ ಸಿ, ಎಸ್ ಟಿ ಕೆಟಗರಿ ವನ್ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಮಾಡಲಾಗಿದೆ.

ಇದನ್ನು ಓದಿ : Amazon ವತಿಯಿಂದ ವಿದ್ಯಾರ್ಥಿ ವೇತನ : ಸುಮಾರು 50 ಸಾವಿರ ರೂಪಾಯಿ ಸಿಗುತ್ತೆ

ಅರ್ಜಿ ಸಲ್ಲಿಸುವ ವಿಧಾನ :

ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ನಿಗದಿತ ಅರ್ಜಿ ನಮೂನೆಯ ಮೂಲಕ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಅರ್ಜಿದಾರರು ಮೆಂಬರ್ ಸೆಕ್ರೆಟರಿ, ಸೆಲೆಕ್ಷನ್ ಕಮಿಟಿ ಅಂಡ್ ಡೆಪ್ಯೂಟಿ ಸೆಕ್ರೆಟರಿಸ್, ಜಿಲ್ಲಾ ಪಂಚಾಯತ್ ವಿಜಯನಗರ, ಕಲೆಕ್ಟರ್ ಆಫೀಸ್ ಬಿಲ್ಡಿಂಗ್, ಟಿಬಿ ಡ್ಯಾಮ್ ರೋಡ್, ಹೊಸ್ಪೇಟೆ 583225 ಇವರಿಗೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

ಪ್ರಮುಖ ದಿನಾಂಕಗಳು :

ವಿಜಯನಗರ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಅರ್ಜಿಯನ್ನು ಸಲ್ಲಿಸಲು ಆರಂಭ ದಿನಾಂಕ 18-12-2023 ಹಾಗೂ ಅರ್ಜಿ ಯನ್ನು ಸಲ್ಲಿಸಲು ಕೊನೆಯ ದಿನಾಂಕ 08-01-2024 ಇದಾಗಿರುತ್ತದೆ ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸುವುದು ಮುಖ್ಯವಾಗಿರುತ್ತದೆ.

ಹೀಗೆ ಕೇವಲ 12ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳು ವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಸರ್ಕಾರಿ ಹುದ್ದೆಯನ್ನು ಪಡೆಯಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಯಾರಾದರೂ ಸರ್ಕಾರಿ ಹುದ್ದೆಗೆ ನಿರೀಕ್ಷಿಸುತ್ತಿದ್ದಾರೆ ಅವರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಹುದ್ದೆ ಖಾಲಿ ಇವೆ ಎಂಬುದರ ಬಗ್ಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...