ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ, ಕಾರ್ಮಿಕರ ಲೇಬರ್ ಕಾರ್ಡ್ ಬಗ್ಗೆ. ಕಾರ್ಮಿಕರಿಗಾಗಿಯೇ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ರಾಜ್ಯದಲ್ಲಿ ಗುರುತಿನ ಚೀಟಿಯನ್ನು ನೀಡಲಾಗುತ್ತಿದ್ದು ಈ ಕಾರ್ಮಿಕ ಗುರುತಿನ ಕಾರ್ಡ್ ಮೂಲಕ ಕಾರ್ಮಿಕರು ಹಲವಾರು ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಸರ್ಕಾರದಿಂದ ಕಾರ್ಮಿಕರ ಗುರುತಿನ ಚೀಟಿಯೇ ಅಡಿಯಲ್ಲಿ ಬರುವ ಎಲ್ಲಾ ಕಾರ್ಮಿಕರು ಹಲವು ರೀತಿಯ ಸಹಾಯಧನವನ್ನು ಪಡೆಯಬಹುದಾಗಿದ್ದು ಕಾರ್ಮಿಕರನ್ನು ಅವಲಂಬಿಸಿರುವವರು ಕೂಡ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ವ್ಯವಸ್ಥೆಯನ್ನು ಕಾರ್ಮಿಕರ ಅಭಿವೃದ್ಧಿಯ ಉದ್ದೇಶದಿಂದ ಜಾರಿಗೆ ತಂದಿದ್ದು ನಕಲಿ ಕಾರ್ಮಿಕರು ಸರ್ಕಾರಕ್ಕೆ ಇದರಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ಮಾಹಿತಿಯು ಸರ್ಕಾರಕ್ಕೆ ತಿಳಿದುಬಂದಿದೆ.
90 ಸಾವಿರ ನಕಲಿ ಕಾರ್ಮಿಕ ಕಾರ್ಡುಗಳು :
ಅನರ್ಹರು ಕೂಡ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪಡೆಯಲು ಮೋಸದಿಂದ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡಿರುವುದು ತಿಳಿದಿದ್ದು ಕಾರ್ಮಿಕ ಕಲ್ಯಾಣ ಇಲಾಖೆಯಿಂದ ನೀಡಲಾಗುತ್ತಿರುವ ಈ ಕಾರ್ಮಿಕ ಕಾರಣದಲ್ಲಿ ಭಾರಿ ಮೋಸ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ತಿಳಿದುಬಂದಿದೆ. ಸುಮಾರು 90 ಸಾವಿರ ನಕಲಿ ಕಾರ್ಮಿಕ ಕಾರ್ಡುಗಳನ್ನು ರಾಜ್ಯದಲ್ಲಿ ಪತ್ತೆಹಚ್ಚಲಾಗಿದೆ.
ಸರ್ಕಾರದಿಂದ ಕಠಿಣ ಕ್ರಮ :
ಸರ್ಕಾರವು ನಕಲಿ ಕಾರ್ಮಿಕ ಕಾರ್ಡ್ ಹೊಂದಿರುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುತ್ತಿದೆ. 32,77359 ಕಾರ್ಮಿಕ ಕಾರ್ಡುಗಳು ಮೂರು ವರ್ಷಗಳ ನೋಂದಣಿ ಪ್ರಕ್ರಿಯೆಯಲ್ಲಿ ನೊಂದಣಿಯಾಗಿದ್ದು ಅದರಲ್ಲಿ 90091 ಕಾರ್ಡ್ ಗಳು ನಕಲಿ ಎಂದು ಪತ್ತೆ ಮಾಡಲಾಗಿದೆ. ಹೀಗೆ ಅರ್ಹತಾ ಮಾನದಂಡಗಳನ್ನು ಪೂರೈಸದ ಕಾರ್ಮಿಕರು ನೋಂದಣಿಯನ್ನು ಮಾಡಿಸಿಕೊಂಡಿದ್ದು ಅಂತವರ ವಿರುದ್ಧ ಸರ್ಕಾರವು ಕ್ರಮ ಕೈಗೊಂಡಿದ್ದು ನೋಂದಣಿ ರದ್ದುಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹೀಗೆ ಕಾರ್ಮಿಕ ಕಾರ್ಡ್ ಅನ್ನು ಅರ್ಹ ಕಾರ್ಮಿಕರು ಪಡೆಯದೆ ಅನರ್ಹರು ಕೂಡ ಈ ಕಾರ್ಮಿಕ ಕಾರ್ಡ್ಗಳನ್ನು ಪಡೆದಿದ್ದು ಇಂಥವರ ವಿರುದ್ಧ ಸರ್ಕಾರವು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂಬುದರ ಎಚ್ಚರಿಕೆಯನ್ನು ಕಾರ್ಮಿಕ ಇಲಾಖೆಯು ಅರ್ಹರ ವಿರುದ್ಧ ತಿಳಿಸಿದ್ದು ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಕಾರ್ಮಿಕ ಕಾರ್ಡ್ ಅನ್ನು ಅಕ್ರಮವಾಗಿ ಪಡೆದುಕೊಂಡಿದ್ದರೆ ಸರ್ಕಾರವು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಬಹುದಾಗಿದೆ : ತಿದ್ದುಪಡಿ ಅವಕಾಶ ನೀಡಲಾಗಿದೆ
- ಕರ್ನಾಟಕದಲ್ಲಿ ಕೋವಿಡ್ ಟೆಸ್ಟ್ ಇಂತಹ ಜನರಿಗೆ ಕಡ್ಡಾಯ : ಸರ್ಕಾರದಿಂದ ಹೊಸ ಆದೇಶ