News

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ : ಯಾವ ದಿನಾಂಕದಂದು ನಡಿಯಲಿದೆ ಗೊತ್ತಾ?

Lakh Dipotsava at Dharamsthala

ನಮಸ್ಕಾರ ಸ್ನೇಹಿತರೆ ಪ್ರತಿ ವರ್ಷದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮ ಈ ವರ್ಷವೂ ಸಹ ಡಿಸೆಂಬರ್ 8 ರಿಂದ 12 ವರೆಗೆ ನಡೆಯಲಿದೆ. ರಾಜ್ಯ ಸೇರಿ ಹಲವು ಕಡೆಗಳಿಂದ ಭಕ್ತರು ಹಾಗೂ ಪ್ರವಾಸಿಗರು ಈ ಕಾರ್ಯಕ್ರಮಕ್ಕೆ ಬರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವಿಶೇಷ ಬಸ್ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ವತಿಯಿಂದ ಮಾಡಲಾಗಿದೆ. ಹಾಗಾದರೆ ಯಾವ ಯಾವ ಜಿಲ್ಲೆಗಳಿಂದ ಬಸ್ ಬಿಡಲಾಗಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

Lakh Dipotsava at Dharamsthala
Lakh Dipotsava at Dharamsthala

ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ :

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವಕ್ಕೆ ರಾಜ್ಯ ಸರ್ಕಾರವು ವಿಶೇಷ ಬಸ್ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ವತಿಯಿಂದ ಮಾಡಿದೆ. ಪ್ರಮುಖವಾಗಿ ಹುಬ್ಬಳ್ಳಿ ಬೆಂಗಳೂರು ಶಿವಮೊಗ್ಗ ದಾವಣಗೆರೆ, ಮಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಿಶೇಷ ಬಸ್ ವ್ಯವಸ್ಥೆಯನ್ನು ಧರ್ಮಸ್ಥಳಕ್ಕೆ ಕಲ್ಪಿಸಲಾಗಿದೆ ಹೀಗಾಗಿ ಕೆಎಸ್ಆರ್ಟಿಸಿ ಅಗತ್ಯ ಸಿದ್ಧತೆಯನ್ನು ಹೆಚ್ಚುವರಿ ಬಸ್ ಬಿಡಲು ಮಾಡಿಕೊಂಡಿದೆ.

ವೈವಿಧ್ಯ ಕಾರ್ಯಕ್ರಮಗಳು :

ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಹೈಸ್ಕೂಲ್ ವಠಾರದಲ್ಲಿ ಡಿಸೆಂಬರ್ 8 ರಂದು ಬೆಳಗ್ಗೆ 10.30 ಕ್ಕೆ ರಾಜ್ಯಮಟ್ಟದ ವಸ್ತು ಪ್ರದರ್ಶನ ನಡೆಸಲಿದೆ. ಅಮೃತವರ್ಷಿಣಿ ಸಭಾಭವನದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಡಿಸೆಂಬರ್ 10ರಂದು ರಾತ್ರಿ 7 ರಿಂದ 10ರವರೆಗೆ ಗಾನ ನೃತ್ಯ ವೈವಿಧ್ಯಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನವನ್ನು ಡಿಸೆಂಬರ್ 11ರಂದು ಸಂಜೆ 5:00 ಗಂಟೆಗೆ ಖ್ಯಾತ ವಿದ್ವಾಂಸ ಬೆಂಗಳೂರಿನ ಡಾಕ್ಟರ್ ಗುರುರಾಜ ಕರ್ಜಗಿ ಉದ್ಘಾಟಸಲಿದ್ದಾರೆ. ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನವನ್ನು ಡಿಸೆಂಬರ್ 12ರಂದು ಸಂಜೆ 5:00 ಗಂಟೆಗೆ ಇಸ್ರೋ ಅಧ್ಯಕ್ಷರಾದ ಡಾಕ್ಟರ್ ಎಸ್ ಸೋಮನಾಥ್ ಉದ್ಘಾಟಿಸಲಿದ್ದು ಇದರ ಅಧ್ಯಕ್ಷತೆಯನ್ನು ಬೆಂಗಳೂರಿನ ಖ್ಯಾತ ಗಾಯಕಿ ಡಾಕ್ಟರ್ ಏ ವಿ ಪ್ರಸನ್ನ ವಹಿಸಲಿದ್ದಾರೆ.

ಇದನು ಓದಿ : ಲಕ್ಷಾಂತರ ರೈಲ್ವೆ ಪ್ರಯಾಣಿಕರಿಗೆ :ಉಚಿತ ಆಹಾರ, ಹೊಸ ನಿಯಮ

ಅದರಂತೆ ಹೊಸ ಕಟ್ಟೆ ಉತ್ಸವ ಡಿಸೆಂಬರ್ 8ರಂದು ನಡೆದರೆ ಕೆರೆಕಟ್ಟೆ ಉತ್ಸವ ಡಿಸೆಂಬರ್ 9ರಂದು ನಡೆಯಲಿದ್ದು ಲಲಿತೋದ್ಯಾಯನ ಉತ್ಸವ ಡಿಸೆಂಬರ್ ಹತ್ತರಂದು ಕಂಚಿ ಮಾರುಕಟ್ಟೆ ಉತ್ಸವ ಡಿಸೆಂಬರ್ 11ರಂದು ಹಾಗೂ ಗೌರಿ ಮಾರುಕಟ್ಟೆ ಉತ್ಸವವನ್ನು ಡಿಸೆಂಬರ್ 12ರಂದು ಹಮ್ಮಿಕೊಳ್ಳಲಾಗಿದೆ. ಅಂದರೆ ಲಕ್ಷದೀಪೋತ್ಸವ ರಾತ್ರಿ 12 ಗಂಟೆಗೆ ಕೊನೆಯಲ್ಲಿ ನಡೆಯಲಿದೆ. ಅಲ್ಲದೆ ಡಿಸೆಂಬರ್ 13ರಂದು ಸಂಜೆ ಏಳರಿಂದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಆವರಣದಲ್ಲಿ ಸಮವಸ್ತ್ರ ಪೂಜೆ ನಡೆಯಲಿದೆ ಎಂದು ತಿಳಿಸಲಾಗಿದೆ.


ಹೀಗೆ ಧರ್ಮಸ್ಥಳದಲ್ಲಿ ಡಿಸೆಂಬರ್ 8 ರಿಂದ ಡಿಸೆಂಬರ್ 12ರ ವರೆಗೆ ಲಕ್ಷದೀಪೋತ್ಸವ ನಡೆಯಲಿದ್ದು ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಯಿಂದ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆಯನ್ನು ಹೆಚ್ಚುವರಿಯಾಗಿ ಮಾಡಲಾಗಿದ್ದು ಡಿಸೆಂಬರ್ 8 ರಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಭಕ್ತಾದಿಗಳು ಭಾಗವಹಿಸಿ ಶ್ರೀ ಧರ್ಮಸ್ಥಳ ಮಂಜುನಾಥನ ಕೃಪೆಗೆ ಪಾತ್ರರಾಗಬೇಕೆಂದು ಈ ಮಾಹಿತಿಯ ಮೂಲಕ ತಿಳಿಸುತ್ತೇವೆ. ಹಾಗೂ ನಿಮ್ಮ ಸ್ನೇಹಿತರು ಯಾರಾದರೂ ಧರ್ಮಸ್ಥಳಕ್ಕೆ ಹೋಗಲು ಯೋಚಿಸುತ್ತಿದ್ದರೆ ಅವರಿಗೆ ಈ ದಿನವೂ ಹೆಚ್ಚು ಸೂಕ್ತವಾಗಿದೆ ಎಂಬುದರ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗ್ರಾಹಕರ ಜೇಬಿಗೆ ಕತ್ತರಿ :5ನಿಯಮಗಳು ಡಿಸೆಂಬರ್ 1ರಿಂದ ಬದಲಾಗಲಿದೆ

ಕ್ರೆಡಿಟ್ ಕಾರ್ಡ್ ಬಳಸುವವರಿಗೆ EMI ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ

Treading

Load More...