ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಟಿ ಸುತ್ತಿರುವ ವಿಷಯ ಏನೆಂದರೆ ಸ್ಟೇಟ್ ಬ್ಯಾಂಕ್ ಯಾವಾಗಲೂ ತನ್ನ ಗ್ರಾಹಕರಿಗೆ ಖಾತೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ನವೀಕರಿಸಲು ಯಾರಿಗೂ ಕೂಡ ಬ್ಯಾಂಕ್ ಸಲಹೆ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡುತ್ತದೆ. ನೀವೇನಾದರೂ sbi ನಲ್ಲಿ ಅಕೌಂಟ್ ಹೊಂದಿದ್ದರೆ ಈ ಮಾಹಿತಿ ನಿಮಗೆ ಸಾಕಷ್ಟು ಉಪಯೋಗವಾಗಲಿದೆ.
ಪಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು :
ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಂದೇಶವೊಂದು ವೈರಲ್ ಆಗುತ್ತಿತ್ತು ಅದೇನೆಂದರೆ ಸ್ಟೇಟ್ ಬ್ಯಾಂಕ್ ನಲ್ಲಿ ಇರುವಂತಹ ಖಾತೆಯನ್ನು ಪಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡದೆ ಇದ್ದರೆ ಆ ಖಾತೆಯನ್ನು ನಿರ್ಬಂಧಿಸಲಾಗುತ್ತದೆ ಎಂಬ ಸಂದೇಶವನ್ನು ವೈರಲಾಗುತ್ತಿದೆ. ಈ ಸಂದೇಶವು ಸತ್ಯ ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ ಅದಕ್ಕೆ ಸಂಬಂಧಿಸಿದಂತೆ ಪಿಐಬಿ ಸ್ಪಷ್ಟನೆ ನೀಡಿದೆ.
ಪಿಐಬಿ ಫ್ಯಾಕ್ಟ್ ಚೆಕ್ :
ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿರುವ ಈ ಸುದ್ದಿಯ ಬಗ್ಗೆ ಪಿ ಐ ಬಿ ಫ್ಯಾಕ್ಸ್ ಚೆಕ್ ಸ್ಪಷ್ಟನೆ ನೀಡಿದ್ದು ತನ್ನ ಅಧಿಕೃತ ಟ್ವಿಟರ್ ನಲ್ಲಿ ಪತ್ರಿಕಾ ಮಾಹಿತಿ ಬ್ಯೂರೋ ಈ ಕುರಿತು ಟ್ವೀಟ್ ಮಾಡಿದೆ. ಸ್ಟೇಟ್ ಬ್ಯಾಂಕ್ ಹೆಸರಿನಲ್ಲಿ ಕಳೆದ ಕೆಲವು ದಿನಗಳಿಂದ ವಂಚಕರು ನಿಮ್ಮ ಖಾತೆಯಲ್ಲಿ ಪಾನ್ ಕಾರ್ಡ್ ಸಂಖ್ಯೆಯನ್ನು ನವೀಕರಿಸಬೇಕೆಂಬ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಇಲ್ಲದಿದ್ದರೆ ಆ ಖಾತೆಯನ್ನು ನಿರ್ಬಂಧಿಸಲಾಗುತ್ತದೆ ಎಂಬ ಸಂದೇಶ ರವಾನಿ ಯಾಗುತ್ತಿದ್ದು ಮಾಹಿತಿಯನ್ನು ಯಾವುದೇ ಲಿಂಕ್ ಮೂಲಕ ನವೀಕರಿಸಲು ಸಂದೇಶ ಕಳುಹಿಸಲಾಗುತ್ತದೆ. ಅದರಂತೆ ಈ ಸಂದೇಶವು ಸಂಪೂರ್ಣವಾಗಿ ನಕಲಿ ಎಂಬುದು ಸ್ಪಷ್ಟವಾಗಿ ತಿಳಿದಿದೆ.
ಇದನ್ನು ಓದಿ : ಪ್ರತಿ ರೈತರಿಗೆ ರಾಜ್ಯ ಸರ್ಕಾರದಿಂದ ಉಚಿತ ಜಮೀನು ಸಿಗಲಿದೆ : ಈ ಕೂಡಲೇ ಅರ್ಜಿ ಸಲ್ಲಿಸಿ
ಹೆಚ್ಚಿನ ಮಾಹಿತಿಗಾಗಿ :
ಯಾವುದೇ ಲಿಂಕ್ ಅನ್ನು ಪಾನ್ ಕಾರ್ಡ್ ವಿವರಗಳನ್ನು ನವೀಕರಿಸಲು ಬ್ಯಾಂಕ್ ಕಳುಹಿಸುವುದಿಲ್ಲ ಹಾಗೆ ಏನಾದರೂ ನೀವೇನಾದರೂ ಬಲಿಯಾಗಿದ್ದರೆ ಸೈಬರ್ ಕ್ರೈಂ ಸೆಲ್ ಸಂಖ್ಯೆಯಾದ 1930 ದೂರು ಸಲ್ಲಿಸಬಹುದಾ ಅಥವಾ ಇ-ಮೇಲ್ ಮೂಲಕವೂ ಕೂಡ ವರದಿ ಮಾಡಬಹುದಾಗಿದೆ.phishing@sbi ಈ ಇಮೇಲ್ ಐಡಿಗೆ ವರದಿ ಮಾಡಬಹುದು.
ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿರುವ ಈ ಸಂದೇಶವು ಸಂಪೂರ್ಣವಾಗಿ ತಪ್ಪು ಸಂದೇಶ ಎಂದು ಹೇಳಲಾಗುತ್ತಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ 1ಲಕ್ಷ ಪಡೆಯಬಹುದು : ಈ ಒಂದು ದಾಖಲೆ ಇದ್ದರೆ ಸಾಕು
- ಬರೀ ₹1500 ಹಾಕಿದ್ರೆ 35 ಲಕ್ಷ ಸಿಗುತ್ತೆ, ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಗೆ ಜನರ ದಂಡು