ನಮಸ್ಕಾರ ಸ್ನೇಹಿತರೆ ಹಲವಾರು ಯೋಜನೆಗಳನ್ನು ಮಹಿಳೆಯರಿಗಾಗಿಯೇ ಸರ್ಕಾರವು ಜಾರಿಗೆ ತಂದಿದೆ. ಪ್ರತಿಯೊಬ್ಬ ಮಹಿಳೆಯು ಸಹ ಸರ್ಕಾರದ ಈ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು ಪೋಸ್ಟ್ ಆಫೀಸ್ನಲ್ಲಿ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರವು ಪ್ರಾರಂಭಿಸಿದೆ. ಈ ಯೋಜನೆಯ ಲಾಭವನ್ನು ಪ್ರತಿಯೊಂದು ಕುಟುಂಬದ ಮಹಿಳೆಯರು ಪಡೆಯಬಹುದಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ :
ಭಾರತ ಸರ್ಕಾರವು ಮಹಿಳೆಯರನ್ನು ಉಳಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಮಹಿಳಾ ಸನ್ಮಾನ ಹೊಡಿತಾಯ ಪ್ರಮಾಣ ಪತ್ರ ಯೋಜನೆಯನ್ನು ಜಾರಿಗೆ ತಂದಿದೆ. ಗರಿಷ್ಠ 2 ಲಕ್ಷ ರೂಪಾಯಿಗಳವರೆಗೆ ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆಯ ಅಡಿಯಲ್ಲಿ ಠೇವಣಿ ಇಳಿಸಬಹುದಾಗಿತ್ತು 7.5ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಎರಡು ವರ್ಷಗಳ ನಂತರ ಈ ಯೋಜನೆಯು ಪಕ್ವವಾಗುತ್ತದೆ ಅಂದರೆ ಎರಡು ಲಕ್ಷ ರೂಪಾಯಿಗಳನ್ನು ಅದರಲ್ಲಿ ನೀವು ಠೇವಣಿ ಮಾಡಿದರೆ ಬಡ್ಡಿಯೊಂದಿಗೆ ಎರಡು ವರ್ಷಗಳ ನಂತರ ಆ ಹಣವನ್ನು ಪಡೆಯಬಹುದು.
ಭಾಗಶಹ ಒಂದು ವರ್ಷದ ನಂತರ ಹಿಂಪಡೆಯುವಬಹುದು :
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯಲ್ಲಿ ನಿಯಮಗಳ ಪ್ರಕಾರ ನೀವು ಒಂದು ವರ್ಷ ಪೂರ್ಣಗೊಂಡ ನಂತರ ಭಾಗಶಃ ಹಿಂಪಡೆಯಲು ಅನುಮತಿಯನ್ನು ನೀಡಲಾಗಿದ್ದು ನೀವು ಠೇವಣಿ ಮಾಡಿದ ಹಣದಲ್ಲಿ ಅಂತ ಪರಿಸ್ಥಿತಿಯಲ್ಲಿ 40% ಅವರಿಗೆ ಹಣವನ್ನು ಹಿಂಪಡೆಯಬಹುದಾಗಿದೆ. ಅಂದರೆ ನೀವು ಎರಡು ಲಕ್ಷ ರೂಪಾಯಿಗಳವರೆಗೆ ಠೇವಣಿ ಇಟ್ಟರೆ 80,000ಗಳನ್ನು ಒಂದು ವರ್ಷದ ನಂತರ ಪಡೆಯಬಹುದು.
ನಿಯಮಗಳು :
ಈ ಯೋಜನೆಗೆ ಸಂಬಂಧಿಸಿದಂತೆ ಅಕಾಲಿಕಾ ಮುಚ್ಚುವಿಕೆಯ ನಿಯಮಗಳಿದ್ದು ಅವುಗಳೆಂದರೆ, ಫಲಾನುಭವಿ ಮರಣದ ಮೇಲೆ ಪಡೆಯಬಹುದಾಗಿದೆ ಹಾಗೂ ಗಂಭೀರ ಅನಾರೋಗ್ಯದ ಸಂದರ್ಭದಲ್ಲಿ ಪೋಷಕರ ಸಾವು ಹೀಗೆ ಕೆಲವೊಂದು ಸಂದರ್ಭಗಳಲ್ಲಿ ಸಂಬಂಧಿತ ದಾಖಲೆಗಳನ್ನು ಒದಗಿಸುವುದರ ಜೊತೆಗೆ ಆ ಕಾಲಿಕ ಮುಚ್ಚಿವಿಕೆಯನ್ನು ಮಾಡಬಹುದಾಗಿದೆ. ಅಂತ ಪರಿಸ್ಥಿತಿಯಲ್ಲಿ ಎರಡು ಪರ್ಸೆಂಟ್ ಅಷ್ಟು ಬಡ್ಡಿದರ ಕಡಿಮೆಯಾಗುತ್ತದೆ ಅಂದರೆ ಶೇಕಡ 5.5ರ ದರದಲ್ಲಿ ನೀವು ಬಡ್ಡಿಯನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ರೇಷನ್ ಕಾರ್ಡ್ ಇರುವವರಿಗೂ ಹಾಗು ಪಡೆಯುವರಿಗೂ ಹೊಸ ಸೂಚನೆ
ಯಾರೆಲ್ಲ ಖಾತೆ ತೆಗೆಯಬಹುದು :
ಮಹಿಳೆಯರಿಗೆ ಹೆಚ್ಚಿನ ಬಡ್ಡಿಯನ್ನು ನೀಡುವ ಮೂಲಕ ತಮ್ಮ ಆರ್ಥಿಕತೆಯನ್ನು ಹೆಚ್ಚಿಸುವಲು ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದ್ದು ಇದರಲ್ಲಿ ಯಾವುದೇ ವಯಸ್ಸಿನ ಮಹಿಳೆಯರು ಕೂಡ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಅಪ್ರಾಪ್ತ ಬಾಲಕಿಯ ಪೋಷಕರು ಅವಳ ಹೆಸರಿನಲ್ಲಿ ಹೂಡಿಕೆ ಮಾಡಬಹುದು ಪ್ರಸ್ತುತ 7.5 ಬಡ್ಡಿಯನ್ನು ಪಡೆಯಬಹುದಾಗಿದೆ.
ಹೀಗೇಕೆ ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ಮಹಿಳೆಯರಿಗಾಗಿಯೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ಜಾರಿಗೆ ತಂದಿದ್ದು ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲ ಮಹಿಳೆ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಪೋಸ್ಟ್ ಆಫೀಸ್ನಲ್ಲಿ ಮಹಿಳೆಯರಿಗಾಗಿ ಒಂದು ಖಾತೆಯನ್ನು ತೆರೆಯಬಹುದು ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಮೈಕ್ರೋ ಕ್ರೆಡಿಟ್ ಯೋಜನೆ : 2.5 ಲಕ್ಷ ಸಹಾಯಧನ ಸರ್ಕಾರದಿಂದ ಅಕೌಂಟ್ ಗೆ ನೇರವಾಗಿ ಹಣ
ಎಲ್ಲಾ ರೈತರಿಗೆ 3000 ಹಣ ನೀಡಲಾಗುತ್ತೆ : ಅರ್ಜಿ ಸಲ್ಲಿಸಲು ಕೇವಲ 10 ದಿನ ಮಾತ್ರ ಬಾಕಿ ಇದೆ