News

ರೈತರಿಗೆ ಹಾಲಿನ ಪ್ರೋತ್ಸಾಹ ಧನ ಹೆಚ್ಚಳ ಮಾಡಲಾಗಿದೆ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಿ

Milk incentive for farmers has been increased

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ರೈತರ ಹಾಲಿನ ಪ್ರೋತ್ಸಾಹ ಧನ ಹೆಚ್ಚಿದ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.

Milk incentive for farmers has been increased
Milk incentive for farmers has been increased

ಪ್ರೋತ್ಸಾಹ ಧನದ ಮೊತ್ತ ಎಷ್ಟು :

ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಐದು ರೂಪಾಯಿ ಪ್ರೋತ್ಸಾಹ ಧನವನ್ನು 25 ಲಕ್ಷ ಹೈನುಗಾರಿಕೆ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಪ್ರೋತ್ಸಾಹ ಧನ ಎರಡು ರೂಪಾಯಿಯನ್ನು ಹೆಚ್ಚಿಸಲಾಗುವುದು ಎಂದು ಕರ್ನಾಟಕ ರಾಜ್ಯದ ಪಶು ಸಂಗೋಪನ ಸಚಿವರು ತಿಳಿಸಿದ್ದಾರೆ. ಸಚಿವರಾದ ವೆಂಕಟೇಶ್ ರವರು ಬೆಳಗಾವಿ ಯಲ್ಲಿ ನಡೆಯುತ್ತಿದ್ದಂತಹ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

ಕೆಎಂಎಫ್ ಅಧ್ಯಕ್ಷರು ಭೀಮ ನಾಯಕ್ :

ಈಗ ರೈತರಿಗೆ ಐದು ರೂಪಾಯಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ .ಇನ್ನು ಎರಡು ರೂಪಾಯಿ ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಇದೆ ಎಂದು ಕೆಎಂಎಫ್ ಭೀಮ ನಾಯಕ್ ರವರು ತಿಳಿಸಿದರು.

ಒಟ್ಟಾರೆ ಎಷ್ಟು ಹಣ ಸಿಗಲಿದೆ :

ಕರ್ನಾಟಕ ರಾಜ್ಯದಿಂದ ಸರ್ಕಾರವು ಪ್ರೋತ್ಸಾಹ ಧನವನ್ನು ಮೊದಲು ಐದು ರೂಪಾಯಿ ನೀಡುತ್ತಿತ್ತು .ಈಗ ಇನ್ನೂ ಎರಡು ರೂಪಾಯಿ ಹೆಚ್ಚಿಗೆ ಸೇರಿಸಿದರೆ .ಒಟ್ಟು ಏಳು ರೂಪಾಯಿ ಪ್ರೋತ್ಸಾಹ ಧನ ಕರ್ನಾಟಕ ರಾಜ್ಯ ಸರ್ಕಾರದಿಂದ ಸಿಗಲಿದೆ.

ಈ ವಿಷಯ ನಿಮಗೆ ತಿಳಿದಿರಲಿ :


ಈ ಪ್ರೋತ್ಸಾಹ ಧನ 10 ವರ್ಷದಿಂದ ಏರಿಕೆಯಾಗದೆ ಇದೆ 2008ರಲ್ಲಿ ಯಡಿಯೂರಪ್ಪನವರು ಪ್ರತಿ ಲೀಟರ್ಗೆ ಎರಡು ರೂಪಾಯಿ ಪ್ರೋತ್ಸಾಹ ಧನವನ್ನು ನೀಡಿದ್ದರು. ವಿಶೇಷ ಕೊಡುಗೆಗಾಗಿ ಆನಂತರ 2013ರಲ್ಲಿ ಸಿದ್ದರಾಮಯ್ಯನವರು ಎರಡು ರೂಪಾಯಿಯಿಂದ ೪ಕ್ಕೂ ರೂಪಾಯಿಗೆ ಏರಿಕೆ ಮಾಡಿದ್ದರು. ಅಲ್ಲಿಗೆ ಪ್ರಸ್ತುತ ಲೀಟರ್ಗೆ ಐದು ರೂಪಾಯಿ ಪ್ರೋತ್ಸಾಹ ಧನ ಇರುತ್ತಿತ್ತು. ರಾಜ್ಯದಲ್ಲಿ 15 ಹಾಲು ಒಕ್ಕೂಟಗಳಿವೆ 25,000ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಂಘಗಳು ಇವೆ. ಈ ಸಂಘಗಳಿಗೆ ಹಾಲು ನೀಡುವ ರೈತರಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು.

ಇದನ್ನು ಓದಿ : ಆಯುಷ್ಮಾನ್ ಕಾರ್ಡ್ ಬಳಸಿ ಈ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಿರಿ

ಹಾಗಾದರೆ ಈ ಪ್ರೋತ್ಸಾಹ ಧನ ಹೆಚ್ಚಳ ಯಾವಾಗ.?

ಖಾಸಗಿ ಕರಿದಿ ದಾರರಿಗೆ ಹೋಲಿಸಿದರೆ ಕೆಎಂಎಫ್ ದರ ಅತಿ ಕಡಿಮೆ ಇದೆ ಎಂಬ ಆಪಾದನೆ ಇದೆ ಸದ್ಯ ಹಾಲು ಉತ್ಪಾದಕರಿಗೆ ಮೈಸೂರು ಒಕ್ಕೂಟವು ಅತಿ ಹೆಚ್ಚು ಅಂದರೆ 36.40 ನಿಗದಿಪಡಿಸಿರುತ್ತದೆ. ದಕ್ಷಿಣ ಒಕ್ಕೂಟವು ಲೀಟರ್ಗೆ 36 ರೂಪಾಯಿ ನೀಡುತ್ತಿರುತ್ತದೆ .ಕೋಲಾರದಲ್ಲಿ 34.95 ರೂಪಾಯಿ ನೀಡಲಾಗಿರುತ್ತದೆ ಹೀಗೆ ಹಾಲು ಒಕ್ಕೂಟಗಳ ಬೆಲೆ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ.

ಈ ಮೇಲ್ಕಂಡ ಮಾಹಿತಿ ಎಲ್ಲ ರೈತರಿಗೂ ಸಹ ಉಪಯೋಗಕರವಾಗಲಿದೆ ಹಾಗಾಗಿ ಈ ಮಾಹಿತಿಯನ್ನು ರೈತರಿಗೆ ತಲುಪಿಸುವ ಮೂಲಕ ಹಾಲಿನ ದರ ಹೆಚ್ಚಳದ ಬಗ್ಗೆ ಮಾಹಿತಿಯನ್ನು ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...