News

ಮೋದಿ 1 ಲಕ್ಷ ಮೊದಲ ಕoತಿನ ಹಣ ಬಿಡುಗಡೆ ಮಾಡಿದ್ದಾರೆ : ಯಾವ ಯೋಜನೆ ತಿಳಿದುಕೊಳ್ಳಿ

Modi 1 lakh first installment money release

ನಮಸ್ಕಾರ ಸ್ನೇಹಿತರೆ ಒಂದು ಲಕ್ಷ ಫಲಾನುಭವಿ ಗಳಿಗೆ ಕೇಂದ್ರ ಸರ್ಕಾರವು ಮೊದಲ ಕಂತನ ಪ್ರಧಾನಮಂತ್ರಿ ಜನ ಜಾತಿ ಆದಿವಾಸಿನ್ಯಾಯ ಮಹಾ ಅಭಿಯಾನ ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಒಟ್ಟು 540 ಕೋಟಿ ರೂಪಾಯಿ ಹಣವನ್ನು ಮೊದಲ ಕಂತಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದಾರೆ.

Modi 1 lakh first installment money release
Modi 1 lakh first installment money release

ಪ್ರಧಾನ ಮಂತ್ರಿ ಜನ್ ಮನ್ ಯೋಜನೆ :

ಪ್ರಧಾನ ಮಂತ್ರಿ ಜನ್ ಮನ್ ಯೋಜನೆಯನ್ನು ದುರ್ಬಲ ಬುಡಕಟ್ಟು ಗುಂಪುಗಳ ಸಾಮಾಜಿಕ ಆರ್ಥಿಕ ಕಲ್ಯಾಣಕ್ಕಾಗಿ ಆರಂಭಿಸಲಾಗಿದೆ. ಸುರಕ್ಷಿತ ವಸತಿ ಶುದ್ಧ ಕುಡಿಯುವ ನೀರು, ನೈರ್ಮಲ್ಯ ಶಿಕ್ಷಣ ವಿದ್ಯುತ್ ಆರೋಗ್ಯ ಮುಂತಾದ ಮೂಲಭೂತ ಸೌಲಭ್ಯಗಳನ್ನು ಈ ಯೋಜನೆಯ ಅಡಿಯಲ್ಲಿ ಒದಗಿಸುವ ಮೂಲಕ ಬುಡಕಟ್ಟು ಜನರ ಪರಿಸ್ಥಿತಿಗಳನ್ನು ಸುಧಾರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಒಂದು ಲಕ್ಷ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಜನ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಗ್ರಾಮೀಣ ವಸತಿ ಯೋಜನೆಯ ಅಡಿಯಲ್ಲಿ ಒಟ್ಟು 540 ಕೋಟಿ ರೂಪಾಯಿಗಳ ಮೊದಲ ಕಂತನ್ನು ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು.

ವಿಡಿಯೋ ಕಾನ್ಫರೆನ್ಸಿಂಗ್ :

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸೋಮವಾರ ಮೊದಲ ಕಂಠಿನ ಹಣವನ್ನು ಬಿಡುಗಡೆ ಮಾಡಿದರು. ಪ್ರಧಾನ ಮಂತ್ರಿ ಮೋದಿಯವರು ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಮಂತ್ರಿ ಜನ್ಮನ್ ಯೋಜನೆಯ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದು ಅಡುಗೆ ಅನಿಲ ಸಂಪರ್ಕ ವಿದ್ಯುತ್ ಕೊಳವೆ ನೀರು ಮತ್ತು ವಸತಿಗೆ ಪ್ರವೇಶ ಪಡೆಯಲು ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳು ಪಡೆದ ನಂತರ ಸಕಾರಾತ್ಮಕ ಬದಲಾವಣೆ ಆಗಿರುವುದನ್ನು ಅವರ ಜೀವನದಲ್ಲಿ ಎತ್ತಿ ತೋರಿಸಿದರು. ಯಾರು ಸಹ ಕಲ್ಯಾಣ ಯೋಜನೆಗಳಿಂದ ಹೊರಗೆಡೆಯಬಾರದು ಎಂಬುದು ಸರ್ಕಾರದ ಪ್ರಯತ್ನವಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: ಅನ್ನಭಾಗ್ಯ ಯೋಜನೆ ಮಹತ್ವದ ನಿರ್ಧಾರ.! ಧಿಢೀರ್‌ ಬದಲಾವಣೆಯಾಯ್ತು ಈ ನಿಯಮ


ಗ್ರಾಮೀಣ ಅವಾಸ್ ಯೋಜನೆ :

ಕಳೆದ ನವೆಂಬರ್ 15ರಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಫಲಾನುಭವಿಗಳಿಗೆ ಮೊದಲ ಕಾಂತಿನ ಹಣವನ್ನು 540 ಕೋಟಿ ರೂಪಾಯಿಗಳಲ್ಲಿ ಬಿಡುಗಡೆ ಮಾಡಲಾಗಿದ್ದು ಜಂಜಾತಿಯ ಗೌರವ ದಿವಸ್ ಸಂದರ್ಭದಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಸಾಮಾಜಿಕ ಆರ್ಥಿಕ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.

ಹೀಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಜನ್ಮನ್ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ ಸರಿಸುಮಾರು 24,000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯನ್ನು 9 ಸಚಿವಾಲಯಗಳ ಮೂಲಕ ಅನುಷ್ಠಾನಗೊಳಿಸಲಾಗಿದ್ದು ಈ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ಸರ್ಕಾರದಿಂದ ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...