News

ದೇಶದ ಅನ್ನದಾತರಿಗೋಸ್ಕರ ಮೋದಿ ಗ್ಯಾರಂಟಿ ಯೋಜನೆ ,ಇಲ್ಲಿದೆ ಸಂಪೂರ್ಣ ಮಾಹಿತಿ

Modi Guarantee Scheme

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬತ್ತದ ಕೃಷಿಕರಿಗೆ ಸಿಹಿ ಸುದ್ದಿಯನ್ನು ನೀಡಲಾಗುತ್ತಿದ್ದು ಸುಮಾರು 12 ಲಕ್ಷ ಭತ್ತದ ರೈತರ ಬ್ಯಾಂಕ್ ಖಾತೆಗೆ ಸರ್ಕಾರವು ಭತ್ತದ ಬೋನಸ್ ಭತ್ತವನ್ನು ಜಮಾ ಮಾಡಲು ನಿರ್ಧರಿಸಿದೆ ಸುಮಾರು ಆರು ಏಳು ವರ್ಷಗಳಿಂದ ಈ ಮೊತ್ತ ಬಾಕಿ ಇದ್ದು ಭತ್ತದ ರೈತರಿಗೆ ಪ್ರತಿ ಕ್ವಿಂಟಲ್ ಗೆ ರೂ.300 ದರದಲ್ಲಿ ಮೋದಿಯವರ ಗ್ಯಾರಂಟಿ ಯೋಜನೆಯ ಅಡಿಯಲ್ಲಿ ಬೋನಸ್ ಮೊತ್ತವನ್ನು ವರ್ಗಾಯಿಸಲಾಗುತ್ತಿದೆ. ಇದರಿಂದ ಸುಮಾರು 8880 ರೂಪಾಯಿಗಳಷ್ಟು ಒಂದು ಎಕರೆ ಜಮೀನಿನ ಮಾಲೀಕರಿಗೆ ಲಾಭ ಬರಲಿದೆ.

Modi Guarantee Scheme
Modi Guarantee Scheme

ಭತ್ತದ ಬೆಳೆಗೆ ಬೋನಸ್ :

ಛತ್ತೀಸ್ಗಢದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿದ್ದು ಈಗಾಗಲೇ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಸರ್ಕಾರ ಮಾಡಿದ ಘೋಷಣೆಗಳನ್ನು ಜಾರಿಗೆ ತರಲು ಸರ್ಕಾರವು ಮುಂದಾಗಿದೆ. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಅವರಿ 25ರಂದು ಆಯೋಜಿಸಿದ್ದ ಉತ್ತಮ ಆಡಳಿತ ದಿನಾಚರಣೆಯ ಅಂಗವಾಗಿ ಭತ್ತದ ಬಾಕಿ ಬೋನಸ್ ಪಾವತಿಯ ಖಾತರಿಯನ್ನು ರೈತರಿಗೆ ನೆರವೇರಿಸಲಾಯಿತು. ಎರಡು ವರ್ಷಗಳ ಬಾಕಿ ಬೋನಸ್ ರಾಜ್ಯದ 11.76 ಲಕ್ಷ ರೈತರಿಗೆ 3716 ಕೋಟಿ 38 ಲಕ್ಷ 96,000ಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಮುಖ್ಯಮಂತ್ರಿ ವಿಷ್ಣುದೇವ ಸಾಯಿ ಈ ಮೊತ್ತವನ್ನು ವರ್ಗಾಯಿಸಿದ್ದಾರೆ.

ಇದನ್ನು ಓದಿ : ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಅರ್ಜಿ ಸಲ್ಲಿಸಿ : ಡೈರೆಕ್ಟ್ ಲಿಂಕ್ ಇಲ್ಲಿದೆ

ಎಕರೆಗೆ 8880 ರೂಪಾಯಿಗಳು :

2014-15 ಮತ್ತು 2015 16ನೇ ಸಾಲಿನ ಖಾರಿಫ್ ಮಾರುಕಟ್ಟೆಯ ಭತ್ತದ ಬಾಕಿ ಮೊತ್ತದ ಬೋನಸ್ ಮೊತ್ತವನ್ನು ಛತ್ತೀಸ್ಗಡದಲ್ಲಿ ರೈತರಿಗೆ ಪಾವತಿಸಲಾಗಿದೆ. ರೈತರಿಗೆ ಪ್ರತಿ ಕ್ವಿಂಟಲ್ ಗೆ 300 ರೂಪಾಯಿಗಳಂತೆ ಪಾವತಿಸಲಾಗಿದ್ದು 2014 15 ಮತ್ತು 2015 16ನೇ ಹಣಕಾಸು ವರ್ಷದಲ್ಲಿ ಮಾರಾಟವಾದ ಒಟ್ಟು ಭತ್ತದ ಮೇಲೆ ಈ ಪಾವತಿಯನ್ನು ಮಾಡಲಾಗಿದೆ ಎಂದು ಛತ್ತೀಸ್ಗಡ ರಾಜ್ಯ ಸಹಕಾರಿ ಬ್ಯಾಂಕುಗಳ ಅಧಿಕಾರಿಗಳ ಪ್ರಕಾರ ತಿಳಿಸಲಾಗಿದೆ. ಗರಿಷ್ಠ ಮಿತಿ 14.80 ಕ್ವಿಂಟಲ್ ಆಗ ಎಕರೆಗೆ ಆಗಿತ್ತು ಇದರ ಪ್ರಕಾರ ಪ್ರತಿ ಎಕರೆಗೆ 4400 ಗಳಂತೆ ರೈತರಿಗೆ ಎರಡು ವರ್ಷಗಳಲ್ಲಿ ಇದೀಗ ಬೋನಸ್ ಮೊತ್ತ 8880 ರೂಪಾಯಿಗಳಷ್ಟಾಗಿದೆ.

ಒಟ್ಟಾರೆಯಾಗಿ ಛತ್ತಿಸ್ಗಢದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ಬಂದ ನಂತರ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಹಾಗೆ ಒಂದೊಂದೇ ಭರವಸೆ ಯೋಜನೆಗಳನ್ನು ಜಾರಿಗೆ ತರುತ್ತಿತ್ತು. ಭತ್ತ ಬೆಳೆಯುವವರಿಗೆ ಇದೀಗ ಸುವರ್ಣ ಅವಕಾಶ ಎಂದು ಹೇಳಬಹುದು. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರಿಗೆ ಹಾಗೂ ಭತ್ತ ಕೃಷಿಕರಿಗೆ ಶೇರ್ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...