ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಬಗ್ಗೆ ತಿಳಿಸಲಾಗುತ್ತಿದೆ. ಅಯೋಧ್ಯೆಯ ರಾಜ ಎಂದೇ ಕರೆಯಲ್ಪಡುವ ಹನುಮಂತನ ಅನುಮತಿ ಪಡೆದು ರಾಮಮಂದಿರದ ಉದ್ಘಾಟನೆಯ ದಿನದಂದು ರಾಮ ಜನ್ಮಭೂಮಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೆರಳಲಿದ್ದಾರೆ. ಮೊದಲು ಹನುಮಾನ್ ಗಡಿಯಲ್ಲಿ ಪ್ರತಿಜ್ಞೆ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ ಇದಾದ ನಂತರ ರಾಮಮಂದಿರದಲ್ಲಿ ಷೋಡೋ ಶೋಪಾಚಾರ ಪೂಜೆ ನಡೆಯಲಿದೆ. ಒಟ್ಟು 40 ನಿಮಿಷಗಳು ಶೋಡೋಪಚಾರ ಪೂಜೆ ಮತ್ತು ಮಹಾಪೂಜೆ ಸೇರಿದಂತೆ ಗರ್ಭಗುಡಿಯಲ್ಲಿ ಪೂಜೆ ನಡೆಯಲಿದೆ.
ಜನವರಿ 16 ಪ್ರಾಣ ಪ್ರತಿಷ್ಠಾಪನ ಮಹೋತ್ಸವ ಆಚರಣೆಗಳು :
ಜನವರಿ 16 ರಿಂದ ಬಾಲರಾಮನ ಪ್ರಾಣ ಪ್ರತಿಷ್ಠಾಪನ ಮಹೋತ್ಸವದ ಆಚರಣೆಗಳು ಪ್ರಾರಂಭವಾಗಲಿದ್ದು ಪ್ರಧಾನ ಮೋದಿಯವರು ಪ್ರಾರ್ಥನೆಯಲ್ಲಿ ಮೊದಲು ಪ್ರತಿಜ್ಞೆ ತೆಗೆದುಕೊಂಡು ದೇಶಕ್ಕೆ ಸಮರ್ಪಿಸಲಿದ್ದಾರೆ. ಅದಾದ ನಂತರ ರಾಮಲಲ್ಲ ಶೋಡೋಷೋಪಚಾರ ಪೂಜೆ ಶುರುವಾಗಲಿದ್ದು ಒಟ್ಟು 40 ನಿಮಿಷಗಳವರೆಗೆ ಈ ಪೂಜೆಯನ್ನು ರಾಮಮಂದಿರದ ಗರ್ಭಗುಡಿಯಲ್ಲಿ ನಡೆಸಲಾಗುತ್ತದೆ. ರಾಮನಲ್ಲ ಪ್ರಾಣ ಪ್ರತಿಷ್ಠಾಪನ ಕಾರ್ಯ ಜನವರಿ 22ರಂದು 84 ಸೆಕೆಂಡುಗಳ ಅತ್ಯಂತ ಪವಿತ್ರ ಮುಹೂರ್ತದಲ್ಲಿ ಮಾಡಲಾಗುತ್ತದೆ. 12 : 29 ಎಂಟು ಸೆಕೆಂಡುಗಳಿಂದ 12:30 32 ಸೆಕೆಂಡುಗಳ ವರೆಗೆ ಈ ಮುಹೂರ್ತ ಇರುತ್ತದೆ. 11 ಜನರು ಪೂಜೆಯ ಸಮಯದಲ್ಲಿ ಗರ್ಭಗುಡಿಯಲ್ಲಿ ಇರಬಹುದಾಗಿದೆ. ಈ ಪೂಜೆಯು ಆಚಾರ್ಯ ಲಕ್ಷ್ಮಿಕಾಂತ ಮತ್ತು ಗಣೇಶ್ವರ ದ್ರಾವಿಡ್ ರವರ ನೇತೃತ್ವದಲ್ಲಿ ನಡೆಯಲಿದೆ.
ಇದನ್ನು ಓದಿ : ಅಯೋಧ್ಯೆ ಶ್ರೀರಾಮ ಮಂದಿರದ ಆಸಕ್ತಿದಾಯಕ ವಿಷಯಗಳು ಯಾರಿಗೂ ಗೊತ್ತಿಲ್ಲ? ಇಲ್ಲಿದೆ ನೋಡಿ
ಹನುಮಾನ್ ರವರಿಗೆ ಪಟ್ಟಾಭಿಷೇಕ :
ಶ್ರೀರಾಮರು ವಾಲ್ಮೀಕಿ ರಾಮಾಯಣದಲ್ಲಿ ಧಾಮಕ್ಕೆ ಹೋಗಲು ಪ್ರಾರಂಭಿಸಿದಾಗ ಅದಕ್ಕೂ ಮೊದಲು ಅವರು ಪಟ್ಟಾಭಿಷೇಕವನ್ನು ಹನುಮಾನ್ ರವರಿಗೆ ಮಾಡಿದ್ದರು ಎಂದು ಉಲ್ಲೇಖಿಸಲಾಗಿದ್ದು ಹನುಮಂತ ರವರ ಅನುಮತಿಯನ್ನು ಪಡೆಯದೆ ಶ್ರೀರಾಮನ ದರ್ಶನ ಮತ್ತು ಪೂಜೆಯ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ ಹನುಮಾನರಿಗೆ ಅಮರತ್ವವನ್ನು ತಾಯಿ ಸೀತೆಯು ದಯಪಾಲಿಸಿದ್ದರು ಈ ಕಾರಣಕ್ಕಾಗಿಯೇ ನರೇಂದ್ರ ಮೋದಿಯವರು ರಾಮ ಮಂದಿರ ದರ್ಶನಕ್ಕೂ ಮೊದಲು ಹನುಮಾನ್ ಗರ್ಭಗುಡಿಯಲ್ಲಿ ದರ್ಶನ ಪಡೆದು ಶ್ರೀರಾಮ ಮಂದಿರಕ್ಕೆ ತೆರಳಲ್ಲಿದ್ದಾರೆ.
ಹೀಗೆ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಮೊದಲು ನರೇಂದ್ರ ಮೋದಿಯವರು ಹನುಮಾನ್ ರವರ ದರ್ಶನವನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಹಿಂದುಗಳಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರೇ ಖುದ್ದಾಗಿ ಬೆಳೆ ವಿವರ ದಾಖಲಿಸಿ : ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಿ
- ಲೇಬರ್ ಕಾರ್ಡ್ ಲಿಸ್ಟ್ ಬಿಡುಗಡೆ: ಇದರಲ್ಲಿ ಹೆಸರಿರುವವರ ಕಾರ್ಡ್ ರದ್ದಾಗಲಿದೆ, ಪಟ್ಟಿ ನೋಡಿ