Blog

ಹೆಚ್ಚಿನ ಸೌಲಭ್ಯ ರೇಷನ್ ಕಾರ್ಡ್ ಹೊಂದಿರುವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

More facilities for ration card holders

ಇವತ್ತಿನ ಲೇಖನದಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಸಿಹಿ ಸುದ್ದಿಯನ್ನು ನೀಡಲಾಗುತ್ತಿದ್ದು ಈ ಎಲ್ಲ ವಸ್ತುಗಳನ್ನು ಇನ್ನು ಮುಂದೆ ಪಡಿತರ ಚೀಟಿ ಹೊಂದುವವರು ಪಡೆಯಬಹುದಾಗಿದೆ. ಕೇಂದ್ರ ಸರ್ಕಾರವು ದೇಶದಲ್ಲಿ ವಾಸಿಸುವ ಬಡ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಪರಿಚಯಿಸುತ್ತಿದೆ ಈ ಯೋಜನೆಗಳನ್ನು ರಾಜ್ಯ ಸರ್ಕಾರ ರಾಜ್ಯದ ಜನತೆಗೆ ತಲುಪಿಸುವ ಕೆಲಸ ಮಾಡುತ್ತದೆ. ಕೇಂದ್ರ ಸರ್ಕಾರದಿಂದ ಹೀಗೆ ಅನುಮೋದನೆಗೊಂಡ ಹಾಗೂ ರಾಜ್ಯ ಸರ್ಕಾರದಿಂದ ಜನರಿಗೆ ಲಭ್ಯವಾಗುತ್ತಿರುವ ಯೋಜನೆಗಳಲ್ಲಿ ಪಡಿತರ ಚೀಟಿಯನ್ನು ವಿತರಣೆಯು ಕೂಡ ಒಂದಾಗಿದೆ.

More facilities for ration card holders
More facilities for ration card holders

ಪಡಿತರ ಚೀಟಿ :

ಇಂದು ದೇಶದಲ್ಲಿ ವಾಸಿಸುವ ಎಷ್ಟೋ ಜನರು ಪಡಿತರ ಚೀಟಿ ಹೊಂದಿರುವ ಕಾರಣಕ್ಕಾಗಿ ಅತಿ ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ಪಡಿತರ ವಸ್ತುಗಳನ್ನು ಸರ್ಕಾರದಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಅಂತ್ಯೋದಯ ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಂತ್ಯದಯ ಕಾರ್ಡನ್ನು ಯಾವುದೇ ಸ್ಥಿರಾದಾಯ ಹೊಂದಿರದೆ ಇರುವ ಕುಟುಂಬಗಳಿಗೆ ವಿತರಣೆ ಮಾಡಲಾಗುತ್ತಿದ್ದು ಅಕ್ಕಿಯ ಜೊತೆಗೆ ಇತರ ಪಡಿತರ ವಸ್ತುಗಳನ್ನು ಕೂಡ ಉಚಿತವಾಗಿ ಈ ಕಾರ್ಡ್ ಹೊಂದಿರುವ ಕುಟುಂಬಗಳು ಪಡೆದುಕೊಳ್ಳಬಹುದಾಗಿದೆ.

ಅಂತ್ಯೋದಯ ಕಾರ್ಡ್ :

ಅಂತಿಯೋದಯ ಕಾರ್ಡ್ ಹೊಂದಿರುವವರಿಗೆ ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರ ವಿಶೇಷ ಸೌಲಭ್ಯವನ್ನು ನೀಡುತ್ತಿದ್ದು ಇದೀಗ ಈ ಯೋಜನೆಯನ್ನು ಮುಂದುವರಿಸಲು ಮುಂದಾಗಿದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಂತ್ಯೋದಯ ಕಾರ್ಡ್ ಇರುವವರಿಗೆ ಅಂಗವಿಕಲರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಜೊತೆಗೆ ಯಾವುದೇ ಶಾಶ್ವತ ಆದಾಯ ಇಲ್ಲದ 60 ವರ್ಷ ಮೇಲ್ಪಟ್ಟವರು ಪಡಿತರ ಚೀಟಿಯಿಂದ ಉಚಿತ ಪಡಿತರವನ್ನು ಪಡೆಯಬಹುದಾಗಿದೆ.

ಗುಲಾಬಿ ಬಣ್ಣದಲ್ಲಿ ಅಂತ್ಯೋದಯ ಕಾರ್ಡ್ ಇದ್ದು ಇದರ ಮೂಲಕ ಅರ್ಹರನ್ನು ಗುರುತಿಸಲಾಗುತ್ತದೆ. 1.89 ಕೋಟಿ ಕುಟುಂಬಗಳು ದೇಶದಲ್ಲಿ ಅಂತ್ಯೋದಯ ಕಾರ್ಡ್ ಹೊಂದಿದ್ದಾರೆ ಈ ಕಾರ್ಡ್ ಹೊಂದಿರುವವರಿಗೆ ಉಚಿತ ಅಕ್ಕಿಯ ಜೊತೆಗೆ ಸಕ್ಕರೆ ಗೋದಿ ಮತ್ತೆ ಅನೇಕ ಪಡಿತರ ವಸ್ತುಗಳನ್ನು ಕೂಡ ನೀಡಲಾಗುತ್ತಿದೆ.

ಇದನ್ನು ಓದಿ : ರೇಷನ್ ಕಾರ್ಡ್ ಬಳಕೆದಾರರಿಗೆ ಈ ಕೆಲಸ ಫೆಬ್ರವರಿ 21ರ ಒಳಗಾಗಿ ಈ ಕೆಲಸ ಮಾಡಿ ! ಇಲ್ಲ ಅಂದರೆ ರೇಷನ್ ಕಾರ್ಡ್ ರದ್ದು !!


ಯಾರಿಲ್ಲ ಅಂತ್ಯೋದಯ ಕಾರ್ಡ್ ಹೊಂದಬಹುದು :

ಅಂತ್ಯೋದಯ ಕಾರ್ಡನ್ನು ಭೂ ರಹಿತ ಕಾರ್ಮಿಕರು ಸಣ್ಣ ರೈತರು ಪೌರಕಾರ್ಮಿಕರು ಕೊಳಗೇರಿಯಲ್ಲಿ ವಾಸ ಮಾಡುವ ಕುಟುಂಬದವರು ಆಟೋ ಚಾಲಕರು ಮೊದಲಾದವರು ಪಡೆಯಬಹುದಾಗಿದೆ. 60 ವರ್ಷ ಮೇಲ್ಪಟ್ಟ ವಿಧವಾ ಮಹಿಳೆಯರು ಯಾವುದೇ ಮೂಲವಿಲ್ಲದವರು ಈ ಕಾರ್ಡ್ ಪಡೆಯಬಹುದು. ಕುಟುಂಬದ ವಾರ್ಷಿಕ ಆದಾಯವು 20,000 ಕ್ಕಿಂತ ಕಡಿಮೆ ಇರಬೇಕು.

ಹೀಗೆ ಕೇಂದ್ರ ಸರ್ಕಾರವು ಅಂತ್ಯೋದಯ ಕಾರ್ಡನ್ನು ವಿತರಿಸುತ್ತಿದ್ದು ಈ ಕಾರ್ಡ್ ಮೂಲಕ ಉಚಿತ ಪಡಿತರ ಅಕ್ಕಿಯ ಜೊತೆಗೆ ಗೋಧಿ ಸಕ್ಕರೆಯನ್ನು ನೀಡಲು ಮುಂದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು ;

Treading

Load More...