News

ಗೃಹಲಕ್ಷ್ಮಿ ನಂತರ ಕೇಂದ್ರದಿಂದ 2 ಹೊಸ ಯೋಜನೆಗಳು; ಎಷ್ಟು ಹಣ ಸಿಗುತ್ತೆ ನೋಡಿ

new projects from Center after Gruhalkshmi

ನಮಸ್ಕಾರ ಸ್ನೇಹಿತರೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರದ ನರೇಂದ್ರ ಮೋದಿಜಿ ಸರ್ಕಾರವು ಉತ್ತಮ ಯೋಜನೆಗಳನ್ನು ಸಾಕಷ್ಟು ಪರಿಚಯಿಸಿದೆ. ಅದರಲ್ಲಿ ಕೆಲವೊಂದು ಯೋಜನೆಗಳು ಹೂಡಿಕೆಯ ಯೋಜನೆಗಳಾಗಿದ್ದು ಸಣ್ಣ ಉಳಿತಾಯ ಯೋಜನೆಯಲ್ಲಿ ಮಹಿಳೆಯರು ಹೂಡಿಕೆ ಮಾಡುವುದರ ಮೂಲಕ ಆರ್ಥಿಕ ಸಬಲೀಕರಣಕ್ಕೆ ತಮ್ಮ ಭವಿಷ್ಯದ ಸ್ವಲ್ಪ ಸ್ವಲ್ಪ ಹಣವನ್ನು ಸೇವ್ ಮಾಡಿಕೊಳ್ಳಬಹುದಾಗಿದೆ.

new projects from Center after Gruhalkshmi

ಕೇಂದ್ರದಿಂದ ಸಣ್ಣ ಉಳಿತಾಯ ಯೋಜನೆಗಳು :

ಮಹಿಳೆಯರಿಗೆ ಉತ್ತಮವಾದ ಬೆನಿಫಿಟ್ ಅನ್ನು ಈ ಸಣ್ಣ ಉಳಿತಾಯ ಯೋಜನೆಗಳು ನೀಡುತ್ತವೆ. ಅದರಂತೆ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಮಹಿಳಾ ಸಮ್ಮಾನ್ ನಿಧಿ ಸರ್ಟಿಫಿಕೇಟ್ ಈ ಎರಡು ಯೋಜನೆಗಳು ಸಣ್ಣ ಉಳಿತಾಯ ಯೋಜನೆಗಳಾಗಿದ್ದು ಮಹಿಳೆಯರಿಗೆ ಈ ಯೋಜನೆಗಳಲ್ಲಿ ಕನಿಷ್ಠ ಮೊತ್ತವನ್ನು ಮಹಿಳೆಯರು ಹೂಡಿಕೆ ಮಾಡಬಹುದಾಗಿದೆ ಹಾಗೂ ಇದರಿಂದ ಹೆಚ್ಚಿನ ಲಾಭವನ್ನೇ ಪಡೆದುಕೊಳ್ಳಬಹುದು.

ಸುಕನ್ಯಾ ಸಮೃದ್ಧಿ ಯೋಜನೆ :

ಮನೆಯಲ್ಲಿ ಹುಟ್ಟಿರುವ ಮಹಾಲಕ್ಷ್ಮಿ ಅಂತಹ ಹೆಣ್ಣು ಮಗುವಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮಗುವಿಗೆ ಹತ್ತು ವರ್ಷ ತುಂಬುವುದರ ಒಳಗಾಗಿ ಆ ಮಗುವಿನ ಹೆಸರಿನಲ್ಲಿ ಮಾಡಿಸಬಹುದಾಗಿದೆ. ಈ ಯೋಜನೆಯಲ್ಲಿ ಕನಿಷ್ಠ 250ಗಳಿಗಿಂತ ಹಾಗೂ ಗರಿಷ್ಟ 1.50 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದಾಗಿತ್ತು ಹನ್ನೆರಡು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಪಾವತಿ ಮಾಡಿದರೆ ಒಂದು ಪಾಯಿಂಟ್ ಐದು ಲಕ್ಷ ರೂಪಾಯಿಗಳು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಉಳಿತಾಯವಾಗುತ್ತದೆ.

ಇದನ್ನು ಓದಿ : ಈ ತಿಂಗಳು ಅಕ್ಕಿಯ ಜೊತೆಗೆ 5 ವಸ್ತುಗಳನ್ನು ಉಚಿತವಾಗಿ ಕಡ್ಡಾಯವಾಗಿ ನೀಡಲಾಗುತ್ತದೆ

ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ :

ಕೇಂದ್ರದ ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ ಕೂಡ ಮಹಿಳೆಯರಿಗಾಗಿರುವ ಸಣ್ಣ ಉಳಿತಾಯ ಯೋಜನೆಯಾಗಿದ್ದು ಯಾವುದೇ ಮಹಿಳೆಯರು ಅಥವಾ ಕೆಲಸಕ್ಕೆ ಹೋಗುವ ಯುವತಿಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಎರಡು ಲಕ್ಷ ರೂಪಾಯಿಗಳಷ್ಟು ವಾರ್ಷಿಕವಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 7.5% ರಷ್ಟು ಬಡ್ಡಿಯನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ. ಶೇಖಡ 40ರಷ್ಟು ಮಹಿಳೆಯರು ಮೊದಲ ವರ್ಷದಲ್ಲಿ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಬಹುದು.


ಹೀಗೆ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿಯೇ ಎರಡು ಸಣ್ಣ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಆರ್ಥಿಕವಾಗಿ ಸಬಲರಾಗಬಹುದಾಗಿದೆ. ಹಾಗಾಗಿ ಮಹಿಳೆಯರಿಗಾಗಿಯೇ ಇರುವ ಈ ಎರಡು ಯೋಜನೆಗಳ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...