ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಆಹಾರ ಇಲಾಖೆಯು ಪಡಿತರ ಚೀಟಿಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಲಕ್ಷಾಂತರ ಕಾರ್ಡ್ದಾರರಿಗೆ ರೇಷನ್ ಅಕ್ಕಿಯನ್ನು ರದ್ದುಗೊಳಿಸಲು ಆಹಾರ ಇಲಾಖೆಯು ಹೊಸ ನಿಯಮ ಜಾರಿಗೆ ತರುವುದರಲ್ಲಿ ನಿರ್ಧರಿಸಿದೆ. ಪಡಿತರ ಧಾನ್ಯ ಪಡೆಯಲು ರಾಜ್ಯದಲ್ಲಿ ಲಕ್ಷಾಂತರ ಪಡಿತರ ಚೀಟಿದಾರರು ನಿರಾಸಕ್ತಿ ತೋರಿಸುತ್ತಿದ್ದು ಅಂಥವರನ್ನು ಗುರುತಿಸಿ ಅವರ ರೇಷನ್ ಕಾರ್ಡ್ ಅನ್ನು ಹಾಗೂ ಅದರಿಂದ ಪಡೆಯುತ್ತಿರುವ ಆಹಾರ ಧಾನ್ಯಗಳನ್ನು ರದ್ದುಗೊಳಿಸಲು ಆಹಾರ ಇಲಾಖೆ ನಿರ್ಧರಿಸಿದೆ. ಶೀಘ್ರದಲ್ಲಿಯೇ ಆಹಾರ ಇಲಾಖೆಯಿಂದ ಈ ಹೊಸ ನಿಯಮ ಜಾರಿಯಾಗಲಿದೆ.
ರೇಷನ್ ಕಾರ್ಡ್ ಅಕ್ಕಿ ಯಾರಿಗೆಲ್ಲ ರದ್ದಾಗುತ್ತದೆ :
116 ಕೋಟಿ ಬಿಪಿಎಲ್ ಕಾರ್ಡನ್ನು ರಾಜ್ಯದಲ್ಲಿ ಹೊಂದಿದ್ದು 24 ಲಕ್ಷ ಎಪಿಎಲ್ ಕಾರ್ಡನ್ನು ಹಾಗೂ ಅಂತ್ಯೋದಯ ಕಾರ್ಡನ್ನು 10.88 ಲಕ್ಷ ಜನರು ಹೊಂದಿರುವವರಿದ್ದಾರೆ. ಲಕ್ಷಾಂತರ ಜನರು ಪಡಿತರ ಧಾನ್ಯವನ್ನು ಪಡೆಯುತ್ತಿಲ್ಲ 3.32 ಲಕ್ಷ ಬಿಪಿಎಲ್ ಕಾರ್ಡ್ ಹೊಂದಿರುವವರು ಮತ್ತು 14826 ಅಂತಿಯೋದಯ ಕಾರ್ಡ್ ಹೊಂದಿರುವವರು ಆಹಾರ ಧಾನ್ಯವನ್ನು ಸತತ ಆರು ತಿಂಗಳಿನಿಂದ ಪಡೆಯದಿರುವುದು ಸರ್ಕಾರಕ್ಕೆ ತಿಳಿದಿದೆ.
ಇದನ್ನು ಓದಿ : ಕೆಸಿಸಿ ರೈತರ 1ಲಕ್ಷ ಸಾಲ ಮನ್ನಾ ಪಟ್ಟಿ ಬಿಡುಗಡೆ : ತಮ್ಮ ಹೆಸರನ್ನು ರೈತರು ಚೆಕ್ ಮಾಡಿ ಕೊಳ್ಳಿ
60 ಕೋಟಿ ರೂಪಾಯಿ ನಷ್ಟ :
ಅನೇಕರು ಎಪಿಎಲ್ ರೇಷನ್ ಕಾರ್ಡ್ ಗಳನ್ನು ಗುರುತಿನ ಚೀಟಿಯಾಗಿ ಬಳಸಿಕೊಂಡಿದ್ದು ಅಕ್ಕಿಯನ್ನು ಹೊರತುಪಡಿಸಿ ಸರ್ಕಾರದ ಇತರ ಸರಕಾರಿ ಸೌಲಭ್ಯಗಳನ್ನು ಮಾತ್ರ ಪಡೆಯುತ್ತಿದ್ದಾರೆ. ಅದೇ ರೀತಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಪಿಂಚಣಿ ಹಾಗೂ ಆರ್‌ಟಿಇ ಅಡಿಯಲ್ಲಿ ಶಿಕ್ಷಣಕ್ಕೆ ಸೇರಿದಂತೆ ಬಿಪಿಎಲ್ ಕಾರ್ಡ್ಗಳನ್ನು ಸರ್ಕಾರಿ ಸೌಕರ್ಯ ಪಡೆದುಕೊಳ್ಳಲು ಲಕ್ಷಾಂತರ ಜನರು ಬಳಸಿಕೊಳ್ಳುತ್ತಿದ್ದು ಹೊಸದಾಗಿ ಅರ್ಜಿಯನ್ನು ಸಲ್ಲಿಸುವವರಿಗೆ ಇನ್ನು ಮುಂದೆ ಗುಂಪಿನ ಚೀಟಿಗಾಗಿ ಪ್ರತ್ಯೇಕವಾಗಿ ನಮೂದಿಸಿ ಮಂಜೂರು ಮಾಡುವಂತಹ ಚಿಂತನೆಯನ್ನು ನಡೆಸಿದ್ದು, ಅನರ್ಹರು ರೇಷನ್ ಕಾರ್ಡನ್ನು ಬಳಸಿಕೊಳ್ಳುತ್ತಿರುವುದರಿಂದ ವಾರ್ಷಿಕವಾಗಿ ಸರ್ಕಾರಕ್ಕೆ 60 ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗುತ್ತಿದೆ.
ಹೀಗೆ 24 ಲಕ್ಷ ಎಪಿಎಲ್ ರೇಷನ್ ಕಾರ್ಡ್ ಗಳು ರಾಜ್ಯಾದ್ಯಂತ ಇದ್ದು ಇವುಗಳಲ್ಲಿ ಶೇಕಡ 80ರಷ್ಟು ಜನರು ಅಕ್ಕಿಯನ್ನು ಪಡೆಯುತ್ತಿಲ್ಲ ಆದ್ದರಿಂದ ಮುಂದಿನ ತಿಂಗಳಿನಿಂದಲೇ ಅವರಿಗೆ ಅಕ್ಕಿ ಬಂದು ಮಾಡುವ ಸಾಧ್ಯತೆ ಇದೆ ಎಂದು ಆಹಾರ ಇಲಾಖೆ ತಿಳಿಸಿದೆ ಸರ್ಕಾರ ಹೀಗೆ ಮಾಡುವುದರಿಂದ ದೊಡ್ಡ ನಷ್ಟವಾಗುತ್ತದೆ ಎಂಬುದು ನ್ಯಾಯಬೆಲೆ ಅಂಗಡಿ ಮಾಲೀಕರ ಆತಂಕವಾಗಿದೆ. ಅದರಂತೆ ಈ ಮಾಹಿತಿಯನ್ನು ನಿಮ್ಮ ಎಪಿಆರ್ ರೇಷನ್ ಕಾರ್ಡ್ ಹೊಂದಿರುವ ಜನರಿಗೆ ಸರ್ಕಾರದಿಂದ ಹೊಸ ನಿಯಮ ಜಾರಿಯಾಗಲಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ ಸರ್ಕಾರ : ಗ್ಯಾಸ್ ಸಿಲಿಂಡರ್ ಎಷ್ಟು ಕಡಿಮೆ ಆಯಿತು ನೋಡಿ
- ಜನವರಿಯಿಂದ ಮೂರು ದಿನಗಳವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಆಗುತ್ತೆ