News

ಇನ್ನು ಮುಂದೆ ಉಚಿತ ಪ್ರಯಾಣ ಮಹಿಳೆಯರಿಗೆ ಸಾಧ್ಯವಿಲ್ಲ, ಹಣ ನೀಡಿಯೇ ಹೋಗಬೇಕು

No more free travel for women in Karnataka

ನಮಸ್ಕಾರ ಸ್ನೇಹಿತರೆ ರಾಜ್ಯದಲ್ಲಿ ಶಕ್ತಿ ಯೋಜನೆಯ ಯಶಸ್ವಿಯಾಗಿ ಜಾರಿಯಾಗುತ್ತಿದ್ದಂತೆ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಮಹಿಳೆಯರ ಪ್ರಮಾಣವೂ ಸಹ ಅಧಿಕವಾಗುತ್ತಿದೆ. ಇದೇ ನಿಟ್ಟಿನಲ್ಲಿ ಸರ್ಕಾರಿ ಬಸ್ ಗಳು ಖಾಲಿಯಾಗಿ ಇರುತ್ತಿದ್ದ ಇವುಗಳು ತುಂಬಿ ಹರಿಯುತ್ತಿವೆ. ಅದೇ ರೀತಿ ಹೆಚ್ಚುವರಿ ಬಸ್ ಮತ್ತು ಸಿಬ್ಬಂದಿ ನೇಮಕ ಮಾಡುವ ಬಗ್ಗೆ ಶಕ್ತಿ ಯೋಜನೆಯ ಯಶಸ್ವಿಗೊಳಿಸಲು ಸರ್ಕಾರವು ತೀರ್ಮಾನವನ್ನು ಕೈಗೊಂಡಿದ್ದು ಮಹಿಳೆಯರಿಗೆ ಇದೀಗ ಇದರ ಬೆನ್ನಲ್ಲೇ ಶಕ್ತಿ ಯೋಜನೆಯ ಮಿತಿ ನೆನಪಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.

No more free travel for women in Karnataka
No more free travel for women in Karnataka

ಶಕ್ತಿ ಯೋಜನೆ ಕೆಲವೊಂದು ಬಸ್ಗಳಲ್ಲಿ ಸಾಧ್ಯವಿಲ್ಲ :

ಸರ್ಕಾರಿ ಸ್ವಾಮ್ಯದ ಎಲ್ಲಾ ಬಸ್ಗಳಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ ಉಚಿತ ಪ್ರಯಾಣದ ಅವಕಾಶವೂ ಕೆಲವೊಂದು ಬಸ್ಗಳಲ್ಲಿ ಇರದ ಕಾರಣ ಈ ಬಗ್ಗೆ ಮಹಿಳೆಯರು ಅರಿವನ್ನು ಹೊಂದುವುದು ಮುಖ್ಯವಾಗಿರುತ್ತದೆ. ಪಲ್ಲಕ್ಕಿ ಬಸ್ ಈಗಾಗಲೇ ರಾಜ್ಯದಲ್ಲಿ ಹೋರಾಟಕ್ಕೆ ಮಾನ್ಯತೆಯನ್ನು ಸಿಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಸ್ಸನ್ನು ವಿಧಾನಸೌಧದ ಮುಂಭಾಗದಲ್ಲಿ ಚಾಲನೆಯನ್ನು ನೀಡಿದ್ದಾರೆ. ಆದರೆ ಪ್ರತಿ ಪ್ರಯಾಣಿಕರು ಕೂಡ ಈ ಬಸ್ ಶಕ್ತಿ ಯೋಜನೆಯ ಅಡಿಯಲ್ಲಿ ಬರದ ಕಾರಣ ಟಿಕೆಟ್ ಹಣ ನೀಡಿದೆ ಕಡ್ಡಾಯವಾಗಿ ಪ್ರಯಾಣ ಮಾಡಬೇಕಾಗುತ್ತದೆ.

ಪಲ್ಲಕ್ಕಿ ಯೋಜನೆ :

ಸಾಮಾನ್ಯ ಬಸ್ನೊಂದಿಗೆ ನಾನ್ ಎಸಿ ಬಸ್ ಗಳು ಕೂಡ ಕೆಎಸ್ಆರ್ಟಿಸಿನಲ್ಲಿ ಜನರಿಗೆ ಚಿರಪರಿಚಿತವಾಗಿದ್ದು ವರ್ಷಗಳಾಗಿದ್ದರು ಸಹ ನಾನ್ ಎಸಿ ಬಸ್ ಗಳಿಗೆ ಹೆಸರಿಟ್ಟಿರಲಿಲ್ಲ. ಆದರೆ ರಾಜ್ಯ ಸರ್ಕಾರವು ಈಗ ಈ ಯೋಜನೆಯ ಮೂಲಕ ಹೆಸರನ್ನು ನೀಡಿದ್ದು ಪಲ್ಲಕ್ಕಿ ಎಂಬ ಹೆಸರಿನ ಮೂಲಕ ನಾನು ಎಸಿ ಸೇವೆಯನ್ನು ಮತ್ತೆ ಪುನರ್ ಆರಂಭ ಮಾಡಿದೆ. ಮಹಿಳೆಯರ ಶಕ್ತಿ ಯೋಜನೆಯಲ್ಲಿ ಇದು ಅನ್ವಯವಾಗುವುದಿಲ್ಲ ಹಾಗಾಗಿ ಮಹಿಳೆಯರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಸೂಚನೆಯನ್ನು ನೀಡಿದ್ದು ಇದರಲ್ಲಿ ಟಿಕೆಟ್ ಪ್ರಯಾಣ ಮಾಡಬೇಕೆಂದು ತಿಳಿಸಿದರು.

ಇದನ್ನು ಓದಿ : ತುಂತುರು ಹನಿ ನೀರಾವರಿ ಯೋಜನೆಗೆ ಸಹಾಯಧನ ಪಡೆದುಕೊಳ್ಳುವ ಮಾಹಿತಿ

ಪಲ್ಲಕ್ಕಿ ಬಸ್ ನ ವಿಶೇಷತೆಗಳು :


ಅತ್ಯಂತ ಲಕ್ಷರಿ ವಿಧಾನದಲ್ಲಿ ಬಸ್ಸನ್ನು ಮಾಡಲಾಗಿದ್ದು ಇದರಲ್ಲಿ ಪ್ರಯಾಣಿಕರಿಗೆ ಆಡಿಯೋ ಸ್ಪೀಕರ ಮೂಲಕ ಗೈಡ್ಲೈನ್ ನೀಡಲಾಗುತ್ತದೆ. ಹೆಚ್ ಬಿ ಎಂಜಿನ್ ಅನ್ನು ಬಿ ಎಸ್ ಸಿಕ್ಸ್ ಮಾದರಿಯಲ್ಲೀ ಅಳವಡಿಕೆ ಮಾಡಲಾಗಿದೆ. ಅಲ್ಲದೆ ಈ ಬಸ್ ನಲ್ಲಿ ಮಲಗಲು ದಿಂಬಿನ ವ್ಯವಸ್ಥೆ, ಚಪ್ಪಲಿ ನೀರಿನ ಬಾಟಲ್ ಇಡಲು ಪ್ರತ್ಯೇಕ ಸ್ಥಳಾವಕಾಶವನ್ನು ಸಹ ನೀಡಲಾಗಿದೆ. ಡಿಜಿಟಲ್ ಗಡಿಯಾರದ ಜೊತೆಗೆ ಎಲ್ಇಡಿ ಫ್ಲೋರ್ ಸಹ ಇರಲಿದ್ದು ಹೈಟಿಕ್ ಕ್ಯಾಮೆರಾ ವನ್ನು ಚಾಲಕರಿಗೆ ಮತ್ತು ನಿರ್ವಾಹಕರಿಗೆ ಪ್ರಯಾಣಿಕರ ಬಗ್ಗೆ ತಿಳಿಸಲು ಅಳವಡಿಕೆ ಮಾಡಲಾಗಿದೆ.

ಮೊಬೈಲ್ ಸ್ಟ್ಯಾಂಡನ್ನು ಸಹ ಇದರಲ್ಲಿ ಅಳವಡಿಕೆ ಮಾಡಲಾಗಿದ್ದು 30 ಸ್ಲೀಪರ್ ಇರಲಿದೆ ಜೊತೆಗೆ ಸೀಟ್ ನಂಬರ್ ಮೇಲೆ ಎಲ್ಇಡಿ ಯನ್ನು ಸಹ ಅಳವಡಿಕೆ ಮಾಡಲಾಗುತ್ತದೆ. ಅದರ ಜೊತೆಗೆ ಪ್ರತೀ ಸೀಟಿಗೆ ಮೊಬೈಲ್ ಮತ್ತು ಲ್ಯಾಪ್ಟಾಪ್ ಚಾರ್ಜಿಂಗ್ ವ್ಯವಸ್ಥೆಯು ಸಹ ಈ ಬಸ್ ನಲ್ಲಿ ಅಳವಡಿಸಲಾಗಿದೆ.

ಹೀಗೆ ರಾಜ್ಯ ಸರ್ಕಾರವು ನಾನ್ ಎಸಿ ಬಸ್ಸನ್ನು ಬಿಡುಗಡೆ ಮಾಡಿದ್ದು ಈ ಬಸ್ಸಿಗೆ ಟಿಕೆಟ್ ವಿತರಿಸಿ ಮಹಿಳೆಯರು ಪ್ರಯಾಣ ಮಾಡಬೇಕು ಈ ಬಸ್ ಶಕ್ತಿ ಯೋಜನೆಯ ಅಡಿಯಲ್ಲಿ ಬರುವುದಿಲ್ಲ. ಹಾಗಾಗಿ ಶಕ್ತಿ ಯೋಜನೆ ಅಡಿಯಲ್ಲಿ ಬರೆದ ಈ ಬಸ್ಗೆ ಸಾಕಷ್ಟು ಸೌಲಭ್ಯಗಳನ್ನು ರಾಜ್ಯ ಸರ್ಕಾರವು ನೀಡಿದ್ದು ಪ್ರಯಾಣಿಕರು ಈ ಎಲ್ಲಾ ಸೌಲಭ್ಯಗಳ ಪ್ರಯೋಜನವನ್ನು ಈ ಬಸ್ನಿಂದ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ರಾಜ್ಯ ಸರ್ಕಾರವು ಪರಿಚಯಿಸಿರುವ ಪಲ್ಲಕ್ಕಿ ಯೋಜನೆಯ ಈ ಬಸ್ ನ ಬಗ್ಗೆ ತಿಳಿಸಿ.

ಇತರೆ ವಿಷಯಗಳು :

Treading

Load More...